ಸ್ಯಾಂಡಲ್ ವುಡ್ ಗೆ ಬಂದ ತೆಲುಗು ನಟ ಜೆಡಿ ಚಕ್ರವರ್ತಿಗೆ ಪಿಸ್ತೂಲ್ ಉಡುಗೊರೆ
'ರಾವಣಿ' ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರುತ್ತಿರೋ ಮಹಿಳಾ ಪ್ರಧಾನ ಥ್ರಿಲಿಂಗ್ ಕಹಾನಿ. ಈ ಚಿತ್ರದಲ್ಲಿ ಟಾಲಿವುಡ್...

'ರಾವಣಿ' ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರುತ್ತಿರೋ ಮಹಿಳಾ ಪ್ರಧಾನ ಥ್ರಿಲಿಂಗ್ ಕಹಾನಿ. ಈ ಚಿತ್ರದಲ್ಲಿ ಟಾಲಿವುಡ್ ಹಾಗೂ ಬಾಲಿವುಡ್ ನ ಖ್ಯಾತ ನಟ ಜೆ.ಡಿ ಚಕ್ರವರ್ತಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪೂಜಾ ಗಾಂಧಿ ನಿರ್ಮಾಣ ಹಾಗೂ ನಟನೆಯಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಚಂದ್ರಚೂಡ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಎರಡನೇ ಸಿನಿಮಾ ಇದಾಗಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ಪೆಷಲ್ ಥ್ರಿಲಿಂಗ್ ಸಿನಿಮಾವಾಗಿರುವ ರಾವಣಿ ಚಿತ್ರದ ಫಸ್ಟ್ ಲುಕ್ ಪೋಸ್ಟ್ರರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ರಾವಣಿ ಚಿತ್ರದಲ್ಲಿ ಚಕ್ರವರ್ತಿ ಮೇಜರ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೆಡಿ ಚಕ್ರವರ್ತಿ 90 ದಶಕದಲ್ಲಿ ಸ್ಟಾರ್ ಆಗಿ ಮಿಂಚಿದ ನಟ. ಕುರುಚಲು ಗಡ್ಡ ಮತ್ತು ಪಿಸ್ತೂಲ್ ನಿಂದ ಫೇಮಸ್ ಆದ ನಟ.
ಚಕ್ರವರ್ತಿಯ ಟ್ರೇಡ್ ಮಾರ್ಕ್ ಪಿಸ್ತೂಲ್ ಮತ್ತು ಕುರುಚಲು ಗಡ್ಡ. ಈ ಲುಕ್ ನಿಂದಲೇ ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಸಕತ್ ಜನಪ್ರಿಯರಾಗಿದ್ದರು. ಸೈಲೆಂಟ್ ವೈಯಲೆಂಟ್ ಥ್ರಿಲರ್ ಗಳಲ್ಲಿ ಟಿಪಿಕಲ್ ಪಾತ್ರ ಮಾಡಿರೋ ಜೆಡಿ ಚಕ್ರವರ್ತಿ ಇದೀಗ ರಾವಣಿ ಚಿತ್ರದಲ್ಲೂ ಇಂತಹದ್ದೊಂದು ವಿಭಿನ್ನ ಪಾತ್ರ ಮಾಡುತ್ತಾದ್ದಾರಂತೆ. ಅಲ್ಲದೇ ರಾವಣಿ ಚಿತ್ರದ ಥೀಮ್ ಕೂಡ ಪಿಸ್ತೂಲ್ ಆಗಿದ್ದು, ಈ ಹಿನ್ನಲೆಯಲ್ಲಿ ಕನ್ನಡಕ್ಕೆ ಬಂದ ಜೆಡಿ ಚಕ್ರವರ್ತಿಗೆ ಪಿಸ್ತೂಲ್ ಉಡುಗೊರೆಯನ್ನಾಗಿ ನೀಡಲಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡ ಜೆಡಿ ಚಕ್ರವರ್ತಿ ಅವರಿಗೆ ಪಿಸ್ತೂಲ್ ಉಡುಗೊರೆಯನ್ನಾಗಿ ನೀಡಿದೆ. ಸೆಪ್ಟೆಂಬರ್ ನಲ್ಲಿ ರಾವಣಿ ಚಿತ್ರ ಸೆಟ್ಟೇರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


