ನಗ್ಮಾ ಆಗಲಿರುವ ಶ್ರದ್ಧಾ
ಆಶಿಕಿ-2ನಲ್ಲಿ ಮಿಂಚಿದ ಶ್ರದ್ಧಾ ಕಪೂರ್‍ಗೆ ಸೀಕ್ವೆಲ್ ಚಿತ್ರಗಳ ಆಫರ್‍ಗಳು ಹೆಚ್ಚುತ್ತಿವೆ. ಟೈಗರ್ ಜೊತೆಗೆ ಬಾಘಿ, ಫರ್ಹಾನ್ ಅಖ್ತರ್ ಜೊತೆ ರಾಕ್ ಆನ್ .. ಎರಡೂ ಸೀಕ್ವೆಲ್‍ಗಳೇ!

ಆಶಿಕಿ-2ನಲ್ಲಿ ಮಿಂಚಿದ ಶ್ರದ್ಧಾ ಕಪೂರ್‍ಗೆ ಸೀಕ್ವೆಲ್ ಚಿತ್ರಗಳ ಆಫರ್‍ಗಳು ಹೆಚ್ಚುತ್ತಿವೆ. ಟೈಗರ್ ಜೊತೆಗೆ ಬಾಘಿ, ಫರ್ಹಾನ್ ಅಖ್ತರ್ ಜೊತೆ ರಾಕ್ ಆನ್.. ಎರಡೂ ಸೀಕ್ವೆಲ್‍ಗಳೇ!
ಇಪ್ಪತ್ತೈದು ವರ್ಷಗಳ ಹಿಂದೆ ದೀಪಕ್ ಶಿವದಾಸನಿ ಒಂದು ಚಿತ್ರ ನಿರ್ದೇಶಿಸಿದ್ದರು. `ಬಾಘಿ: ಎ ರೆಬೆಲ್ ಫಾರ್ ಲವ್' ಹೆಸರಿನ ಈ ಚಿತ್ರ ಭಾರಿ ಹಿಟ್ ಆಯಿತು. ಆ್ಯಕ್ಷನ್, ರೊಮ್ಯಾನ್ಸ್, ಡ್ರಾಮಾದಿಂದ ಗಮನ ಸೆಳೆದ ಈ ಚಿತ್ರ ಕ್ಕೆ ಸಲ್ಮಾನ್ ಹೀರೋ ಆಗಿದ್ದರು.ಹದಿನೈದು ವರ್ಷದ ನಗ್ಮಾ ನಾಯಕಿ! 90ರ ದಶಕದಲ್ಲಿ ಬಂದ ಈ ಚಿತ್ರ, ಇಡೀ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಏಳನೆಯ ಚಿತ್ರ ಎನಿಸಿಕೊಂಡಿತ್ತಂತೆ.
ಈಗೇನುಸುದ್ದಿ? ಅದೇ ಹೆಸರಿನ ಚಿತ್ರ ಬರುವ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆಯಾಗುವುದಕ್ಕೆ ಸಿದ್ಧವಾಗುತ್ತಿದೆ! ಈ ಚಿತ್ರದಲ್ಲಿ ನಗ್ಮಾ ಜಾಗದಲ್ಲಿ ಕಾಣಿಸಿಕೊಳ್ಳಲಿರುವವರು ಶ್ರದ್ಧಾ ಕಪೂರ್. ಗಾಯಕಿಯಾಗಿ, ನಾಯಕಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರದ್ಧಾ ಮುಂದಿನ ವರ್ಷ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಚಾಲನೆ ನೀಡಲಿರುವುದು `ಬಾಘಿ' ಚಿತ್ರ. ಇದಾದ ಮೇಲೆ `ರಾಕ್‍ಆನ್ -2' ಬಿಡುಗಡೆ ಆಗಲಿದೆಯಂತೆ. ಚಿಕ್ಕವಯಸ್ಸಿಗೇ ವೇಶ್ಯಾವೃತ್ತಿಗೆ ಇಳಿದ ಮುಗ್ಧ ಬಾಲಕಿಯನ್ನು ಪ್ರೀತಿಸುವ ನಾಯಕ, ಆಕೆಯನ್ನು ಪಾಪ ಕೂಪದಿಂದ ಹೊರತರುವ ಪ್ರಯತ್ನವೇ ಹಳೆಯ `ಬಾಘಿ' ಚಿತ್ರದ ಕಥೆ. ಇದೇ ಕಥೆಯ ಎಳೆಯನ್ನಿಟ್ಟುಕೊಂಡು ಶಬ್ಬೀರ್ ಖಾನ್ ಹೊಸ ಚಿತ್ರ ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ.
ಆಶಿಕಿ-2ನಲ್ಲಿ ನಟಿಸಿ ಸೈ ಎನಿಸಿಕೊಂಡ ಶ್ರದ್ಧಾ ಕಪೂರ್‍ಗೆ ಸೀಕ್ವೆಲ್ ಚಿತ್ರಗಳಿಗೆ ಹೆಚ್ಚು ಆಫರ್‍ಗಳು ಬರು ತ್ತಿವೆ. ಬಾಘಿ ಒಂದು ರೀತಿಯ ಸೀಕ್ವೆಲ್ ಆದರೆ, ಫರ್ಹಾನ್ ಅಖ್ತರ್ ಜೊತೆ ನಟಿಸುತ್ತಿರುವ ರಾಕ್ ಆನ್ -2 ಕೂಡ ಸೀಕ್ವೆಲ್. ಯಶಸ್ಸು ಸೀಕ್ವೆಲ ಆಗುತ್ತದೆ ಎಂಬುದು ನಿರ್ಮಾಪಕರ ಲೆಕ್ಕಚಾರವಿರಬಹುದು. ಅಂದ ಹಾಗೆ, ಬಾಘಿಯಲ್ಲಿ ಸಲ್ಮಾನ್ ಪಾತ್ರವನ್ನು ನಿರ್ವಹಿಸುತ್ತಿರುವವರು ಟೈಗರ್ ಶ್ರಾಫ್ .ಭರಪೂರ ಆ್ಯಕ್ಷನ್‍ನಿಂದ ಚಿತ್ರ ತುಂಬಿ ತುಳುಕಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ ಶ್ರದ್ಧಾ ಕಪೂರ್ 2016ರಲ್ಲಿ ಆವರಿಸಿಕೊಳ್ಳುವ ನಟಿಯಾಗುವ ಮುನ್ಸೂಚನೆಯಂತೂ ಕೊಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


