ಸಿನಿಮಾ ಸುದ್ದಿ

ನಾಗಾರ್ಜುನ ಚಿತ್ರದಲ್ಲಿ ಶೃತಿ ಹಾಸನ್?

ಕಮಲ್ ಹಾಸನ್ ಮಗಳು ಶೃತಿ ಹಾಸನ್ ಇದೀಗ ಹಳೆ ನಟರೊಂದಿಗೆ...

ನಾಗಾರ್ಜುನ ಚಿತ್ರದಲ್ಲಿ ಶೃತಿ ಹಾಸನ್?
ನಟ ನಾಗಾರ್ಜುನ, ಶೃತಿ ಹಾಸನ್
Published On :

ಯುವ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ಕಮಲ್ ಹಾಸನ್ ಮಗಳು ಶೃತಿ ಹಾಸನ್ ಇದೀಗ ಹಳೆ ನಟರೊಂದಿಗೆ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್‌ನ ಬಹು ಬೇಡಿಕೆ ನಟಿಯಾಗಿರುವ ಶೃತಿ ಹಾಸನ್ ಸದ್ಯ  55ರ ಹರೆಯ ತೆಲುಗಿನ ನಾಗಾರ್ಜುನ ಜೊತೆ ಆನ್‌ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ.

ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನದ ಬಹು ತಾರಾಗಣ ಚಿತ್ರದಲ್ಲಿ ನಾಗಾರ್ಜುನ ಮತ್ತು ಕಾರ್ತಿ ನಟಿಸುತ್ತಿದ್ದು, ಇದೇ ಚಿತ್ರದಲ್ಲಿ ಶೃತಿ ಹಾಸನ್ ನಟಿಸಲ್ಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ವಂಶಿ ಪೈಡಿಪಲ್ಲಿ ನಿರ್ದೇಶನದ ರಾಮ್ ಚರಣ್ ತೇಜ ಅಭಿನಯದ 'ಎವಡು' ಚಿತ್ರದಲ್ಲಿ ಶೃತಿ ನಟಿಸಿದ್ದರು. ಇದೀಗ ವಂಶಿ ತಮ್ಮ ಮುಂದಿನ ಚಿತ್ರಕ್ಕೂ ಶೃತಿ ಹಾಸನ್‌ಗೆ ಅಪ್ರೋಚ್ ಮಾಡಿದ್ದಾರೆ.

ಪಿವಿಪಿ ಸಿನಿಮಾ ಬ್ಯಾನರ್ ಅಡಿಯಲ್ಲಿ ಸಿದ್ಧವಾಗುತ್ತಿದ್ದು, ಚಿತ್ರದ ಕಥೆ ಕೇಳಿ ಶೃತಿ ಥ್ರಿಲ್ ಆಗಿದ್ದು, ಸದ್ಯದಲ್ಲೇ ಓಕೆ ಎನ್ನುವ ಸಾಧ್ಯತೆಗಳಿವೆ.

ಸದ್ಯ ನಿರ್ದೇಶಕ ಕೊರಟಾಲಾ ಶಿವ ನಿರ್ದೇಶನದ ತೆಲುಗಿನ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ನಟಿಸುತ್ತಿದ್ದಾರೆ. ಇದೇ ವೇಳೆ, ತಮಿಳಿನ ವಿಜಯ್‌ರ 58ನೇ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.