ಸಿನಿಮಾ ಸುದ್ದಿ

'ಪರಪಂಚ'ದಲ್ಲಿ ಹುಚ್ಚ ವೆಂಕಟ್ ಗಾಯನ

ಯೋಗರಾಜ್ ಮೂವೀಸ್ ಹಾಗೂ ವೇದಂ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಪರಪಂಚ’ಚಿತ್ರಕ್ಕಾಗಿ...

'ಪರಪಂಚ'ದಲ್ಲಿ ಹುಚ್ಚ ವೆಂಕಟ್ ಗಾಯನ
ಹುಚ್ಚ ವೆಂಕಟ್
Published On :

ಯೋಗರಾಜ್ ಮೂವೀಸ್ ಹಾಗೂ ವೇದಂ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಪರಪಂಚ’ಚಿತ್ರಕ್ಕಾಗಿ ಯೋಗರಾಜ್‍ಭಟ್ ಅವರು ಬರೆದಿರುವ `ಬಾಯ್ ಬಸಳೆ ಸೊಪ್ಪು ಆಲುಗಡ್ಡೆ ಈರುಳ್ಳಿ ಮೈಸೂರು ಸ್ಯಾಂಡಲ್ ಸೋಪು ಕೊಬ್ರಿ ಎಣ್ಣೆ ಈ ರೇಷನ್ನು ಚೀಟಿನ ಜೇಬಲಿಟ್ಕೊಂಡು ಅಂಗಡಿಗೆ ಹೋಗು ಬದ್ಲು ಇಲ್ಲ್ ಬಂದ್ರಿ ಹೌದ್ ಹೌದ್‍ರಿ’ ಎಂಬ ಹಾಡನ್ನು ಹುಚ್ಚ ವೆಂಕಟ್ ಹಾಡಿದ್ದಾರೆ.

ಈ ಹಾಡಿನಲ್ಲಿ ಅವರೇ ಅಭಿನಯಿಸುತ್ತಿರುವುದು ವಿಶೇಷ. ಸದ್ಯದಲ್ಲೇ `ಪರಪಂಚ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಹಲವು ವರ್ಷಗಳಿಂದ ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ `ಗಾಂಧಿಸ್ಮೈಲ್’ ಚಿತ್ರದ ನಿರ್ದೇಶಕರೂ ಆಗಿರುವ ಕ್ರಿಶ್‍ಜೋಶಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ `ಪರಪಂಚ’ಕ್ಕೆ ವೆಜ್ ಆಂಡ್ ನಾನ್‍ವೆಜ್ ಎಂಬ ಅಡಿಬರಹವಿದೆ.

ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವೀರಸಮರ್ಥ್ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಸುರೇಶ್ ಸಂಕಲನ ಹಾಗೂ ಶಶಿಧರ್ ಅಡಪರ ಕಲಾ ನಿರ್ದೇಶನ `ಪರಪಂಚ’ಕ್ಕಿದೆ.  ದಿಗಂತ್, ರಾಗಿಣಿ. ದತ್ತಣ್ಣ, ಅನಂತನಾಗ್, ವಿ.ಮನೋಹರ್, ಅಶೋಕ್, ಯೋಗರಾಜ್‍ಭಟ್, ಪಂಚರಂಗಿ ಸುಧಾಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.