ಸಿನಿಮಾ ಸುದ್ದಿ

'ಗಣಪ' ಹೌಸ್ ಫುಲ್! ಹೆಚ್ಚುವರಿ ೫೦ ಚಿತ್ರಮಂದಿರಗಳಿಗೆ ವಿಸ್ತರಣೆ

'ಗಣಪ' ಎರಡನೆ ವಾರವೂ ಹೌಸ್ ಫುಲ್. ನಿರ್ಮಾಪಕ ಫುಲ್ ಖುಷ್. ಹೌದು ಸಂತೋಶ್ ಮತ್ತು ಪ್ರಿಯಾಂಕ ನಟನೆಯ 'ಗಣಪ'ನನ್ನು ಪ್ರೇಕ್ಷಕರು ತುಂಬು ಹೃದಯದಿಂದ...

'ಗಣಪ' ಹೌಸ್ ಫುಲ್! ಹೆಚ್ಚುವರಿ ೫೦ ಚಿತ್ರಮಂದಿರಗಳಿಗೆ ವಿಸ್ತರಣೆ
'ಗಣಪ' ಸಿನೆಮಾ ಭಿತ್ತಿಚಿತ್ರ
Published On :

ಬೆಂಗಳೂರು: 'ಗಣಪ' ಎರಡನೆ ವಾರವೂ ಹೌಸ್ ಫುಲ್. ನಿರ್ಮಾಪಕ ಫುಲ್ ಖುಷ್. ಹೌದು ಸಂತೋಶ್ ಮತ್ತು ಪ್ರಿಯಾಂಕ ನಟನೆಯ 'ಗಣಪ'ನನ್ನು ಪ್ರೇಕ್ಷಕರು ತುಂಬು ಹೃದಯದಿಂದ ಸ್ವಾಗತಿಸಿದ್ದಾರಂತೆ. ಒಂದು ವಾರದಲ್ಲಿ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿರುವ ಸಿನೆಮಾ, ಬೇಡಿಕೆಯ ಮೇರೆಗೆ ಕರ್ನಾಟಕದಾದ್ಯಂತ ಹೆಚ್ಚುವರಿ ೫೦ ಚಿತ್ರಮಂದಿರಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದೆಯಂತೆ. "ಸಿನೆಮಾದಲ್ಲಿ ಒಳ್ಳೆಯ ಕಥೆ-ಹೂರಣ ಇದ್ದರೆ ಅದು ಗೆಲ್ಲುತ್ತದೆ ಎನ್ನುವುದಕ್ಕೆ ಗಣಪ ಸಾಕ್ಷಿ. ನಮ್ಮ ಪಟ್ಟಿಗೆ ಇಂದು ನಾವು ಇನ್ನು ೫೦ ಥಿಯೇಟರ್ ಗಳನ್ನು ಸೇರಿಸುತ್ತಿದ್ದೇವೆ. ಎಲ್ಲಾ ಸ್ಕ್ರೀನ್ ಗಳಲ್ಲೂ ಸಿನೆಮಾ ಹೌಸ್ ಫುಲ್" ಎನ್ನುತ್ತಾರೆ ನಿರ್ಮಾಪಕ ಪರಮೇಶ್.

ಎಲ್ಲವೂ ಸರಿ ಬಂದರೆ ತಮಿಳು ಚಿತ್ರರಂಗದ, ಸೂರ್ಯ ಒಡೆತನದ ಸ್ಟುಡಿಯೋ ಗ್ರೀನ್ ತಮಿಳು ಅವತರಿಣಿಕೆಯ ವಿತರಣೆಯ ಹಕ್ಕನ್ನು ಕೊಂಡುಕೊಳ್ಳುವ ಸಾಧ್ಯತೆ ಇದೆಯಂತೆ. "ಮಾತುಕತೆ ಪ್ರಗತಿಯಲ್ಲಿದೆ. ತಮಿಳುನಾಡಿನಾದ್ಯಂತ ಎಷ್ಟು ಚಿತ್ರಮಂದಿರಗಳಲ್ಲಿ ಸಿನೆಮಾ ಬಿಡುಗಡೆ ಮಾಡಬೇಕೆಂದು ನಿರ್ಧರಿಸಲಿದ್ದೇವೆ. ಇದು ೨-೩ ವಾರ ಹಿಡಿಯುತ್ತದೆ" ಎನ್ನುತ್ತಾರೆ ಪರಮೇಶ್.

ಪ್ರಭು ಶ್ರೀನಿವಾಸ್ ನಿರ್ದೇಶನ 'ಗಣಪ' ಬೆಂಗಳುರಿನ ಭೂಗತ ಲೋಕದಲ್ಲಿ ಅರಳುವ ಪ್ರೇಮಕಥೆಯ ಜಾಡನ್ನು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.