ತಮಿಳರ ತಲೈವಾ ರಜನಿಕಾಂತ್ ಗೆ 65ನೇ ಹುಟ್ಟುಹಬ್ಬದ ಸಂಭ್ರಮ
ತಮಿಳು ಚಿತ್ರರಂಗದ ಸೂಪರ್‌ಸ್ಟಾರ್. ರಜನಿಕಾಂತ್ ತಮ್ಮ 65 ನೇ ವರ್ಷಕ್ಕೆ ಕಾಲಿಸಿರಿಸಿದ್ದಾರೆ...

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್. ರಜನಿಕಾಂತ್ ತಮ್ಮ 65 ನೇ ವರ್ಷಕ್ಕೆ ಕಾಲಿಸಿರಿಸಿದ್ದಾರೆ. ಡಿಸಂಬರ್ 12, 1949ರಲ್ಲಿ ರಜನಿ ಜನಿಸಿದರು. ರಜನಿಯ ಮೊದಲ ಹೆಸರು ಶಿವಾಜಿ ರಾವ್ ಗಾಯಕ್ ವಾಡ್.
ತಮಿಳುನಾಡಿನಲ್ಲಿ ಭಾರೀ ಪ್ರವಾಹದಿಂದಾಗಿ ರಜನಿಕಾಂತ್ ಈ ವರ್ಷ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಜೊತೆಗೆ ಚೆನ್ನೈ ಪ್ರವಾಹ ಪರಿಹಾರ ನಿಧಿಗೆ 10 ಕೋಟಿ ರು. ದೇಣಿಗೆ ಕೂಡ ನೀಡಿದ್ದಾರೆ.
ಫಿಲ್ಮಿ ಕೆರಿಯರ್‌ನ ಹೊರತಾಗಿ ಲೋಕೋಪಕಾರಿ ಮನೋಭಾವಕ್ಕಾಗಿ ಹೆಚ್ಚು ಹೆಸರುವಾಸಿ. ಚಿತ್ರರಂಗದಲ್ಲಿ ನಟನೆಯಷ್ಟೇ ಅಲ್ಲದೇ ಸ್ಕ್ರಿಪ್ಟ್ ರೈಟರ್, ಚಿತ್ರ ನಿರ್ಮಾಪಕ ಮತ್ತು ಹಿನ್ನಲೆ ಗಾಯಕನಾಗಿಯೂ ರಜನಿಕಾಂತ್ ದುಡಿದಿದ್ದಾರೆ.
ಮಧ್ಯಮ ವರ್ಗದ ಕುಟುಂಬದಿಂದ ರಜನಿಕಾಂತ್ ಬೆಂಗಳೂರಿನಲ್ಲಿ ಆನೇಕ ವೃತ್ತಿಗಳನ್ನು ಮಾಡಿಕೊಂಡಿದ್ದರು. ಅವರು ಸ್ಟೇಜ್ ಶೊಗಳನ್ನು ನೀಡುತ್ತಿದ್ದರು. ತಮ್ಮ ಮನೆಯ ಸಮೀಪದ ಬೆಟ್ಟದಲ್ಲಿನ ರಾಮ ಹುನುಮಾನ್ ದೇವಾಲಯದಲ್ಲಿ ಅವರು ಸ್ಟಂಟ್‌ಗಳನ್ನು ಪ್ರದರ್ಶಿಸುತ್ತಿದ್ದರು. ನಂತರ ಅವರು ಬೆಂಗಳೂರು ಮೆಟ್ರೋಪೋಲಿಟನ್ ಟ್ರಾನ್ಸ್‌ಪೋರ್ಟ್‌ನಲ್ಲಿ ಬಸ್ ಕಂಡಕ್ಟರ್ ಆಗಿ ದುಡಿದರು. ಇಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂ, ಟಿಕೆಟ್ ನೀಡುವ, ಶಿಳ್ಳೆ ಹೊಡೆಯುವ ಶೈಲಿ ಹಾಗೂ ಇನ್ನೂ ಆನೇಕ ರೀತಿಯಿಂದ ಅವರು ಪ್ರಯಾಣಿಕರ ಗಮನ ಸೆಳೆದರು. ಈ ಸಂದರ್ಭವೇ ಅವರು ಆನೇಕ ಸ್ಟೇಜ್ ಪ್ಲೇಗಳಲ್ಲಿ ನಟಿಸಿ ತಮ್ಮ ನಟನಾ ಕಲೆಯನ್ನು ಪೋಷಿಸಿದರು.
ಬಸ್ ಡ್ರೈವರ್ ರಾಜ್ ಬಹದ್ದೂರ್ ಅವರ ಸಹಾಯದಿಂದ 1973ರಲ್ಲಿ ರಜನಿ ಮದ್ರಾಸ್ ಚಿತ್ರತರಬೇತಿ ಸಂಸ್ಥೆಗೆ ಸೇರಿಕೊಂಡರು. ತರಬೇತಿ ಕೇಂದ್ರದಲ್ಲಿ ಉಪ ಪ್ರಾಂಶುಪಾಲ ಎ. ಪ್ರಭಾಕರನ್ ರಜನಿ ಅವರಿಗೆ ಸಹಾಯ ಒದಗಿಸಿದರು.
ಚಿತ್ರರಂಗಕ್ಕಿಳಿದ ನಂತರ ರಜನಿ ಹಿಂತಿರುಗಿ ನೋಡಿದ್ದೇ ಇಲ್ಲ. ತಮಿಳು ಚಿತ್ರಪ್ರೇಮಿಗಳ ಅರಾಧ್ಯ ದೈವ ಎನಿಸಿಕೊಂಡಿರುವ ರಜನಿಕಾಂತ್ ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ. ಇಂಗ್ಲೀಷ್ ಮತ್ತು ಬೆಂಗಾಳಿ ಭಾಷೆಗಳಲ್ಲಿ ಒಟ್ಟು 173 ಚಿತ್ರಗಳಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


