ಸಿನಿಮಾ ಸುದ್ದಿ

ದೊಡ್ಡ ಮೊತ್ತಕ್ಕೆ ಜೋಗಿ ಪ್ರೇಮ್ ಮಾರಾಟ

ನಟ, ನಿರ್ದೇಶಕ ಕಂ ನಿರ್ಮಾಪಕ ಜೋಗಿ ಪ್ರೇಮ್ ಅವರ ಸಿನಿಮಾಗಳಲ್ಲಿ..

ದೊಡ್ಡ ಮೊತ್ತಕ್ಕೆ ಜೋಗಿ ಪ್ರೇಮ್ ಮಾರಾಟ
ಸನ್ನಿ ಲಿಯೋನ್ - ಪ್ರೇಮ್
Published On :

ನಟ, ನಿರ್ದೇಶಕ ಕಂ ನಿರ್ಮಾಪಕ ಜೋಗಿ ಪ್ರೇಮ್ ಅವರ ಸಿನಿಮಾಗಳಲ್ಲಿ ಹಾಡುಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಸಿನಿಮಾ ಹೇಗೆ ಇರಲಿ, ಹಾಡುಗಳು ಮಾತ್ರ ಸೂಪರ್ ಹಿಟ್ ಎಂಬುದನ್ನು ಅವರ ಎಲ್ಲ ಚಿತ್ರಗಳೂ ನಿರೂಪಿಸಿವೆ. ಮತ್ತು ಆಡಿಯೋ ರೈಟ್ಸ್ ಕೂಡ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಈಗ ಅದು 'ಡಿಕೆ' ಚಿತ್ರದ ಸರದಿ. 'ಶೇಸಮ್ಮ ಶೇಸಮ್ಮ...' ಎನ್ನುತ್ತ ಬಾಲಿವುಡ್ ಬಾಲೆ ಸನ್ನಿ ಲಿಯೋನ್ ಜತೆ ಕುಣಿಯುವ ಮೂಲಕ ಗಾಂಧಿನಗರದ ಗಮನ ಸೆಳೆದ ಪ್ರೇಮ್ ಅವರ 'ಡಿಕೆ' ಚಿತ್ರದ ಆಡಿಯೋ ಹಕ್ಕುಗಳು ಸದ್ದು ಮಾಡುತ್ತಿವೆ.

ಆನಂದ್ ಕಂಪನಿ ಚಿತ್ರದ ಆಡಿಯೋ ಹಕ್ಕುಗಳನ್ನು 25 ಲಕ್ಷ ರೂಪಾಯಿಗಳಿಗೆ ತೆಗೆದುಕೊಂಡಿದೆ. ಆ ಮೂಲಕ ಬಿಡುಗಡೆಯ ಮುನ್ನವೆ 'ಡಿಕೆ' ಚಿತ್ರ ಆರ್ಥಿಕ ಭದ್ರತೆಯನ್ನು ಕಾಯ್ದುಕೊಳ್ಳುತ್ತಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಚೈತ್ರಾ ನಾಯಕಿಯಾಗಿ ಅಭಿನಯಿಸಿದ್ದಾರೆ. ರಕ್ಷಿತಾ ಪ್ರೇಮ್ ಚಿತ್ರದ ನಿರ್ಮಾಪಕರು. ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಪ್ರೇಮ್ ಪುತ್ರ ಅಪ್ಪನ ಜತೆ ಒಂದು ಹಾಡಿನಲ್ಲಿ ಹೆಜ್ಜೆ ಹಾಕಿರುವುದು.

ಅಂದಹಾಗೆ ಸಂಪೂರ್ಣವಾಗಿ 'ಡಿಕೆ' ಚಿತ್ರವನ್ನು ಸಮರ್ಥ್ ವೆಂಚರ್ಸ್ ಪ್ರಸಾದ್ ತೆಗೆದುಕೊಂಡಿದ್ದಾರೆ. ಚಿತ್ರೀಕರಣ ಮುಗಿಸಿದ್ದು, ಚಿತ್ರದ ಆಡಿಯೋ ರೈಟ್ಸ್ 25 ಲಕ್ಷಕ್ಕೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ. ವಿಜಯ್ ಹಂಪಲಿ ನಿರ್ದೇಶನದ ಚಿತ್ರವಿದು.

'ನಾನು ಡಿಕೆ ಚಿತ್ರದ ಹಾಡುಗಳನ್ನು ಕೇಳಿದಾಕ್ಷಣ ಜನ ಕೇಳುವಂಥ ಹಾಡುಗಳು ಇವೆ ಅನಿಸಿತು. ಅಲ್ಲದೆ ಯಾವಾಗಲೂ ಪ್ರೇಮ್ ಸಿನಿಮಾಗಳ ಹಾಡುಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಹೀಗಾಗಿ ಚಿತ್ರದ ಆಡಿಯೋ ರೈಟ್ಸ್ 25 ಲಕ್ಷ ಕೊಟ್ಟಿದ್ದೇವೆ. ಹಾಗೆ ನೋಡಿದರೆ ಮೈನಾ, ಸಂಜು ವೆಡ್ಸ್ ಗೀತಾ ಮುಂತಾದ ಚಿತ್ರಗಳ ಹಾಡುಗಳನ್ನು ಹೀರೋಗಳ ಮುಖ ನೋಡಿ ತೆಗೆದುಕೊಂಡಿದ್ದಲ್ಲ. ಹಾಡುಗಳನ್ನು ಕೇಳಿ ತೆಗೆದುಕೊಂಡಿದ್ದು. ಇತ್ತೀಚೆಗೆ ನಮ್ಮ ಸಂಸ್ಥೆಯಿಂದ ಜಾಕಿ ಹಾಗೂ ಅಣ್ಣಾಬಾಂಡ್ ಚಿತ್ರಗಳ ಆಡಿಯೋರೈಟ್ಸ್‌ಗೆ ಹೆಚ್ಚು ಹಣ ಕೊಟ್ಟಿದ್ವಿ. ಈ ಚಿತ್ರಗಳ ನಂತರ ಅದಕ್ಕಿಂತ ದೊಡ್ಡ ಮೊತ್ತವನ್ನು ಡಿಕೆ ಚಿತ್ರದ ಆಡಿಯೋಗೆ ಕೊಟ್ಟಿದ್ದೇವೆ. ಇದೇ ತಿಂಗಳು 15ರ ನಂತರ ಆಡಿಯೋ ಸಿಡಿಗಳು ಮಾರುಕಟ್ಟೆಗೆ ಬರಲಿವೆ' ಎನ್ನುತ್ತಾರೆ ಆನಂದ್ ಆಡಿಯೋ ಮೋಹನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.