ಸಿನಿಮಾ ಸುದ್ದಿ

ಬೆತ್ತನಗೆರೆ ಟ್ರೇಲರ್ ಅನಾವರಣ ಮಾಡಲಿರುವ ಆರ್ ಜಿ ವಿ

ಮೋಹನ್ ಗೌಡ ಅವರ ಮುಂದಿನ ಸಿನೆಮಾ 'ಬೆತ್ತನಗೆರೆ'ಯ ಟ್ರೇಲರ್ ಅನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅನಾವರಣ ಮಾಡಲಿದ್ದಾರೆ. ಭೂಗತ

ಬೆತ್ತನಗೆರೆ ಟ್ರೇಲರ್ ಅನಾವರಣ ಮಾಡಲಿರುವ ಆರ್ ಜಿ ವಿ
'ಬೆತ್ತನಗೆರೆ' ಸಿನೆಮಾದ ಭಿತ್ತಿಚಿತ್ರ
Published On :

ಬೆಂಗಳೂರು: ಮೋಹನ್ ಗೌಡ ಅವರ ಮುಂದಿನ ಸಿನೆಮಾ 'ಬೆತ್ತನಗೆರೆ'ಯ ಟ್ರೇಲರ್ ಅನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅನಾವರಣ ಮಾಡಲಿದ್ದಾರೆ. ಭೂಗತ ಸಿನೆಮಾಗಳೆಂದರೆ ಆರ್ ಜಿ ವಿ ಅವರಿಗೆ ಮೊದಲಿನಿಂದಲೂ ಆಸಕ್ತಿ. ಬೆತ್ತನಗೆರೆ ಸೀನ ಮತ್ತು ಶಂಕರ ಇವರ ನಿಜಜೀವನ ಆಧಾರಿತ ಈ ಸಿನೆಮಾದ ಕಥೆ ಕೇಳಿ ಆರ್ ಜಿ ವಿ ಥ್ರಿಲ್ ಆದರಂತೆ. ಆದುದರಿಂದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬರಲು ಒಪ್ಪಿಕೊಂಡರು ಎಂದು ತಿಳಿದುಬಂದಿದೆ.

ಆರ್ ಜಿ ವಿ ಸದ್ಯಕ್ಕೆ ಶಿವರಾಜ್ ಕುಮಾರ್ ಅಭಿನದ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದು ಕರ್ನಾಟಕದಲ್ಲೇ ಇದ್ದಾರೆ.

ಸುಮಂತ್ ಶೈಲೇಂದ್ರ, ಅಕ್ಷಯ್, ವಿನೋದ್ ಕಾಂಬ್ಲಿ, ಅವಿನಾಶ್ ಇವರು ಬೆತ್ತನಗೆರೆ ಸಿನೆಮಾದ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.