'ಬಾಹುಬಲಿ'ಗೆ ಪ್ರಶಂಸೆಯ ಮಳೆಗೆರೆದ ಶಾರುಕ್ ಖಾನ್
ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಲನಚಿತ್ರಕ್ಕೆ ತಲೆ ಬಾಗಿರುವ ಬಾಲಿವುಡ್ ತಾರೆಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ ಬಾಲಿವುಡ್ ಬಾದಶಃ ಶಾರುಕ್ ಖಾನ್.

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಲನಚಿತ್ರಕ್ಕೆ ತಲೆ ಬಾಗಿರುವ ಬಾಲಿವುಡ್ ತಾರೆಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ ಬಾಲಿವುಡ್ ಬಾದಶಃ ಶಾರುಕ್ ಖಾನ್. ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಸಿನೆಮಾವನ್ನು ಶಾರುಕ್ ಮನಸಾರೆ ಪ್ರಶಂಸಿಸಿದ್ದಾರೆ. ಈ ಹಿಂದೆ ಅಮಿತಾಬ್ ಬಚ್ಚನ್, ರಿಷಿ ಕಪೂರ್ ಮತ್ತು ಸಲ್ಮಾನ್ ಖಾನ್ ಬಾಹುಬಲಿಗೆ ಮನಸೋತಿದ್ದರು.
೪೯ ವರ್ಷದ 'ಚೆನ್ನೈ ಎಕ್ಸ್ಪ್ರೆಸ್' ನಟ ಬಾಹುಬಲಿಯ ಬಗ್ಗೆ ಟ್ವೀಟ್ ಮಾಡಿದ್ದು 'ಸ್ಪೂರ್ತಿದಾಯಕ' ಎಂದಿದ್ದಾರೆ. "ಬಾಹುಬಲಿ ಕಷ್ಟ ಪಟ್ಟು ದುಡಿದು ಮಾಡಿರುವ ಸಿನೆಮಾ. ಇದು ನೀಡಿದ ಸ್ಫೂರ್ತಿಗೆ, ಚಲನಚಿತ್ರದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳು. ದಾಪುಗಾಲು ಇಟ್ಟರಷ್ಟೇ ನೀವು ಆಕಾಶಕ್ಕೆ ಜಿಗಿಯಬಹುದು" ಎಂದು ಬರೆದಿದ್ದಾರೆ.
ಇತ್ತೀಚಿಗೆ ಬಾಹುಬಲಿಯ ಕಟ್ಟಾ ಅಭಿಮಾನಿಗಳು ಸಿನೆಮಾದ ಬಗ್ಗೆ ಖಾನ್ ಅವರ ಮೌನವನ್ನು ಪ್ರಶ್ನಿಸಿದ್ದರು ಹಾಗು ಅವರಲ್ಲಿ ಕೆಲವರಂತೂ ಬಾಹುಬಲಿ ಯಶಸ್ಸಿನಿಂದ ಶಾರುಕ್ ಅವರಿಗೆ ಹೊಟ್ಟೆಕಿಚ್ಚಾಗಿದೆ ಎಂದು ಕೂಡ ಜರಿದಿದ್ದರು. ಈಗ ಅವರೆಲ್ಲರಿಗೂ ತಮ್ಮ ಸರಳ ಟ್ವೀಟ್ ಮೂಲಕ ಎಸ್ ಆರ್ ಕೆ ಉತ್ತರಿಸಿದ್ದಾರೆ.
ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಈ ಸಿನೆಮಾದಲ್ಲಿ ಪ್ರಭಾಸ್, ತಮನ್ನ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಹುಬಲಿ ಎರಡನೇ ಭಾಗ ೨೦೧೬ರಲ್ಲಿ ತೆರೆ ಕಾಣಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


