ಮತ್ತೆ ಪ್ರಾರಂಭವಾಗಲಿದೆ 'ಕೃಷ್ಣ'ನ ಮೇನಿಯಾ
ಕೃಷ್ಣಾ ಅಜಯ್ ರಾವ್ ಎಂದೇ ಮರುನಾಮಕರಣ ಮಾಡಿಕೊಂಡಿರುವ ಅಜಯ್ ರಾವ್ ಅವರ ಮುಂದಿನ ಸಿನಿಮಾ ಕೃಷ್ಣ-ರುಕ್ಕು ಚಿತ್ರೀಕರಣ ಆಗಸ್ಟ್ 19 ಕ್ಕೆ ಪ್ರಾರಂಭವಾಗಲಿದೆ.

ಬೆಂಗಳೂರು: ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರಿಗೆ ಕೃಷ್ಣ ಎಂಬುದು ಲಕ್ಕಿ ನೇಮ್. ಅಜಯ್ ರಾವ್ ಗೆ ಹಾಗೂ ಅವರ ಸಿನಿಮಾಗಳಿಗೆ ಕೃಷ್ಣಾ ಎಂಬುದು ಪರ್ಯಾಯ ಪದವಾಗಿದೆ. ಕೃಷ್ಣಾ ಅಜಯ್ ರಾವ್ ಎಂದೇ ಮರುನಾಮಕರಣ ಮಾಡಿಕೊಂಡಿರುವ ಅಜಯ್ ರಾವ್ ಅವರ ಮುಂದಿನ ಸಿನಿಮಾ ಕೃಷ್ಣ-ರುಕ್ಕು ಚಿತ್ರೀಕರಣ ಆಗಸ್ಟ್ 19 ಕ್ಕೆ ಪ್ರಾರಂಭವಾಗಲಿದೆ.
ಕೃಷ್ಣ- ರುಕ್ಕು ಸಿನಿಮಾಗೆ ಈ ಮುನ್ನ "ಮಾವ ಐ ಲವ್ ಯು" ಎಂಬ ಶೀರ್ಷಿಕೆ ನೀಡಲಾಗಿತ್ತು. ಆದರೆ ಅಜಯ್ ರಾವ್ ಅವರಿಗೆ ಕೃಷ್ಣ ಎಂಬುದು ಅದೃಷ್ಟದ ಹೆಸರಾಗಿದ್ದು ಕೃಷ್ಣ-ರುಕ್ಕುಎಂದು ಬದಲಾವಣೆ ಮಾಡಲಾಗಿದೆ. ಪ್ರತಿ ನಟನಿಗೂ ತನ್ನನ್ನು ಗುರುತಿಸಿಕೊಳ್ಳುವುದು ಅಗತ್ಯವಿರುತ್ತದೆ. ಕೆಲವೊಮ್ಮೆ ವಿಶಿಷ್ಠ ಪಾತ್ರಗಳ ಮೂಲಕ ಗುರುತಿಸಿಕೊಳ್ಳುವ ನಟನ ಹೆಸರು ಬ್ರಾಂಡ್ ಆಗಲಿದೆ. ನನಗಿಂತಲೂ ನಿರ್ಮಾಪಕರಿಗೆ 'ಕೃಷ್ಣ' ಅದೃಷ್ಟದ ಹೆಸರಾಗಿದೆ. ಸಿನಿಮಾದ ಪಾತ್ರಗಳಿಗೆ ನಿರ್ದಿಷ್ಟ ಹೆಸರನ್ನು ಕೇಳುವುದಿಲ್ಲ. ಆದರೆ ನಿರ್ಮಾಪಕರೇ ಕೃಷ್ಣ ಎಂಬ ಹೆಸರನ್ನು ಸೂಚಿಸುತ್ತಾರೆ ಎಂದು ಅಜಯ್ ರಾವ್ ತಿಳಿಸಿದ್ದಾರೆ.
ಕೃಷ್ಣನ್ ಲವ್ ಸ್ಟೋರಿ ಸಿನಿಮಾದ ಮೂಲಕ ಅಜಯ್ ರಾವ್ ಗೆ ಈ ಹೆಸರು ಬ್ರಾಂಡ್ ಆಗಿದ್ದರೂ, ಕೃಷ್ಣ ಲೀಲಾ ಸಿನಿಮಾದ ಯಶಸ್ಸಿನಿಂದ ಮತ್ತಷ್ಟು ಅದೃಷ್ಟದ ಹೆಸರಾಗಿದೆ. ನನಗೆ ಕೃಷ್ಣನ ಆಶೀರ್ವಾದ ಇದೆ ಎಂದು ಅಜಯ್ ರಾವ್ ಹೇಳಿದ್ದಾರೆ. ಕೃಷ್ಣ- ರುಕ್ಕು ಸಿನಿಮಾದಲ್ಲಿ ಬೇರೆಲ್ಲಾ ಸಿನಿಮಾಗಳಿಗಿಂತಲೂ ವಿಭಿನ್ನ ಪ್ರೇಮಕಥೆಯಿದೆ. ಕಳೆದಲ್ಲಾ ಸಿನಿಮಾಗಳಲ್ಲೂ ಮೃಧುಸ್ವಭಾವದ ಪಾತ್ರಗಳನ್ನು ಮಾಡಿದ್ದೇನೆ, ಆದರೆ ಈ ಚಿತ್ರದಲ್ಲಿ ನನ್ನ ಪಾತ್ರ ಸಂಪೂರ್ಣವಾಗಿ ಬದಲಾಗಿದೆ ಎಂದಿದ್ದಾರೆ ಅಜಯ್ ರಾವ್. ಅಮೂಲ್ಯ ಅಜಯ್ ರಾವ್ ಗೆ ನಾಯಕಿಯಾಗಿದ್ದು, ಮೊದಲ ಶೆಡ್ಯೂಲ್ ನ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


