ತಮಿಳು ನಟಿಯೊಬ್ಬರ ಸೊಸೆಯಾಗ್ತಿದ್ದಾರಂತೆ ನಯನಾತಾರಾ!
ನಯನತಾರಾ ಹಿರಿಯ ತಮಿಳು ನಟಿಯೊಬ್ಬರ ಸೊಸೆಯಾಗುತ್ತಿದ್ದಾರೆಂಬುದು ಇತ್ತೀಚಿನ ತಾಜಾ ಸುದ್ದಿ...

ಎರಡೆರಡು ಪ್ರೇಮ ವೈಫಲ್ಯಗಳ ನಂತರ ನಟಿ ನಯನತಾರಾ ಮದುವೆಗೆ ಸಿದ್ಧವಾಗುತ್ತಿದ್ದಾರಂತೆ. ನಟ ಪ್ರಭುದೇವ್ ಜೊತೆಗಿನ ಲವ್ ಬ್ರೇಕ್ ಅಪ್ ನಂತರ ವೃತ್ತಿಯ ಕಡೆ ನಯನಾ ಹೆಚ್ಚು ಗಮನ ಹರಿಸಿದ್ದರು.
ನಯನತಾರಾ ಹಿರಿಯ ತಮಿಳು ನಟಿಯೊಬ್ಬರ ಸೊಸೆಯಾಗುತ್ತಿದ್ದಾರೆಂಬುದು ಇತ್ತೀಚಿನ ತಾಜಾ ಸುದ್ದಿ. ಆದರೆ ಆ ನಟಿ ಯಾರು, ನಯನ ಮದುವೆಯಾಗುತ್ತಿರುವ ಹುಡುಗ ಯಾರು ಎಂಬುದು ಮಾತ್ರ ಇನ್ನೂ ನಿಗೂಢ.
ಪ್ರೇಮ ವೈಫಲ್ಯದಿಂದ ಜೀವನದಲ್ಲಿ ಎರೆಡೆರಡು ಬಾರಿ ಎಡವಿದರೂ ವೃತ್ತಿ ಬದುಕು ಹಳಿ ತಪ್ಪದಂತೆ ನಯನ ಎಚ್ಚರ ವಹಿಸಿದ್ದಾರೆ. ಹೀಗಾಗಿ ಇಂದಿಗೂ ಸಹ ಅವರಿಗೆ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶ ಲಭಿಸುತ್ತಿದೆ. ಪ್ರಸಿದ್ಧ ನಟ ಸೂರ್ಯ, ಕಾರ್ತಿ ಹಾಗೂ ವಿಜಯ್ ಸೇತುಪತಿಯಂತ ನಟರ ಜೊತೆ ನಯನತಾರಾ ಅಭಿನಯಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಯನತಾರಾ ಶೂಟಿಂಗ್ ಮುಗಿದ ನಂತರ ಸಿಕ್ಕಾಪಟ್ಟೆ ಫೋನಿನಲ್ಲಿ ಬ್ಯುಸಿಯಾಗಿರ್ತಾರಂತೆ. ನಯನತಾರಾ ತಮ್ಮ ವುಡ್ ಬಿ ಯೊಂದಿಗೆನೇ ಮೊಬೈಲ್ ನಲ್ಲಿ
ಮಾತಾಡುತ್ತಿರುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಇಷ್ಟು ದಿನ ಮೂಡಿಯಾಗಿರುತ್ತಿದ್ದ ನಯನಾ ಇತ್ತೀಚೆಗೆ ಚಿತ್ರತಂಡಗಳ ಜೊತೆ ಖುಷಿಯಾಗಿರುತ್ತಾರಂತೆ. ಆದ್ರೆ ನಯನತಾರಾರನ್ನು ವರಿಸುತ್ತಿರುವ ಆ ಅದೃಷ್ಟಶಾಲಿ ಯಾರು ಎಂಬುದು ಸದ್ಯದ ಕೂತೂಹಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


