ದೀಪಿಕಾ ಗ್ಲಾಮರ್ ಪಾತ್ರಗಳನ್ನು ಮಾಡಬಹುದು, ಆದರೂ ಅವರು ಪ್ರಯೋಗಾತ್ಮಕ: ಇರ್ಫಾನ್
ನಟಿ ದೀಪಿಕ ಪಡುಕೋಣೆ ಹೆಚ್ಚೆಚ್ಚು ಗ್ಲಾಮರಸ್ ಪಾತ್ರಗಳನ್ನು ಮಾಡಬಹುದಾದರೂ, ಹಲವಾರು ಪ್ರಯೋಗಾತ್ಮಕ

ಮುಂಬೈ: ನಟಿ ದೀಪಿಕ ಪಡುಕೋಣೆ ಹೆಚ್ಚೆಚ್ಚು ಗ್ಲಾಮರಸ್ ಪಾತ್ರಗಳನ್ನು ಮಾಡಬಹುದಾದರೂ, ಹಲವಾರು ಪ್ರಯೋಗಾತ್ಮಕ ಪಾತ್ರಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಅವರ ಧೈರ್ಯವನ್ನು 'ಪೀಕು' ಚಲನಚಿತ್ರದ ಸಹನಟ ಇರ್ಫಾನ್ ಖಾನ್ ಪ್ರಶಂಸಿಸಿದ್ದಾರೆ.
"ದೀಪಿಕಾ ಅವರಿಗೆ ವಿವಿಧ ಪಾತ್ರಗಳಲ್ಲಿ ನಟಿಸುವಾಸೆ ಮತ್ತು ನಟಿಯಾಗಿ ತಮ್ಮನ್ನು ವಿಸ್ತರಿಸಿಕೊಳ್ಳಲು ಅವರಿಗೆ ಇಷ್ಟ.... ಇದು ಬಹಳ ಆಸಕ್ತಿದಾಯಕ. ಉದ್ಯಮದಲ್ಲಿ ಅವರು ನಂಬರ್ ೧ ಸ್ಥಾನದಲ್ಲಿದ್ದರೆ ಮತ್ತು ಚಿತ್ರೋದ್ಯಮದಲ್ಲಿ ತಮ್ಮ ಸ್ಥಾನ ಕಾಯ್ದುಕೊಳ್ಳಲು ಅವರು ಗ್ಲಾಮರಸ್ ಪಾತ್ರಗಳನ್ನು ಅವರು ಮುಂದುವರೆಸಬಹುದು, ಆದರೆ ಅವರು ಪ್ರಯೋಗಾತ್ಮಕವಾಗಿದ್ದಾರೆ" ಎಂದು ಇರ್ಫಾನ್ ಹೇಳಿದ್ದಾರೆ.
ಸುಜಿತ್ ಸರ್ಕಾರ್ ನಿರ್ದೇಶನದ ಜೂಹಿ ಚತುರ್ವೇದಿ ಅವರ ಕಥೆ ಇರುವ 'ಪೀಕು' ಚಲನಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಇರ್ಫಾನ್ ಖಾನ್ ಹೊರತಾಗಿ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದಾರೆ. ಈ ಸಿನೆಮಾ ಮೇ ೮ ರಂದು ಬಿಡುಗಡೆ ಕಾಣಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


