ಸಾನಿಯಾ ಮಲಿಕ್ ಮಧ್ಯೆ ರಾಮ ಬಂದಾಗ!
ಸಾನಿಯಾ ಈಗ ತೆಲುಗು ನಟ ರಾಮ್...

ಸಾನಿಯಾ ಮಿರ್ಜಾ-ಶೋಯಬ್ ಮಲ್ಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ? ಸಾನಿಯಾ ಈಗ ತೆಲುಗು ನಟ ರಾಮ್‌ಚರಣ್ ತೇಜ ಜೊತೆ ಸುತ್ತಾಡುತ್ತಿದ್ದಾಳಾ? ಇಂಡೋ-ಪಾಕ್‌ನ ಈ ಸ್ಟಾರ್ ದಾಂಪತ್ಯಕ್ಕೆ ರಾಮ್ ಹುಳಿ ಹಿಂಡಿದನಾ?
ಇತ್ತೀಚೆಗೆ ಟೆನ್ನಿಸ್ ತಾರೆ ಸಾನಿಯಾಗೆ ತವರಿನ ವ್ಯಾಮೋಹ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿರುವ ಗಂಡನ ಮನೆ, ಬಳಗ ನೋಡಿಕೊಳ್ಳುವುದಕ್ಕಿಂತ ತನಗೊಂದು ಸ್ಥಾನಮಾನ ಕೊಟ್ಟಿರುವ ಹಿಂದೂಸ್ಥಾನದಲ್ಲಿ ಕುಳಿತು ಮೈಸೂರ್ 'ಪಾಕ್' ಸೇವಿಸುವುದೇ ಸುಖ ಎಂದು ಆಕೆ ನಿರ್ಧರಿಸಿದಂತಿದೆ. ಏಕೆಂದರೆ ಆಕೆ ಹಲವಾರು ತಿಂಗಳುಗಳಿಂದ ಪಾಕ್ ಕಡೆಗೆ ಪ್ರಯಾಣ ಬೆಳೆಸೇ ಇಲ್ಲ.
ವಿವಾಹ ಜೀವನ ಮುರಿದು ಬಿದ್ದಿರುವ ಬಗ್ಗೆ ಕೇಳಿದರೆ ಸಾನಿಯಾ ಆಗಲಿ, ಶೋಯಬ್ ಆಗಲಿ-ಹೂಂ ಅನ್ನಲ್ಲ, ಊಹೂಂನೂ ಅನ್ನಲ್ಲ. ಮೌನಂ ಸಮ್ಮತಿ ಲಕ್ಷಣಂ ಎಂದುಕೊಳ್ಳಬೇಕಷ್ಟೇ. ಭಾರತವನ್ನು ಮೆಚ್ಚುವ ಸಾನಿಯಾ ಇತ್ತೀಚೆಗೆ ಮೋದಿಯವರ ಸ್ವಚ್ಛತಾ ಅಭಿಯಾನದ ಕರೆಗೆ ಓಗೊಟ್ಟು ಬೀದಿ ಗುಡಿಸಿದ್ದಳು. ಮಾಜಿ ಕ್ರಿಕೆಟ್‌ಗ ಹಾಗೂ ಪಾಕಿಸ್ತಾನದ ಹಾಲಿ ರಾಜಕಾರಣಿಯಾಗಿರುವ ಇಮ್ರಾನ್ ಖಾನ್‌ನ ಗೆಳೆಯನೂ ಆಗಿರುವ ಶೋಯಬ್‌ಗೆ ಇದೆಲ್ಲ ಉರಿಯದಿರುತ್ತದೆಯೇ?
ಇತ್ತೀಚೆಗೆ ಈದ್ ಹಬ್ಬ ಬಂದಾಗಲೂ ಸಾನಿಯಾ ಕುಟುಂಬದೊಂದಿಗೆ ಹೈದರಾಬಾದ್ ಬಿರಿಯಾನಿ ಉಂಡರೆ, ಶೋಯಬ್ ಪಾಕ್‌ನಲ್ಲಿ ತನ್ನ ಮನೆಯವರೊಂದಿಗೆ ಹಬ್ಬ ಆಚರಿಸಿದ. ಇನ್ನು ಶೋಯಬ್ ತನಗೆ ಪ್ರಪೋಸ್ ಮಾಡುತ್ತಿರುವ ಫೋಟೋ ಸೇರಿದಂತೆ ಇಬ್ಬರೂ ಜೊತೆಗಿರುವ ಫೋಟೋಗಳನ್ನು ಸಾನಿಯಾ ತನ್ನ ಟ್ವಿಟ್ಟರ್ ಅಕೌಂಟ್‌ನಿಂದ ತೆಗೆದುಹಾಕಿದ್ದಾಳೆ.
ಮೊನ್ನೆ ಮೊನ್ನೆ ಇತ್ತ ಸಾನಿಯಾ ರೋಜರ್ ಫೆಡರರ್, ರೋಹನ್ ಬೋಪಣ್ಣ, ಮಹೇಶ್ ಭೂಪತಿಯೊಂದಿಗೆ ಪಾರ್ಟಿ ಮಾಡುತ್ತಿದ್ದರೆ, ಅತ್ತ ಕರಾಚಿಯಲ್ಲಿ ಶೋಯಬ್, ನಟಿ ಹುಮೈಮ ಮಲ್ಲಿಕ್ ಜೊತೆ ಸಂಜೆ ಕಳೆದುದನ್ನು ಟ್ವಿಟ್ಟರ್‌ಗೆ ಹಾಕಿ ಉರಿಸಿದ.
ಸದ್ಯವೇ ಡೈವೋರ್ಸ್‌ಗಾಗಿ ಟೆನ್ನಿಸ್ ಕೋರ್ಟ್‌ನಿಂದ ಜಸ್ಟೀಸ್ ಕೋರ್ಟ್‌ಗೆ ಹೊರಡಲಿದ್ದಾಳೆ ಸಾನಿಯಾ. ಗಿಳಿಯು ಪಾಕ್ ಪಂಜರದಿಂದ ಹೊರಬಂದಿದೆ...'ರಾಮಾ'... 'ರಾಮ' ಕಾರಣ?
ಟೆನ್ನಿಸ್ ತಾರೆ ಸಾನಿಯಾ, ತನಗೆ ಆಟಗಾರನೇ ಸರಿ ಎಂದು ಪಾಕಿಸ್ತಾನದ ಕ್ರಿಕೆಟ್ ತಾರೆ ಶೋಯಬ್ ಮಲ್ಲಿಕ್‌ನನ್ನು 2010ರಲ್ಲಿ ವಿವಾಹವಾಗಿದ್ದಳು. ಈಗ ಚಿತ್ರ ತಾರೆ ಆಗ ಹೊರಟಿರುವ ಸಾನಿಯಾಗೆ ತನಗೆ ನಟನೇ ಸರಿ ಎನಿಸಿರಬೇಕು, ತೆಲುಗು ನಟ ರಾಮ್ ಚರಣ್ ತೇಜ ಜೊತೆಗೆ ಊರೂರು ಸುತ್ತಿತ್ತಿದ್ದಾಳೆ. ಹೀಗಾಗಿ ಸಾನಿಯಾ-ಶೋಯಬ್ ನಡುವಿನ ಒಡಕಿಗೆ ಈ ರಾಮನೇ ಕಾರಣ ಎನ್ನಲಾಗುತ್ತಿದೆ.
ರಾಮ್ ಹಾಗೂ ಸಾನಿಯಾ ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದಲ್ಲದೆ, ಸಲ್ಮಾನ್ ತಂಗಿ ಅರ್ಪಿತಾ ಮದುವೆಗೂ ಒಟ್ಟಿಗೇ ಹೋಗಿದ್ದರು. ಸದ್ಯ ಗಂಡನ ಮನೆಯನ್ನು ಮರೆತು ತನ್ನ ಹೈದರಾಬಾದ್‌ನ ಮನೆಯಲ್ಲಿ ಪೋಷಕರೊಂದಿಗಿರುವ ಸಾನಿಯಾ, ಈ ಚಿರಂಜೀವಿ ಪುತ್ರನ ಮುಂದಿನ ಸಿನಿಮಾ(ಇನ್ನೂ ಹೆಸರಿಟ್ಟಿಲ್ಲ)ದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


