ಸಿನಿಮಾ ಸುದ್ದಿ

'ಅರ್ಜುನ'ನ ವಿಶಿಷ್ಟ ಆಡಿಯೋ ಬಿಡುಗಡೆ

ಪಿ ಸಿ ಶೇಖರ್ ಅವರ 'ಅರ್ಜುನ' ಸಿನೆಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಸಾಮಾನ್ಯ ಕಾರ್ಯಕ್ರಮವಾಗಿರದೆ,...

'ಅರ್ಜುನ'ನ ವಿಶಿಷ್ಟ ಆಡಿಯೋ ಬಿಡುಗಡೆ
'ಅರ್ಜುನ' ಸಿನೆಮಾದ ಆಡಿಯೋ ಅನಾವರಣದಲ್ಲಿ ಪ್ರದರ್ಶನ ನೀಡಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ
Published On :

ಬೆಂಗಳೂರು: ಪಿ ಸಿ ಶೇಖರ್ ಅವರ 'ಅರ್ಜುನ' ಸಿನೆಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಸಾಮಾನ್ಯ ಕಾರ್ಯಕ್ರಮವಾಗಿರದೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ೧೪ ಸದಸ್ಯರೊಂದಿಗೆ ಆರ್ಚೆಸ್ಟ್ರಾ ನಡೆಸುವುದರೊಂದಿಗೆ ಮಂಗಳವಾರ ವಿಶೇಷತೆಯ ಮೆರುಗು ತಂದಿದ್ದರು.

ತಮ್ಮ ಸಿನೆಮಾದಲ್ಲಿ ಸಂಗೀತಕ್ಕೇ ವಿಶೇಷ ಪಾತ್ರವಿದೆ ಎನ್ನುವ ಶೇಖರ್ "ಸಂಗೀತ ತನ್ನಷ್ಟಕ್ಕೆ ಮಾತನಾಡಬೇಕು ಎಂದೆನಿಸಿತು ನಮಗೆ" ಎನ್ನುತ್ತಾರೆ. ಆದುದರಿಂದ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತಂತೆ.

ಈ ಪ್ರದರ್ಶನದಲ್ಲಿ 'ಸೋಲ್ ಆಫ್ ಅರ್ಜುನ' ಎಂಬ ಥೀಮ್ ಸಂಗೀತವನ್ನು ಅರ್ಜುನ್ ಜನ್ಯ ನುಡಿಸಿದ್ದಲ್ಲದೆ, ಸಿನೆಮಾದ ಇತರ ಹಾಡುಗಳನ್ನು ಕೂಡ ನೀಡುವುದರೊಂದಿಗೆ ನೆರೆದಿದ್ದವರನ್ನು ರಂಜಿಸಿದರು.

ಕಾರ್ತಿಕ್ ಹಾಡಿರುವ ಕವಿರಾಜ್ ಗೀತರಚನೆ ಮಾಡಿರುವ 'ಸಖಿಯೆ ಸಖಿಯೆ' ಹಾಡು ಕೇಳುಗರ ಗಮನ ಸೆಳೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.