ಮನೇಲಿ ಮೌಸ್, ಬೀದೀಲಿ 'ಪ್ರಿನ್ಸ್'!
ದೂಕುಡು, ಆಗಡು, ಒಕ್ಕಡು, ಬ್ಯುಸಿನೆಸ್‌ಮನ್ ಅಂತೆಲ್ಲ...

ದೂಕುಡು, ಆಗಡು, ಒಕ್ಕಡು, ಬ್ಯುಸಿನೆಸ್‌ಮನ್ ಅಂತೆಲ್ಲ ಸಿನಿಮಾಗಳಲ್ಲಿ ಪೌರುಷ ಮೆರೆಯುವ ತೆಲುಗಿನ ಪ್ರಿನ್ಸ್ ಮಹೇಶ್‌ಬಾಬು ಮನೇಲಿ ಮಾತ್ರ ಅಮ್ಮಾವ್ರ ಗಂಡನಾ? ಹೀಗೊಂದು ಗಾಸಿಪ್ ಟಾಲಿವುಡ್‌ನಲ್ಲಿ ಹರಡಿದೆ.
ಮಹೇಶ್‌ಬಾಬು ಹೆಂಡ್ತಿ ನಿಮಗೆ ಗೊತ್ತಿರಬೇಕು. ನಮ್ರತಾ ಶಿರೋಡ್ಕರ್. ಲವ್ ಮ್ಯಾರೇಜ್ ನಂತರ ಆಕೆ ಚಿತ್ರರಂಗದಿಂದ ದೂರವಾಗಿದ್ದರಿಂದ ಚಿತ್ರಪ್ರೇಮಿಗಳ ನೆನಪಲ್ಲಿರೋದು ಡೌಟೇ. ರವಿಚಂದ್ರನ್ ಜೊತೆ ಚೋರ ಚಿತ್ತ ಚೋರದಲ್ಲೂ ನಟಿಸಿದ್ದ ಈ ಮಾಡಿ ಮಿಸ್ ಇಂಡಿಯಾ ಈಗ ಮಹೇಶ್ ಬಾಬು ಮೇಲೆ ಅಧಿಪತ್ಯ ಸಾಧಿಸಿದ್ದಾಳೆ.
ಆತನನ್ನು ಸಂಪರ್ಕಿಸಬೇಕಂದ್ರೆ ನಮ್ರತಾ ಮೇರ್ಡ ಒಪ್ಪಿಗೆ ಇರಲೇಬೇಕಂತೆ. ಇದು ಜನಸಾಮಾನ್ಯರಿಗೆ ಮಾಡಿರೋ ರೂಲ್ ಅಲ್ಲ. ಇಂಡಸ್ಟ್ರಿಯ ಎಲ್ಲ ಹಿರಿತಲೆಗೂ ಇದೇ ನಿಯಮ ಅನ್ವಯ. ಮಹೇಶ್‌ಬಾಬು ಚಿತ್ರಗಳು ಇತ್ತೀಚೆಗೆ ನೆಲಕಚ್ಚಿದ್ದರಿಂದ ಆತನ ವೃತ್ತಿಜೀವನದ ಜವಾಬ್ದಾರಿಯನ್ನು ಆಕೆಯೇ ವಹಿಸಿಕೊಂಡಿದ್ದಾಳೆ. ಮೊನ್ನೆ ಅದ್ಯಾರೋ ನಿರ್ಮಾಪಕ ಈಕೆಯ ಪರ್ಮಿಶನ್ ಇಲ್ಲದೇ ಕಥೆ ಹೇಳಿ ಹೋದದ್ದಕ್ಕೆ ಕೆಂಡಾಮಂಡಲವಾದ ನಮ್ರತಾ ಇನ್ಮುಂದೆ ಹೀಗಾಗೋ ಹಾಗಿಲ್ಲ ಅಂತ ಸ್ಟ್ರಿಕ್ಟಾಗಿ ಆರ್ಡರ್ ಮಾಡಿದ್ದಾಳಂತೆ. ನಮ್ರತಾ ಬಾಸ್ ಆದ ಮೇಲೆ ಪ್ರಿನ್ಸ್ ಅದೃಷ್ಟ ಬದಲಾಗುತ್ತದಾ ಎಂದು ಕಾದುನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


