ಹೊಸ ಜೂಲಿ ಲಕ್ಷ್ಮಿ ರೈ
ಕುಂದಾನಗರಿಯ ಬೆಡಗಿ ನಟಿ ಲಕ್ಷ್ಮಿ ರೈ ಬಾಲಿವುಡ್‍ನ ಮೋಸ್ಟ್ ಹಾಟ್ ನಟಿ ಎಂಬ ಪಟ್ಟಕ್ಕೇರಲು ರೆಡಿಯಾಗಿದ್ದಾರೆ..

ಕುಂದಾನಗರಿಯ ಬೆಡಗಿ ನಟಿ ಲಕ್ಷ್ಮಿ ರೈ ಬಾಲಿವುಡ್‍ನ ಮೋಸ್ಟ್ ಹಾಟ್ ನಟಿ ಎಂಬ ಪಟ್ಟಕ್ಕೇರಲು ರೆಡಿಯಾಗಿದ್ದಾರೆ.
ದೀಪಕ್ ಶಿವದಾಸನಿ ನಿರ್ದೇಶನದ `ಜೂಲಿ 2' ಚಿತ್ರಕ್ಕೆ ಬಿಕಿನಿ ತೊಟ್ಟಿರುವ ಆಕೆ, ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚುವಂತೆ ಕಾಣಿಸಿಕೊಂಡಿರುವುದು ಬಾಲಿವುಡ್‍ನ ಸದ್ಯದ ಹಾಟ್ ಟಾಪಿಕ್. ಬಿಕಿನಿ ತೊಟ್ಟಿರುವ ಆಕೆಯ ಫೋಟೋಗಳನ್ನು ನೋಡಿದ ನಟಿ ನೇಹಾ ದೂಪಿಯಾ ಕೂಡ ಹೊಟ್ಟೆ ಉರಿಸಿಕೊಂಡಿದ್ದಾರಂತೆ. ಕಾರಣ, 2004ರಲ್ಲಿ ಅವರೂ ಜೂಲಿಯಾಗಿ ನಟಿಸಿ ವಿವಾದಕ್ಕೂ ಕಾರಣವಾಗಿದ್ದರು. ಆ ಕಾಲಕ್ಕೆ ನೇಹಾಳ ಬೋಲ್ಡ್‍ನೆಸ್ ಕಂಡವರು, ನೇಹಾ ಅಂದ್ರೆ ಸಿಕ್ಕಾಪಟ್ಟೆ ಹಾಟ್ ಅಂತಲೇ ಚುಡಾಯಿಸಿದ್ದರು.
ಈಗ ಅದೇ ಮಾತುಗಳು ಲಕ್ಷ್ಮಿ ರೈ ಕಡೆಗೆ ತಿರುಗುತ್ತಿವೆ. ಆಕೆಯ ಸಿನಿ ಜರ್ನಿಯಲ್ಲಿ `ಜೂಲಿ 2' 50ನೇ ಚಿತ್ರ. ಅಷ್ಟೇ ಅಲ್ಲ, ಬಾಲಿವುಡ್‍ನಲ್ಲಿ ಇದೇ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿದ್ದಾರೆ. ನಾಯಕಿ ಪ್ರಧಾನವಾದ `ಜೂಲಿ 2 ' ಚಿತ್ರದ ಮೂಲಕವೇ ಬಾಲಿವುಡ್‍ನಲ್ಲೂ ನೆಲೆ ಕಂಡುಕೊಳ್ಳುವ ತವಕದಲ್ಲಿರುವ ಆಕೆ, ಈ ಹಿಂದೆಯೆೀ ಬಿಕಿನಿ ತೊಡಲು ರೆಡಿಯಾಗಿದ್ದಾಗಿ ಸುದ್ದಿಯಾಗಿತ್ತು. ಅದೀಗ ಸಾಧ್ಯವಾಗುತ್ತಿದೆ. ಚಿತ್ರೀಕರಣದ ಫೋಟೋಗಳು ಈಗಾಗಲೇ ಬಾಲಿವುಡ್ ಅಂಗಳದಲ್ಲೂ ಹರಡಿವೆ. ಅಂತರ್ಜಾಲದಲ್ಲಂತೂ ವೈರಲ್ ಆಗಿದ್ದು, ಬಾಲಿವುಡ್ ಮಂದಿ ನಿಬ್ಬೆರಗಾಗಿ ನೋಡುತ್ತಿದ್ದಾರೆ. ಪಾತ್ರದಲ್ಲಿ ನಟನೆಗೆ ಹೆಚ್ಚು ಅವಕಾಶ ಇರೋದ್ರಿಂದ, ಪಾತ್ರಕ್ಕೆ ತಕ್ಕಂತೆ ಅದು ಅನಿವಾರ್ಯವೂ ಆಗಿತ್ತು ಎಂದು ಹೇಳಿಕೊಂಡಿದ್ದಾರೆ.
26 ವರ್ಷದ ಈ ನಟಿ ತೆಲುಗು, ಕನ್ನಡ ಹಾಗೂ ತಮಿಳು ಚಿತ್ರಗಳ ನಂತರ ಈಗ ಲಕ್ಷ್ಮಿ ರೈ ಬಾಲಿವುಡ್ ನತ್ತ ಮುಖ ಹಾಕಿದ್ದಾರೆ.ಅಲ್ಲಿನ ಮರ್ಮಗಳ ನ್ನು ಅರ್ಥ ಮಾಡಿಕೊಂಡ ಹಿನ್ನೆಲೆಯೋ ಅಥವಾ ಪಾತ್ರದ ಅಗತ್ಯವೋ ಇದೇ ಮೊದಲ ಬಾರಿಗೆ ಆಕೆ ಬಿಕಿನಿ ತೊಡಲು ರೆಡಿಯಾಗಿದ್ದು ಮಾತ್ರ ಆಕೆಯ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಅಕ್ಟೋಬರ್ ನಿಂದ ಚಿತ್ರೀಕರಣ ಶುರುವಾಗಿದ್ದು, 2016ಕ್ಕೆ ಬಹುತೇಕ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


