ಶಾರುಕ್ ಜತೆ ಸ್ಕ್ರೀನ್ ಶೇರ್ ಮಾಡಲಿರುವ ಸಾಹಸ ನಿರ್ದೇಶಕ ರವಿವರ್ಮಾ
ವಿಭಿನ್ನ ಸಾಹಸಗಳನ್ನೊಳಗೊಂಡ 'ರಣವಿಕ್ರಮ' ಚಿತ್ರ ಇತ್ತೀಚೆಗಷ್ಟೇ ತೆರಕಂಡು ರಾಜ್ಯಾದ್ಯಂತ ಬರ್ಭರಿಯಾಗಿ ಮುನ್ನುಗುತ್ತಿದ್ದು...

ವಿಭಿನ್ನ ಸಾಹಸಗಳನ್ನೊಳಗೊಂಡ 'ರಣವಿಕ್ರಮ' ಚಿತ್ರ ಇತ್ತೀಚೆಗಷ್ಟೇ ತೆರಕಂಡು ರಾಜ್ಯಾದ್ಯಂತ ಬರ್ಭರಿಯಾಗಿ ಮುನ್ನುಗುತ್ತಿದ್ದು, ಸಾಹಸ ನಿರ್ದೇಶಕ ರವಿವರ್ಮಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಜತೆ ನಟಿಸುವ ಅವಕಾಶ ಸಿಕ್ಕಿದೆ.
ಶಾರುಕ್ ಖಾನ್ ಅವರ 'ರಾಯೀಸ್' ಚಿತ್ರದಲ್ಲಿ ರವಿವರ್ಮಾ ನಟಿಸಲಿದ್ದಾರೆ. ಈ ಬಗ್ಗೆ ಸ್ವತಃ ಹೇಳಿರುವ ರವಿವರ್ಮಾ, ರಾಯೀಸ್ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಇದಕ್ಕಿಂತ ಹೆಚ್ಚಿಗೆ ನಾನು ಏನನ್ನು ಹೇಳುವುದಿಲ್ಲ ಎಂದರು. ರಾಯೀಸ್ ಚಿತ್ರಕ್ಕೆ ಫೈಟ್ ಕಂಪೊಸ್ ಮಾಡುವಾಗ ನಿರ್ದೇಶಕ ರಾಹುಲ್ ದೋಲಂಕಿಯಾ ಅವರು ಪಾತ್ರವೊಂದನ್ನು ಮಾಡುವಂತೆ ಹೇಳಿದ್ದರು. ಕೂಡಲೇ ನಾನು ಓಕೆ ಅಂದೆ ಎಂದರು.
ರವಿ ವರ್ಮಾ ಈಗಾಗಲೇ ಕೆಲವಾರು ಹಿಂದಿ ಸಿನಿಮಾಗಳಲ್ಲಿ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯ 200ಕ್ಕೂ ಹೆಚ್ಚು ಚಿತ್ರಗಳಿಗೆ ಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ರವಿವರ್ಮಾ ಬಗ್ಗೆ ಬಾಲಿವುಡ್'ನಲ್ಲಿ ವಿಶೇಷ ಆಸಕ್ತಿ ಇದೆ.
ಟಿಪಿಕಲ್ ಬಾಲಿವುಡ್ ಶೈಲಿಗಿಂತ ವಿಭಿನ್ನವಾಗಿ ಸಾಹಸ ಸಂಯೋಜನೆ ಮಾಡುವ ರವಿವರ್ಮಾ ಕಂಡರೆ ಸಲ್ಮಾನ್'ರಂಥ ದೊಡ್ಡ ಸ್ಟಾರ್'ಗಳೂ ಗೌರವ ಸಲ್ಲಿಸುತ್ತಾರಂತೆ. ಸಲ್ಲು ಭಾಯ್ ಅಭಿನಯದ "ಜೈಹೋ" ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದು ರವಿವರ್ಮಾನೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


