ಸಿನಿಮಾ ಸುದ್ದಿ

ಉಪ್ಪಿ೨ ಹಾಡಿಗೆ ಜಗ್ಗೇಶ್ ಕೆಂಡಾಮಂಡಲ

ನಟ ನಿರ್ದೇಶಕ ಉಪೇಂದ್ರ ಮತ್ತು ಹಾಸ್ಯನಟ ಜಗ್ಗೇಶ್ ಪರಸ್ಪರ ಕಾಲೆಳೆದುಕೊಳ್ಳುವುದು ಕನ್ನಡ ಚಿತ್ರರಂಗಕ್ಕೆ ಹೊಸತೇನಲ್ಲ. ಜಗ್ಗೇಶ್ ಅವರನ್ನು...

ಉಪ್ಪಿ೨ ಹಾಡಿಗೆ ಜಗ್ಗೇಶ್ ಕೆಂಡಾಮಂಡಲ
ಹಾಸ್ಯನಟ ಜಗ್ಗೇಶ್
Published On :

ಬೆಂಗಳೂರು: ನಟ ನಿರ್ದೇಶಕ ಉಪೇಂದ್ರ ಮತ್ತು ಹಾಸ್ಯನಟ ಜಗ್ಗೇಶ್ ಪರಸ್ಪರ ಕಾಲೆಳೆದುಕೊಳ್ಳುವುದು ಕನ್ನಡ ಚಿತ್ರರಂಗಕ್ಕೆ ಹೊಸತೇನಲ್ಲ. ಜಗ್ಗೇಶ್ ಅವರನ್ನು ಸಿನೆಮಾಗೆ ಪರಿಚಯಿಸಿದವನೇ ನಾನು ಎಂಬಂತೆ ನಟ ಉಪೇಂದ್ರ ನೇರವಾಗಲ್ಲವಾದರೂ ಹಲವಾರು ಬಾರಿ ಹೇಳಿದ್ದಾರೆ. ಇದಕ್ಕೆ ಜಗ್ಗೇಶ್ ಕೂಡ ಅಷ್ಟೇ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಅವರು 'ಉಪೇಂದ್ರ' ಹೆಸರಿನ ಸಿನೆಮಾ ಮಾಡಿದಾಗ ಅದಕ್ಕೆ ವಿರುದ್ಧವಾಗಿ ಅದೇ ರೀತಿಯ ವೇಷಭೂಷಣ ತೊಟ್ಟು ಜಗ್ಗೇಶ್ 'ಜಿತೇಂದ್ರ' ಎಂಬ ಸಿನೆಮಾ ಮಾಡಿ ಅದು ನೆಲಕಚ್ಚಿದ್ದು ಕೂಡ ಚಿತ್ರರಂಗಕ್ಕೆ ಗೊತ್ತಿರುವ ವಿಷಯವೇ.

ಆದರೆ ಈಗ ಹೊಸದೊಂದು ವಿವಾದದಲ್ಲಿ ಉಪೇಂದ್ರ ನಿರ್ದೇಶನದ ಹೊಸ ಚಿತ್ರ 'ಉಪ್ಪಿ ೨' ಸಿನೆಮಾದ "ಹಲೋ ಎಕ್ಸೂಮಿ ಪ್ಲೀಸ್ ಎಲ್ಲರ ಕಾಲ ಎಳಿತದೆ ಕಾಲ" ಎಂಬ ಹಾಡಿನ ಸಾಹಿತ್ಯ ಜಗ್ಗೇಶ್ ಅವರಿಗೆ ಎಲ್ಲಿಲ್ಲದ ಕೋಪ ತಂದಿದೆ. ಕನ್ನಡದ ಹಲವು ನಟರನ್ನು ಲೇವಡಿ ಮಾಡಿರುವ ಈ ಹಾಡು ಅದ್ಭುತ ಸಾಹಿತ್ಯವೇನು ಅಲ್ಲವಾದರೂ, ಹಲವರಿಗೆ ಕುಟುಕಲು ಸಫಲವಾಗಿದೆ. ಲಾಂಗು ಮಚ್ಚು ಸಿನೆಮಾಗಳನ್ನು ಕುಲುಮೆಯಲ್ಲಿ ತಯಾರು ಮಾಡಿದ್ದು ನಾನೇ ಎಂದು ಈ ಹಾಡಿನಲ್ಲಿ ಉಪೇಂದ್ರ ತಮ್ಮನ್ನೇ ಹೊಗಳಿಕೊಂಡಿದ್ದಾರೆ ನಂತರ ಬಂದದ್ದೆಲ್ಲಾ ನಕಲು ಎಂದಿದ್ದಾರೆ. 'ಅಣ್ತಮ್ಮ' ಅವರಿವರ ಸಹಾಯವಿಲ್ಲದೆ ಅವರು ಚಿತ್ರೋದ್ಯಮಕ್ಕೆ ಬಂದವರು ಮತ್ತು ಅವರು ಚಿತ್ರರಂಗಕ್ಕೆ ಪರಿಚಯ ಮಾಡಿದವರು ಎಷ್ಟೋ ಜನ ಇವೊತ್ತು ಮೇಲೆದ್ದಿದ್ದಾರೆ ಎಂದೆಲ್ಲಾ ಬರೆದುಕೊಂಡಿದ್ದಾರೆ.

ಇದು ಚಿತ್ರೋದ್ಯಮದ ಹಲವಾರು ಜನರಿಗೆ ಕೋಪ ತರಿಸಿದ್ದರೂ ಕೆಂಡಾಮಡಲವಾಗಿದ್ದು ಮಾತ್ರ ಜಗ್ಗೇಶ್. ಟ್ವೀಟ್ ನಲ್ಲಿ ಯುದ್ಧ ಕಹಳೆ ಊದಿರುವ ಅವರು "90 ರಲ್ಲೆ 69ಸಿನಿಮಾ ಪುರೈಸಿದ್ದೆ ಆ ನಂತರ ಬಂದವರಿಗೆ ಅವಕಾಶ ನನ್ನಿಂದ ಆಗಿದೆಯೋ ಇಲ್ಲ ಬೇರೆಯವರಿಂದ ನಾನು ಅವಕಾಶ ಪಡೆದ್ದಿದ್ದೇನೊ?ಇತಿಹಾಸ ಗೊತ್ತಿರದ ಮಂದಿಗೆ.!!!" ಎಂದು ಟ್ವೀಟ್ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.