ಸಿನಿಮಾ ಸುದ್ದಿ

ಕಪಿಲ್ ಶರ್ಮಾ ಜಾಗಕ್ಕೆ ಕರಣ್: ವದಂತಿ ತಳ್ಳಿಹಾಕಿದ ಕರಣ್ ಜೋಹರ್

ಹಾಸ್ಯ ಕಾರ್ಯಕ್ರಮ ಎಂದೇ ಹೆಸರು ಮಾಡುತ್ತಿದ್ದ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ನಿರೂಪಕ ಕಪಿಲ್ ಶರ್ಮಾ ಜಾಗಕ್ಕೆ ಇನ್ನುಮುಂದೆ ಕರಣ್ ಜೋಹರ್ ಬರಲಿದ್ದಾರೆ ಎಂಬ ವದಂತಿಯನ್ನು ಕರಣ್ ಜೋಹರ್ ಸೋಮವಾರ...

ಕಪಿಲ್ ಶರ್ಮಾ ಜಾಗಕ್ಕೆ ಕರಣ್: ವದಂತಿ ತಳ್ಳಿಹಾಕಿದ ಕರಣ್ ಜೋಹರ್
ಕರಣ್ ಜೋಹರ್ ಮತ್ತು ಕಪಿಲ್ ಶರ್ಮಾ
Published On :

ಹಾಸ್ಯ ಕಾರ್ಯಕ್ರಮ ಎಂದೇ ಹೆಸರು ಮಾಡುತ್ತಿದ್ದ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ನಿರೂಪಕ ಕಪಿಲ್ ಶರ್ಮಾ ಜಾಗಕ್ಕೆ ಇನ್ನುಮುಂದೆ ಕರಣ್ ಜೋಹರ್ ಬರಲಿದ್ದಾರೆ ಎಂಬ ವದಂತಿಯನ್ನು ಕರಣ್ ಜೋಹರ್ ಸೋಮವಾರ ತಳ್ಳಿಹಾಕಿದ್ದಾರೆ.

ಖಾಸಗಿ ವಾಹಿನಿಯೊಂದರ ಹೆಸರಾಂತ ಕಾರ್ಯಕ್ರಮ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ಪ್ರಮುಖ ನಟ ಹಾಗೂ ನಿರೂಪಕ ಕಪಿಲ್ ಶರ್ಮಾ ಅನಾರೋಗ್ಯ ಪೀಡಿತರಾದ ಕಾರಣ ಕಾರ್ಯಕ್ರಮವನ್ನು ಮುಂದುವರೆಸುತ್ತಿಲ್ಲ. ಹೀಗಾಗಿ ಅವರ ಜಾಗಕ್ಕೆ ನಿರ್ದೇಶಕ ಕರಣ್ ಜೋಹರ್ ಬರಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿತ್ತು.

ಹೀಗಾಗಿ ವದಂತಿ ಕುರಿತಂತೆ ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ಕರಣ್ ಜೋಹರ್ ಅವರು, ಈ ರೀತಿಯ ವದಂತಿ ಯಾವಾಗ, ಹೇಗೆ ಪ್ರಾರಂಭವಾಯಿತು ಎಂಬುದು ನನಗೆ ತಿಳಿದಿಲ್ಲ. ಇದು ಸತ್ಯಕ್ಕೆ ದೂರವಾಗಿದ್ದು, ಕಪಿಲ್ ಶರ್ಮಾ ಇಲ್ಲದಿದ್ದರೆ ಆ ಕಾರ್ಯಕ್ರಮಕ್ಕೆ ಕಳೆಯೇ ಇರುವುದಿಲ್ಲ. ಕಪಿಲ್ ಶರ್ಮಾ ಜಾಗಕ್ಕೆ ನಾನು ಹೋಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.