ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ, ಆದರೆ ಮದುವೆ ಸದ್ಯಕ್ಕಿಲ್ಲ: ರಣಬೀರ್ ಕಪೂರ್
ನಟಿ ಕತ್ರಿನಾ ಕೈಫ್ ಜೊತೆಗಿನ ಸಂಬಂಧದ ಜೊತೆ ಸುದ್ದಿಯಲ್ಲಿರುವ ನಟ ರಣಬೀರ್ ಕಪೂರ್ ತಾವು ಪ್ರೇಮದಲ್ಲಿ ಬಿದ್ದಿರುವುದನ್ನು

ಮುಂಬೈ: ನಟಿ ಕತ್ರಿನಾ ಕೈಫ್ ಜೊತೆಗಿನ ಸಂಬಂಧದ ಜೊತೆ ಸುದ್ದಿಯಲ್ಲಿರುವ ನಟ ರಣಬೀರ್ ಕಪೂರ್ ತಾವು ಪ್ರೇಮದಲ್ಲಿ ಬಿದ್ದಿರುವುದನ್ನು ಒಪ್ಪಿಕೊಂಡಿದ್ದಾರೆ ಆದರೆ ಸದ್ಯಕ್ಕೆ ಮದುವೆಯಾಗುವ ಯಾವುದೇ ಯೋಜನೆಯಿಲ್ಲ ಎಂದಿದ್ದಾರೆ.
ತಮ್ಮ ಮದುವೆ ಖಾಸಗೆ ವಿಷಯವೇ ಎಂಬ ಪ್ರಶ್ನೆಗೆ "ಅದನ್ನು ಖಾಸಗಿಯಾಗಿ ಇಡಲು ಸಾಧ್ಯವಿಲ್ಲ. ನಾವು ನಟರು. ಆರು ವರ್ಷದ ಮೊದಲೇ ನನ್ನ ಮಾಡುವೆ ದಿನಾಂಕ ಗೊತ್ತುಪಡಿಸಲಾಗಿತ್ತು. ಇದು ವಿಶೇಷ ದಿನ. ಅದಕ್ಕೆ ನಾನೇ ಘೋಷಿಸುತ್ತೇನೆ. ಆದರೆ ಸದ್ಯಕ್ಕೆ ಅಂತಹ ಯೋಜನೆಗಳ್ಯಾವುವೂ ಇಲ್ಲ" ಎಂದಿದ್ದರೆ ರಣಬೀರ್.
"ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ, ನಾನು ಅದಕ್ಕೆ ಬದ್ಧನಾಗಿದ್ದೇನೆ ಹಾಗೂ ಜವಾಬ್ದಾರಿ ಬಂದಿದೆ ಎಂದೆನಿಸುತ್ತಿದೆ. ಆದರೆ ಮದುವೆಯ ವಿಷಯಕ್ಕೆ ಬಂದಾಹ ಊಹೆ ಸಂತೋಷವನ್ನು ಕೆಡಿಸುತ್ತದೆ. ಆದುದರಿಂದ ನನ್ನ ಮದುವೆ ದಿನಾಂಕವನ್ನು ಊಹಿಸದಂತೆ ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ" ಎಂದಿದ್ದಾರೆ ರಣಬೀರ್.
ತಮ್ಮ ಕಳೆದ ಎರಡು ಚಲನಚಿತ್ರಗಳು 'ಬೇಶರಮ್' ಮತ್ತು 'ರಾಯ್' ಅಷ್ಟೇನು ಒಳ್ಳೆಯ ಫಲಿತಾಂಶ ನೀಡದಿದ್ದರಿಂದ ಮುಂಬರಲಿರುವ ಸಿನೆಮಾ 'ಬಾಂಬೆ ವೆಲ್ವೆಟ್' ಬಗ್ಗೆ ಒತ್ತಡವಿದೆ. ಎಲ್ಲವೂ ಸರಿಹೋಗುತ್ತದೆ ಎಂದು ನಂಬಿದ್ದೇನೆ ಎನ್ನುತ್ತಾರೆ.
ಅನುರಾಗ್ ಕಶ್ಯಪ್ ನಿರ್ದೇಶಿಸಿರುವ 'ಬಾಂಬೆ ವೆಲ್ವೆಟ್' ಸಿನೆಮಾದಲ್ಲಿ ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಕರಣ್ ಜೋಹರ್ ನಟಿಸಿದ್ದಾರೆ. ಈ ಸಿನೆಮಾ ಮೇ ೧೫ ರಂದು ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


