ಸಿನಿಮಾ ಸುದ್ದಿ

ರಿಕ್ಕಿ ಕೇಜ್ ಗೆ ಸಿದ್ದರಾಮಯ್ಯನವರಿಂದ ೨೫ ಲಕ್ಷ ಬಹುಮಾನ

ಈ ವರ್ಷ ಗ್ರ್ಯಾಮಿ ಪ್ರಶಸ್ತಿ ಗೆದ್ದ ಕನ್ನಡಿಗ ರಿಕ್ಕಿ ಕೇಜ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೫ ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.

ರಿಕ್ಕಿ ಕೇಜ್ ಗೆ ಸಿದ್ದರಾಮಯ್ಯನವರಿಂದ ೨೫ ಲಕ್ಷ ಬಹುಮಾನ
ಮುಖ್ಯಮಂತ್ರಿ ಸಿದ್ದರಾಮಯ್ಯನವರೊಡನೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ರಿಕ್ಕಿ ಕೇಜ್
Published On :

ಬೆಂಗಳೂರು: ಈ ವರ್ಷ ಗ್ರ್ಯಾಮಿ ಪ್ರಶಸ್ತಿ ಗೆದ್ದ ಕನ್ನಡಿಗ ರಿಕ್ಕಿ ಕೇಜ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೫ ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.

"ನನಗೆ ಸಿಕ್ಕಿರುವ ಗೌರವದ ಬಗ್ಗೆ ಮಾತುಗಳಲ್ಲಿ ಹೇಳಾಗುವುದಿಲ್ಲ. ನನಗೆ ಗ್ರ್ಯಾಮಿ ಪ್ರಶಸ್ತಿ ಸಿಕ್ಕಿದ್ದಕ್ಕೆ ಅಭಿನಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಅವರ ಮನೆಗೆ ಆಹ್ವಾನಿಸಿದರು. ಅವರ ಸಂಪುಟ ಸಚಿವರಿಗೆ ನನ್ನನ್ನು ಪರಿಚಯಿಸಿದರು. ಅವರು ಮುಖ್ಯಮತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ನಾನು ಅವರನ್ನು ಪ್ರಶಂಸಿಸಿದ್ದೇನೆ. ರಾಜ್ಯ ಮತ್ತು ಧರ್ಮ ದೂರದಲ್ಲಿರಬೇಕು ಎಂದು ನಂಬಿರುವ ಕೆಲವೇ ನಾಯಕರಲ್ಲಿ ಇವರೂ ಒಬ್ಬರು. ಅವರ ಜೊತೆ ತೆಗೆದುಕೊಂಡ ಸೆಲ್ಫಿ ಇಲ್ಲಿದೆ (ನಾವಿಬ್ಬರೂ ಸೆಲ್ಫಿ ತೆಗೆದುಕೊಳ್ಳುತ್ತಿರುವ ಚಿತ್ರ ಎನ್ನಿ)" ಎಂದು ರಿಕ್ಕಿ ಕೇಜ್ ಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಿದ್ದರಾಮಯ್ಯನವರು ಕೂಡ ತಮ್ಮ ಅಧಕೃತ ಟ್ವೀಟ್ ಪುಟದಲ್ಲಿ ಸೆಲ್ಫಿ ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.