ಸಿನೆಮಾಗಳಲ್ಲಿ ನನ್ನ ನಂಬಿಕೆಗಳನ್ನು ಹೇರುವುದಿಲ್ಲ: ಕಮಲ ಹಾಸನ್
ಖ್ಯಾತ ನಟ ನಿರ್ದೇಶಕ ಕಮಲ ಹಾಸನ್ ಅವರ ತಮಿಳು ಚಲನಚಿತ್ರ 'ಪಾಪನಾಸಂ' ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದ್ದು,...

ಚೆನ್ನೈ: ಖ್ಯಾತ ನಟ ನಿರ್ದೇಶಕ ಕಮಲ ಹಾಸನ್ ಅವರ ತಮಿಳು ಚಲನಚಿತ್ರ 'ಪಾಪನಾಸಂ' ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದ್ದು, ಸಿನೆಮಾಗಳಲ್ಲಿ ನನ್ನ ನಂಬಿಕೆಗಳನ್ನು ಹೇರಲು ಬಯಸುವುದಿಲ್ಲ ಎಂದು ಅವರು ತಿಳಿಸಿದ್ದು ಹಾಗೇನಾದರೂ ಮಾಡಿದರೆ ಅತಿ ಸೂಕ್ಷ್ಮವಾಗಷ್ಟೇ ಮಾಡುತ್ತೇನೆ ಎಂದಿದ್ದಾರೆ.
"ಪಾಪನಾಸಂ ಪ್ರೋಮೊ ವಿಡಿಯೋಗಳು ಬಿಡುಗಡೆಯಾದಾಗಲಿಂದಲೂ, ನಾಸ್ತಿಕನಾಗಿದ್ದೂ ಸಿನೆಮಾದಲ್ಲಿ ಹಣೆಯ ಮೇಲೆ ವಿಭೂತಿ ಹಚ್ಚಿಕೊಂಡಿರುವುದೇಕೆ ಎಂದು ಕೇಳುತ್ತಾರೆ. ನಾನು ನಾಸ್ತಿಕ ಒಪ್ಪಿಕೊಳ್ಳುತ್ತೇನೆ. ಆದರೆ ಅದು ನನ್ನ ವೈಯಕ್ತಿಕ ನಂಬಿಕೆ, ಸಿನೆಮಾ ಬೇರೆ. ನನ್ನ ನಂಬಿಕೆಗಳನ್ನು ಸಿನೆಮಾಗಳಲ್ಲಿ ಹೇರಲು ಬಯಸುವುದಿಲ್ಲ" ಎಂದು ಹಾಸನ್ ತಿಳಿಸಿದ್ದಾರೆ.
"ನನ್ನ ವೈಯಕ್ತಿಕ ನಂಬಿಕೆಗಳನ್ನು ಸಿನೆಮಾದಲ್ಲಿ ಅಳವಡಿಸಿದರು ಬಹಳ ಸೂಕ್ಷ್ಮವಾಗಿ ಮಾಡುತ್ತೇನೆ" ಎಂದಿರುವ ಅವರು ತೆರೆಯ ಮೇಲೆ ಎಂದಿಗೂ ಜಾತಿಯನ್ನು ವೈಭವೀಕರಿಸುವುದಿಲ್ಲ ಎಂದಿದ್ದಾರೆ.
ಮಲಯಾಳಮ್ ಸಿನೆಮಾ ದೃಶ್ಯಂ ಸಿನೆಮಾದ ರಿಮೇಕ್ ಪಾಪನಾಸಂ. ಇದರಲ್ಲಿ ಕಮಲ್ ಕೇಬಲ್ ಆಪರೇಟರ್ ಪಾತ್ರ ನಿರ್ವಹಿಸಿದ್ದಾರೆ.
ನಿರ್ದೇಶಕ ಜಿತು ಜೋಸೆಫ್ ನಿರ್ದೇಶನದ ಈ ಸಿನೆಮಾದಲ್ಲಿ ಕಮಲ್ ಅವರ ಪತ್ನಿ ಗೌತಮಿ ಕೂಡ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


