'ಜುರಾಸಿಕ್ ವರ್ಲ್ಡ್' ಮೂರನೆ ಅತಿ ದೊಡ್ಡ ಜಾಗತಿಕ ಸಿನೆಮಾ
ಜೇಮ್ಸ್ ಕ್ಯಾಮರಾನ್ ಅವರ 'ಅವತಾರ್' ಮತ್ತು 'ಟೈಟಾನಿಕ್' ನಂತರ 'ಜುರಾಸಿಕ್ ವರ್ಲ್ಡ್' ವಿಶ್ವ ಸಿನೆಮಾ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನೆಮಾಗಳಲ್ಲಿ

ಲಾಸೇಂಜಲಿಸ್: ಜೇಮ್ಸ್ ಕ್ಯಾಮರಾನ್ ಅವರ 'ಅವತಾರ್' ಮತ್ತು 'ಟೈಟಾನಿಕ್' ನಂತರ 'ಜುರಾಸಿಕ್ ವರ್ಲ್ಡ್' ವಿಶ್ವ ಸಿನೆಮಾ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನೆಮಾಗಳಲ್ಲಿ ಮೂರನೆ ಸ್ಥಾನಕ್ಕೆ ಜಿಗಿದಿದೆ.
ಡೈನೋಸಾರ್ ಥ್ರಿಲ್ಲರ್ ಸಿನೆಮಾ ೧.೫೩ ಬಿಲಿಯನ್ ಡಾಲರ್ ಗಳಿಗೆ ಕಂಡು 'ಅವೆಂಜರ್ಸ್' ಸಿನೆಮಾವನ್ನು ಹಿಂದಿಕ್ಕಿದೆ. 'ಜುರಾಸಿಕ್ ವರ್ಲ್ಡ್' ನಿರ್ಮಾಣ ಸಂಸ್ಥೆ ಯೂನಿವರ್ಸಲ್ ಸ್ಟುಡಿಯೋ ವಿಶ್ವದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮೊದಲ ಐದು ಸಿನೆಮಾಗಳನ್ನು ನಿರ್ಮಿಸಿದ ಹೆಗ್ಗಳಿಕೆ ಕೂಡ ದಾಖಲಿಸಿದೆ. ಇದೆ ವರ್ಷ ಈ ಸಂಸ್ಥೆ ನಿರ್ಮಿಸಿದ 'ಫ್ಯೂರಿಯಸ್ ೭' ಕೂಡ ಜಾಗತಿಕವಾಗಿ ೧.೫೧ ಬಿಲಿಯನ್ ಡಾಲರ್ ಗಳಿಕೆ ಕಂಡಿತ್ತು.
ಕಾಲಿನ್ ಟ್ರೆವೊರ್ರೋ ನಿರ್ದೇಶನದ 'ಜುರಾಸಿಕ್ ವರ್ಲ್ಡ್', 'ಜುರಾಸಿಕ್ ಪಾರ್ಕ್' ಸಿನೆಮಾಗಳ ಸರಣಿಯಲ್ಲಿ ನಾಲ್ಕನೆಯದು. ಕ್ರಿಸ್ ಪ್ಯಾಟ್, ಬ್ರೈಸ್ ಡಲ್ಲಾಸ್ ಮತ್ತು ಭಾರತೀಯ ತಾರೆ ಇರ್ಫಾನ್ ಕಾನ್ ಸಿನೆಮಾದ ಮುಖ್ಯ ನಟರು.
'ಜುರಾಸಿಕ್ ವರ್ಲ್ಡ್' ಜಪಾನಿನಲ್ಲಿ ಆಗಸ್ಟ್ ೫ ರಂದು ಬಿಡುಗಡೆಯಾಗಲಿದೆ. ಅತಿ ದೊಡ್ಡ ಸಿನೆಮಾ ಮಾರುಕಟ್ಟೆಗಳಾದ ಅಮೇರಿಕಾ ಮತ್ತು ಚೈನಾದಲ್ಲಿ ಟಿಕೆಟ್ ಮಾರಾಟ ಕುಂಠಿತವಾಗಿರುವುದರಿಂದ ಇದು ಟೈಟಾನಿಕ್ ದಾಖಲೆ (೨.೧೮ ಬಿಲಿಯನ್ ಡಾಲರ್) ಅಥವಾ ಅವತಾರ್ ಗಳಿಕೆಗಳನ್ನು (೨.೭೯ ಬಿಲಿಯನ್ ಡಾಲರ್) ಮುರಿಯುವುದು ಕಷ್ಟ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


