ಸಿನಿಮಾ ಸುದ್ದಿ

ಟ್ರೇಲರ್ ಬಿಡುಗಡೆಗೆ ಸುದೀಪ್ ಮತ್ತು ಪೂರಿ ಜಗನ್ನಾಥ್?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ೫೩ನೆ ವಸಂತಕ್ಕೆ ಕಾಲಿಡಲಿದ್ದು ಅವರ ಅಭಿಮಾನಿಗಳು ಜನ್ಮದಿನ ಸಂಭ್ರಮಾಚರಣೆಗಳಿಗೆ ಸಿದ್ಧರಾಗುತ್ತಿದ್ದಾರೆ. ಕೆಲವು ಕಡೆ

ಟ್ರೇಲರ್ ಬಿಡುಗಡೆಗೆ ಸುದೀಪ್ ಮತ್ತು ಪೂರಿ ಜಗನ್ನಾಥ್?
'ಕಿಲ್ಲಿಂಗ್ ವೀರಪ್ಪನ್' ಚಿತ್ರದ ನಟ ನಟಿಯರು
Published On :

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ೫೩ನೆ ವಸಂತಕ್ಕೆ ಕಾಲಿಡಲಿದ್ದು ಅವರ ಅಭಿಮಾನಿಗಳು ಜನ್ಮದಿನ ಸಂಭ್ರಮಾಚರಣೆಗಳಿಗೆ ಸಿದ್ಧರಾಗುತ್ತಿದ್ದಾರೆ. ಕೆಲವು ಕಡೆ ದೈತ್ಯ ಕಟ್-ಔಟ್ ಗಳು ಎದ್ದು ನಿಲ್ಲುತ್ತಿದ್ದರೆ ನೆಲಮಂಗಲದ ಅಭಿಮಾನಿಗಳ ಸಂಘ ಜುಲೈ ೧೨ ರಂದು ನಟನ ಹುಟ್ಟುಹಬ್ಬಕ್ಕೆ ಬೇವಿನ ಗಿಡ ಹಂಚುವುದರ ಮೂಲಕ ಸಂಭ್ರಮಾಚರಣೆಗಳಿಗೆ ಚಾಲನೆ ನೀಡಲು ಮುಂದಾಗಿದೆ. ಇತ್ತ ಕನ್ನಡ ಚಿತ್ರರಂಗ ಶಿವಣ್ಣ ನಟನೆಯ ಶಿವಲಿಂಗ, ಕಿಲ್ಲಿಂಗ್ ವೀರಪ್ಪನ್ ಮತ್ತು ಮಾಸ್ ಲೀಡರ್ ಟ್ರೇಲರ್ ಬಿಡುಗಡೆಗೆ ಸಜಾಗುತ್ತಿದೆ.

ಮೂಲಗಳ ಪ್ರಕಾರ ಎಲ್ಲವೂ ಸರಿಬಂದರೆ ರಾಮ್ ಗೋಪಾಲ್ ವರ್ಮ ನಿರ್ದೇಶನದ ಕಿಲ್ಲಿಂಗ್ ವೀರಪ್ಪನ್ ಸಿನೆಮಾದ ಟ್ರೇಲರ್ ಅನ್ನು ನಟ ಸುದೀಪ್ ಬಿಡುಗಡೆ ಮಾಡಲಿದ್ದರಂತೆ. ಅಂದು ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಕೂಡ ಉಪಸ್ಥಿತರಿರುತ್ತಾರೆ ಎಂದು ತಿಳಿದುಬಂದಿದೆ. ಇವರಿಬ್ಬರೂ ಆರ್ ಜಿ ವಿ ಅವರಿಗೆ ಹತ್ತಿರದ ಗೆಳೆಯರಾಗಿರುವುದರಿಂದ ಈ ವಿಶೇಷ ಕಾರ್ಯಕ್ರಮಕ್ಕೆ ಇಬ್ಬರನ್ನೂ ನಿರ್ದೇಶಕ ಆಹ್ವಾನಿಸಿದ್ದರಂತೆ.

ಕಿಲ್ಲಿಂಗ್ ವೀರಪ್ಪನ್ ಚಿತ್ರದ ಮತ್ತೊಂದು ವಿಶೇಷವೆಂದರೆ ನಾಯಕ ನಟ ಶಿವಣ್ಣನವರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಂಠದಾನ ಮಾಡುತ್ತಿರುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.