ಕೃಷ್ಣಲೀಲಾ ಸಾಂಗ್ಸ್ ರಿಲೀಸ್
ಇಲ್ಲಿರೋದು ಕೇವಲ ಮೇಕಿಂಗ್ ಮತ್ತು ಬೀಟ್ ಸಾಂಗ್ಸ್‌ನ ಝಲಕ್ ಅಷ್ಟೇ...

ಅಲ್ಲಿ ಪರದೆಯ ಮೇಲೆ ತೋರಿಸುತ್ತಿದ್ದ ಪ್ರತಿ ಹಾಡಿನ ನಂತರವೂ ಇಲ್ಲಿರೋದು ಕೇವಲ ಮೇಕಿಂಗ್ ಮತ್ತು ಬೀಟ್ ಸಾಂಗ್ಸ್‌ನ ಝಲಕ್ ಅಷ್ಟೇ. ಪೂರ್ತಿ ಹಾಡನ್ನು ನೋಡಿದರೆ ನೀವು ಖುಷಿಪಡುತ್ತೀರಿ ಎನ್ನುತ್ತಿದ್ದರು ನಿರ್ದೇಶಕ ಶಶಾಂಕ್.
ಅವರಿಗೆ ಸಾಥ್ ನೀಡುತ್ತಿದ್ದು ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್. ಅದು ಅವರ 'ಕೃಷ್ಣಲೀಲಾ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಅಜಯ್‌ರಾವ್ ನಿರ್ಮಾಣ ಮತ್ತು ನಟನೆಯ ಚಿತ್ರ ಇದು. ನಾಯಕಿ ಕಿರುತೆರೆ ಖ್ಯಾತಿಯ ಮಯೂರಿ.
ಶ್ರೀಧರ್ ಸಂಭ್ರಮ್ 'ಕೃಷ್ಣನ್ ಲವ್‌ಸ್ಟೋರಿ' ಚಿತ್ರಕ್ಕೂ ಸಂಗೀತ ನೀಡಿದ್ದರು. ಇಲ್ಲಿ ಮತ್ತೆ ಅದೇ ತಂಡ ಕೆಲಸ ಮಾಡುತ್ತಿದೆ. ಹಾಗಾಗಿ ಜನರಿಗೆ ನಿರೀಕ್ಷೆ ಇರುತ್ತದೆ.
ನಾವು ಅದನ್ನು ಮೀರಿಸುವಂಥದಲ್ಲದಿದ್ದರೂ ಅಟ್ಲೀಸ್ಟ್ ಅದನ್ನು ಮೀಟ್ ಮಾಡುವಂತ ಪ್ರಾಡಕ್ಟ್ ಕೊಡಬೇಕು ಎಂಬುದು ಶಶಾಂಕ್‌ರ ಮಾತು. ಆದರೆ ಅಂದು ತೋರಿಸಿದ ಹಾಡುಗಳಲ್ಲಿ 'ಕೃಷ್ಣನ್ ಲವ್‌ಸ್ಟೋರಿ'ಯನ್ನು ಮೀರಿಸುವ ಗುಣಗಳು ಅಷ್ಟು ಢಾಳಾಗಿ ಕಾಣಲಿಲ್ಲ ಎಂಬುದು ಬೇರೆ ಮಾತು.
ನಾಯಕಿ ಮಯೂರಿ ಎಂದಿನಂತೆ ಈ ತಂಡದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಥ್ಯಾಂಕ್ಸ್ ಎಂದರೆ, ನಾಯಕ ಅಜಯ್ ತಮ್ಮ ನವವಧುವಿನೊಂದಿಗೆ ಕ್ಯಾಮೆರಾಗಳಿಗೆ ಪೋಸು ಕೊಟ್ಟರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


