ಸಿನಿಮಾ ಸುದ್ದಿ

ನನ್ನ ಹೆಸರು ಶಿಫಾರಸ್ಸು ಮಾಡಿದ್ದಕ್ಕೆ ಮೋಹನ್ ಲಾಲ್ ಗೆ ಋಣಿ: ಕಮಲ್

ಮಲಯಾಳಮ್ ಬ್ಲಾಕ್ ಬಸ್ಟರ್ ಸಿನೆಮಾ 'ದೃಶ್ಯಂ' ಸಿನೆಮಾದ ತಮಿಳು ಅವತರಿಣಿಕೆಗೆ ಕಮಲ್ ಹಾಸನ್ ಸೂಕ್ತರು ಎಂದು ಹೇಳಿದ್ದು ಖ್ಯಾತ ನಟ ಮೋಹನ್ ಲಾಲ್

ನನ್ನ ಹೆಸರು ಶಿಫಾರಸ್ಸು ಮಾಡಿದ್ದಕ್ಕೆ ಮೋಹನ್ ಲಾಲ್ ಗೆ ಋಣಿ: ಕಮಲ್
ಖ್ಯಾತ ನಟ ಮೋಹನ್ ಲಾಲ್
Published On :

ಚೆನ್ನೈ: ಮಲಯಾಳಮ್ ಬ್ಲಾಕ್ ಬಸ್ಟರ್ ಸಿನೆಮಾ 'ದೃಶ್ಯಂ' ಸಿನೆಮಾದ ತಮಿಳು ಅವತರಿಣಿಕೆಗೆ ಕಮಲ್ ಹಾಸನ್ ಸೂಕ್ತರು ಎಂದು ಹೇಳಿದ್ದು ಖ್ಯಾತ ನಟ ಮೋಹನ್ ಲಾಲ್ ಅಂತೆ. ಇದಕ್ಕೆ ಕಮಲ್, ಮೋಹನ್ ಲಾಲ್ ಅವರಿಗೆ ಋಣಿ ಎಂದಿದ್ದಾರೆ.

"'ದೃಶ್ಯಂ ರಿಮೇಕ್ ನಲ್ಲಿ ನನ್ನನ್ನು ನೋಡಬೇಕೆಂದು ಮೋಹನ್ ಲಾಲ್ ಬಯಸಿದ್ದರೆಂದು ಯಾರಿಂದಲೋ ತಿಳಿದೆ. ನಾನು ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲೆ ಎಂದು ನನ್ನ ಹೆಸರನ್ನು ಅವರು ಶಿಫಾರಸ್ಸು ಮಾಡಿದ್ದರು. ನಾನು ಅವರಿಗೆ ಧನ್ಯವಾದ ತಿಳಿಸಬೇಕೆ, ಏಕೆಂದರೆ ಇಂತಹ ಒಳ್ಳೆಯ ಸಿನೆಮಾಗಳಲ್ಲಿ ನಾನು ನಟಿಸಬೇಕು ಎಂದು ತಾರೆಗಳು ಬಯಸುವುದು ವಿರಳ" ಎಂದು ಕಮಲ್ ತಿಳಿಸಿದ್ದಾರೆ.

ದೃಶ್ಯಂ ಸಿನೆಮಾದ ರಿಮೇಕ್ 'ಪಾಪನಾಶಂ' ಸಿನೆಮಾದಲ್ಲಿ ಕಮಲ್ ಹಾಸನ್ ನಾಯಕ ನಟ. ಈ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು.

ಮೂಲ ಸಿನೆಮಾವನ್ನು ನಿರ್ದೇಶಿಸಿದ್ದ ಜಿತು ಜೋಸೆಫ್ ಅವರೇ ತಮಿಳು ಅವತರಿಣಿಕೆಯನ್ನು ನಿರ್ದೇಶಿಸಿದ್ದರು.

ಈ ಸಿನೆಮಾ ಈಗಾಗಲೇ ಕನ್ನಡ, ತೆಲುಗು ಭಾಷೆಗಳಲ್ಲೂ ರಿಮೇಕ್ ಆಗಿದ್ದು ಹಿಂದಿ ಭಾಷೆಯಲ್ಲಿ ಅಜಯ್ ದೇವಗನ್ ನಟನೆಯ ಅವತರಿಣೆಕೆಯೂ ಜುಲೈ ೩೧ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.