ಸಿನಿಮಾ ಸುದ್ದಿ

ಜಯಪ್ರದಾಗೆ ಕಲಾಶ್ರೀ ಪ್ರಶಸ್ತಿ ಗೌರವ

ನಟನೆ ಹಿಂದಕ್ಕೆ ಸರಿಸಿ ರಾಜಕಾರಿಣಿಯಾದ ಜಯಪ್ರದಾ ಅವರು ಕಲೆ ಮತ್ತು ಮನರಂಜನಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ದಾದಾ ಸಾಹೇಬ್ ಫಾಲ್ಕೆ

ಜಯಪ್ರದಾಗೆ ಕಲಾಶ್ರೀ ಪ್ರಶಸ್ತಿ ಗೌರವ
ಜಯಪ್ರದಾ
Published On :

ಮುಂಬೈ: ನಟನೆ ಹಿಂದಕ್ಕೆ ಸರಿಸಿ ರಾಜಕಾರಿಣಿಯಾದ ಜಯಪ್ರದಾ ಅವರು ಕಲೆ ಮತ್ತು ಮನರಂಜನಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರ ಫೌಂಡೇಶನ್ ಮಂಗಳವಾರ ಕಲಾಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ.

ಈ ಗೌರವದಿಂದ ಸಂತಸಗೊಂಡಿರುವ ೫೩ ವರ್ಷದ ಜಯಪ್ರದ "ಇಂತಹ ಪ್ರತಿಷ್ಟಿತ ಗೌರವನ್ನು ಅತಿ ವಿನಯದಿಂದ ಸ್ವೀಕರಿಸುತ್ತೇನೆ. ಅದಕ್ಕಾಗಿ ಫೌಂಡೇಶನ್ ಮತ್ತು ನನ್ನ ಹಿತೈಶಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮನರಂಜನಾ ಕ್ಷೇತ್ರಕ್ಕೆ ಹೀಗೆಯೇ ನನ್ನ ಸೇವೆಯನ್ನು ಮುಂದುವರೆಸುತ್ತೇನೆ" ಎಂದು ಜಯಪ್ರದಾ ತಿಳಿಸಿದ್ದಾರೆ.

ಜಯಪ್ರದಾ ತನ್ನ ಸರಳ ನೋಟ ಮತ್ತು ಸಮರ್ಥ ನಟನೆಯಿಂದ ಸಿನೆಮಾರಂಗದಲ್ಲಿ ಹಲವು ವರ್ಷಗಳ ಮಿಂಚಿದ್ದರು. 'ತ್ಹೊಫಾ', 'ಔಲಾದ್', 'ಸರ್ಗಮ್' ಮತ್ತು 'ಶರಾಭಿ' ಜಯಪ್ರದಾ ಅವರಿಗೆ ಮನ್ನಣೆ ತಂದುಕೊಟ್ಟ ಹಿಂದಿ ಚಿತ್ರಗಳು.

೨೦೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಈ ನಟಿ ಹಿಂದಿ ಅಲ್ಲದೆ, ತಮಿಳು, ಮಲಯಾಳಮ್, ತೆಲುಗು, ಕನ್ನಡ ಸಿನೆಮಾಗಳಲ್ಲು ನಟಿಸಿದ್ದಾರೆ.

ಧೀಮಂತ ನಟರಾದ ಕಮಲ ಹಾಸ್ಸನ್, ರಜನಿಕಾಂತ್, ಅಮಿತಾಬ್ ಬಚ್ಚನ್ ಮತ್ತು ಜಿತೇಂದ್ರ ಜೊತೆಗಿದ್ದ ಸಿನೆಮಾ ಕೆಮಿಸ್ಟ್ರಿಗೆ ಜಯಪ್ರದ ಇಂದಿಗೂ ಜನಪ್ರಿಯ.

ಸಂಜಯ್ ಶರ್ಮಾ ಅವರ ಹೆಸರಿಡದ ಚಲನಚಿತ್ರವೊಂದರಲ್ಲಿ ನಟಿಸಿ ಬಾಲಿವುಡ್ಡಿಗೆ ಹಿಂದಿರುಗಲು ಜಯಪ್ರದಾ ಸನ್ನದ್ಧರಾಗಿದ್ದಾರೆ. ಈ ಹಾರರ್ ಸಿನೆಮಾದಲ್ಲಿ ಆಧುನಿಕ ಯುಗದ ರಾಣಿಯ ಪಾತ್ರ ವಹಿಸಲಿದ್ದಾರೆ ಜಯಪ್ರದಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.