ಸಿನಿಮಾ ಸುದ್ದಿ

ರಾಜಿ ಮಾಡಿಕೊಂಡು ಪ್ರಕರಣ ಇತ್ಯರ್ಥ ಮಾಡಿಕೊಳ್ಳಿ: ಸೈಫ್ ಗೆ ನ್ಯಾಯಾಲಯ ಸಲಹೆ

ಬಾಲಿವುಡ್ ನಟ ಸೈಫ್ ಅಲಿಖಾನ್ ಅನಿವಾಸಿ ಭಾರತೀಯನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕರಣ ಸಂಬಂಧ ಇಬ್ಬರು ವ್ಯಕ್ತಿಗಳು ರಾಜಿ ಮಾಡಿಕೊಳ್ಳುವಂತೆ ಸಲಹೆ ನೀಡಿದೆ...

ರಾಜಿ ಮಾಡಿಕೊಂಡು ಪ್ರಕರಣ ಇತ್ಯರ್ಥ ಮಾಡಿಕೊಳ್ಳಿ: ಸೈಫ್ ಗೆ ನ್ಯಾಯಾಲಯ ಸಲಹೆ
ಬಾಲಿವುಡ್ ನಟ ಸೈಫ್ ಅಲಿಖಾನ್
Published On :

ಮುಂಬೈ: ಬಾಲಿವುಡ್ ನಟ ಸೈಫ್ ಅಲಿಖಾನ್ ಅನಿವಾಸಿ ಭಾರತೀಯನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕರಣ ಸಂಬಂಧ ಇಬ್ಬರು ವ್ಯಕ್ತಿಗಳು ರಾಜಿ ಮಾಡಿಕೊಳ್ಳುವಂತೆ ಸಲಹೆ ನೀಡಿದೆ.

ಈ ಕುರಿತಂತೆ ಮಾತನಾಡಿರುವ ನಟಿ ಸೈಫ್ ಅಲಿಖಾನ್ ಪರ ವಕೀಲ ಗಿರೀಶ್ ಕುಲಕರ್ಣಿ ಅವರು, ಅನಿವಾಸಿ ಭಾರತೀಯ ಇಕ್ಬಾಲ್ ಶರ್ಮಾ ಅವರು ರಾಜಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಪ್ರಕರಣ ಸಂಬಂಧ ಇಬ್ಬರು ವ್ಯಕ್ತಿಗಳು ರಾಜಿ ಮಾಡಿಕೊಳ್ಳುವಂತೆ ನ್ಯಾಯಾಲಯ ಸಲಹೆ ನೀಡಿದ್ದು, ಪ್ರಕರಣವನ್ನು ಸಂಧಾನ ಕೇಂದ್ರಕ್ಕೆ ರವಾನಿಸಿದೆ ಎಂದು ಹೇಳಿದ್ದಾರೆ.

ವಿಚಾರಣೆ ವೇಳೆ ನಟ ಸೈಫ್ ಅಲಿಖಾನ್ ಹಾಗೂ ಅವರ ಇಬ್ಬರು ಗೆಳಯರು ಹಾಜರಿದ್ದರು. ಆದರೆ, ಇಕ್ಬಾಲ್ ಶರ್ಮಾ ಅವರು ವ್ಯವಹಾರ ಸಂಬಂಧ ಕೆಲಸವಿದ್ದರಿಂದ ವಿಚಾರಣೆ ಹಾಜರಾಗಿರಲಿಲ್ಲ. ಹೀಗಾಗಿ ಪ್ರಕರಣವನ್ನು ಸಂಧಾನ ಸಂಸ್ಥೆಗೆ ರವಾನಿಸಲಾಗಿದೆ. ಸಂಧಾನ ಸಮಿತಿಯು ಜುಲೈ 27 ರಂದು ಮಾತುಕತೆ ನಡೆಸಲಿದೆ. ಈ ವೇಳೆ ಇಬ್ಬರು ವ್ಯಕ್ತಿಗಳು ಸಂಧಾನ ಮಾಡಿಕೊಂಡಿದ್ದೇ ಆದರೆ ಪ್ರಕರಣ ಇಲ್ಲಿಗೆ ಮುಕ್ತಾವಾಗುತ್ತದೆ. ಇಲ್ಲದೇ ಹೋದರೆ ಪ್ರಕರಣ ಸಂಬಂಧ ಮತ್ತೆ ವಿಚಾರಣೆ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ.

2012 ಫೆಬ್ರವರಿ 22 ರಂದು ಸೈಫ್ ಅಲಿಖಾನ್ ಪತ್ನಿ ಕರೀನಾ ಕರಿಷ್ಮಾ, ಮಲೈಕಾ ಅರೋರಾ ಖಾನ್ ಮತ್ತು ಇತರೆ ಸ್ನೇಹಿತರೊಂದಿಗೆ ತಾಜ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅದೇ ದಿನ ಅನಿವಾಸಿ ಭಾರತೀಯ ಇಕ್ಬಾಲ್ ಶರ್ಮಾ ಅವರು ತಮ್ಮ ಕುಟುಂಬ ಸಮೇತ ರಾತ್ರಿ ಭೋಜನಕ್ಕಾಗಿ ಈ ಹೋಟೆಲ್‌ಗೆ ಬಂದಿದ್ದಾರೆ.ಈ ಸಂದರ್ಭದಲ್ಲಿ ಪಕ್ಕದ ಟೇಬಲ್‌ನಲ್ಲಿದ್ದ ಸೈಫ್ ತಮ್ಮ ಸ್ನೇಹಿತರೊಂದಿಗೆ ಕೂಗಾಡುತ್ತಿದ್ದರು. ಈ ವೇಳೆ ಶಾಂತಿ ಬೇಕಾದರೆ ಗ್ರಂಥಾಲಯಕ್ಕೆ ಹೋಗು ಎಂದು ಇಕ್ಬಾಲ್ ಶರ್ಮಾ ಸೈಫ್ ಹೇಳಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಸುಮ್ಮನಿರಿ ಎಂದ ಮಾತ್ರಕ್ಕೆ ಸೈಫ್ ಮತ್ತು ಅವರ ಇಬ್ಬರು ಸ್ನೇಹಿತರು ನನಗೂ ಹಾಗೂ ನನ್ನ ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ತದ ನಂತರ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಇಕ್ಬಾಲ್ ಶರ್ಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಸೈಫ್ ಅಲಿಖಾನ್ ಹಾಗೂ ಅವರ ಇಬ್ಬರು ಗೆಳೆಯರ ವಿರುದ್ದ ಸೆಕ್ಷನ್ 325 (ಹಲ್ಲೆ) ಮತ್ತು 34 (ಸಾಮಾನ್ಯ ಉದ್ದೇಶ) ಪ್ರಕರಣ ದಾಖಲಾಗಿತ್ತು. ನಂತರ ಜಾಮೀನಿನ ಮೇಲೆ ಎಲ್ಲರೂ ಹೊರ ಬಂದಿದ್ದರು.

ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಸ್ಥಳೀಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕರಣ ಸಂಬಂಧ ಈ ವರೆಗೂ ನಡೆದ ಯಾವುದೇ ವಿಚಾರಣೆಯಲ್ಲೂ ಹಾಜರಾಗದ ಕಾರಣ ಮಾ. 19 ರಂದು ನಡೆದ ವಿಚಾರಣೆ ವೇಳೆ ಮುಂದಿನ ವಿಚಾರಣೆಯಲ್ಲಿ ಸೈಫ್ ಅಲಿಖಾನ್ ಹಾಜರಾಗುವಂತೆ ಸೂಚನೆ ನೀಡಿತ್ತು. ಏಪ್ರಿಲ್ 7 ನಿನ್ನೆ ನಡೆದ ವಿಚಾರಣೆ ವೇಳೆ ಸೈಫ್ ಅವರು ಶೂಟಿಂಗ್ ಇದ್ದ ಕಾರಣ ವಿದೇಶಕ್ಕೆ ಹೋಗಿದ್ದಾರೆ ಎಂದು ಸೈಫ್ ಪರ ವಕೀಲರು ಸಬೂಬು ಹೇಳಿದ್ದರು. ಈ ಪ್ರತಿಕ್ರಿಯೆಗೆ ತೀವ್ರ ಕೋಪಗೊಂಡ ನ್ಯಾಯಾಲಯವು ಮುಂದಿನ ವಿಚಾರಣೆಗೆ ಸೈಫ್ ಅಲಿಖಾನ್ ಹಾಜರಾಗದಿದ್ದರೆ ವಾರೆಂಟ್ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ಸಂದೇಶವನ್ನು ನೀಡಿದ್ದರು. ನ್ಯಾಯಾಲಯ ಎಚ್ಚರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಸೈಫ್ ಅಲಿ ಖಾನ್ ಅವರು ಇಂದು ನ್ಯಾಯಲಯದ ವಿಚಾರಣೆಗೆ ಹಾಜರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.