ಸಿನಿಮಾ ಸುದ್ದಿ

ಬಾಹುಬಲಿ೨ ಕ್ಕೆ ೧೦೦ ದಿನ ಮೀಸಲಿಟ್ಟ ಸತ್ಯರಾಜ್

ಜನಪ್ರಿಯ ತಮಿಳು ನಟ ಸತ್ಯರಾಜ್ ಅವರು ಬಾಹುಬಲಿಯ 'ಕಟ್ಟಪ್ಪ' ಪಾತ್ರ ಪೋಷಣೆಯಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದಾರೆ. ಈಗ ಬಾಹುಬಲಿ

ಬಾಹುಬಲಿ೨ ಕ್ಕೆ ೧೦೦ ದಿನ ಮೀಸಲಿಟ್ಟ ಸತ್ಯರಾಜ್
'ಬಾಹುಬಲಿ' ಸಿನೆಮಾದಲ್ಲಿ ಕಟ್ಟಪನ ಪಾತ್ರದಲ್ಲಿ ಸತ್ಯರಾಜ್
Published On :

ಚೆನ್ನೈ: ಜನಪ್ರಿಯ ತಮಿಳು ನಟ ಸತ್ಯರಾಜ್ ಅವರು ಬಾಹುಬಲಿಯ 'ಕಟ್ಟಪ್ಪ' ಪಾತ್ರ ಪೋಷಣೆಯಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದಾರೆ. ಈಗ ಬಾಹುಬಲಿ ದ್ವಿತೀಯಾರ್ಧಕ್ಕೆ ೧೦೦ ದಿನಗಳನ್ನು ಮೀಸಲಿಡುವಂತೆ ಅವರನ್ನು ಕೇಳಿಕೊಳ್ಳಲಾಗಿದೆ.

"ಬಾಹುಬಲಿ ೨ ರ ಚಿತ್ರೀಕರಣ ಸೆಪ್ಟಂಬರ್ ನಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ೪೦% ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಸತ್ಯರಾಜ್ ಸರ್ ಅವರಿಗೆ ೧೦೦ ದಿನಗಳನ್ನು ಮೀಸಲಿಡಲು ಕೋರಿಕೊಳ್ಳಲಾಗಿದೆ" ಎಂದು ಸಿನೆಮಾದ ಮೂಲಗಳು ತಿಳಿಸಿವೆ.

ಚಿತ್ರೀಕರಣಕ್ಕೆ ಬಿಡುವಾಗಿರಲು ವಿಜಯ್ ಅವರ ಮುಂದಿನ ಬೃಹತ್ ಚಿತ್ರವನ್ನು ಸತ್ಯರಾಜ್ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

"ನಟ ವಿಜಯ್ ಅವರ ಇನ್ನೂ ಹೆಸರಿಡದ ೫೯ ನೆ ತಮಿಳು ಚಿತ್ರದ ಖಳ ನಾಯಕ ಪಾತ್ರಕ್ಕೆ ಅವರನ್ನು ಕೇಳಲಾಯಿತು. ಆದರೆ ಬಾಹುಬಲಿ ದ್ವಿತೀಯ ಭಾಗರ ಚಿತ್ರೀಕರಣ ಸಮಯದಲ್ಲಿ ಬಿಡುವಾಗಿರಲು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದರು" ಎಂದು ಮೂಲಗಳು ತಿಳಿಸಿವೆ.

೨೦೧೬ರ ಬೇಸಿಗೆಯಲ್ಲಿ ಬಾಹುಬಲಿ೨ ಬಿಡುಗಡೆ ಕಾಣಲಿದೆ. ಅತಿ ಹೆಚ್ಚು ಗಳಿಕೆ ಕಂಡ ದಕ್ಷಿಣ ಭಾರತದ ಸಿನೆಮಾ ಎಂದು ಹೆಗ್ಗಳಿಕೆ ಗಳಿಸಿರುವ ಬಾಹುಬಲಿ ೫೦೦ಕೋಟಿ ರೂ ಗಳಿಕೆಯನ್ನು ಮೀರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.