ಸೆಂಚುರಿ ಸ್ಟಾರ್‌ನ ಶಿವಲಿಂಗಕ್ಕೆ ತಮಿಳಿನ ನಟಿ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ...

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ 'ಶಿವಲಿಂಗ' ಚಿತ್ರ ಸೆಟ್ಟೇರಲು ಸಜ್ಜಾಗಿದ್ದು, ಚಿತ್ರಕ್ಕೆ ತಮಿಳಿನ ನಟಿಯನ್ನು ಕರೆತರುವ ಪ್ರಯತ್ನ ನಡೆಯುತ್ತಿವೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಹರಿದಾಡುತ್ತಿದೆ.
100 ಸಿನಿಮಾಗಳನ್ನು ಮುಗಿಸಿರುವ ಶಿವಣ್ಣ, ಸೋಲು, ಗೆಲುವು ಎರಡನ್ನೂ ಸಮಾನವಾಗಿ ಕಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಅವರ ಚಿತ್ರಗಳನ್ನು ಹ್ಯಾಟ್ರಿಕ್‌ನಂತೆ ಸೆಟ್ಟೇರಲು ಸಜ್ಜಾಗುತ್ತಿವೆ. ಸದ್ಯಕ್ಕೆ ಹತ್ತಾರು ಚಿತ್ರಗಳು ಶಿವಣ್ಣ ಕೈಯಲ್ಲಿದ್ದು, ನಟನೆಯಲ್ಲಿ ಬ್ಯುಸಿಯಾಗಿರುವ ಶಿವರಾಜ್‌ಕುಮಾರ್ ಅವರ ಮುಂದಿನ ಚಿತ್ರ ಶಿವಲಿಂಗ ಸದ್ಯದಲ್ಲೇ ಸೆಟ್ಟೇರಲಿದೆ.
ಸುರೇಶ್ ಅವರು ನಿರ್ಮಾಣದಲ್ಲಿ ಶಿವಲಿಂಗ ಚಿತ್ರ ನಿರ್ಮಾಣವಾಗುತ್ತಿದ್ದು, ಡಿ.15ಕ್ಕೆ ಚಿತ್ರದ ಮೂಹೂರ್ತ ನಡೆಲಿದೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆ, ಪಿ.ಕೆ.ಎಚ್. ದಾಸ್‌ರ ಛಾಯಾಗ್ರಹಣವಿದ್ದು, ಡಾ. ವಿ ನಾಗೇಂದ್ರ ಪ್ರಸಾದ್ ಸಂಭಾಷಣೆ. ಬೆಂಗಳೂರು, ಮೈಸೂರು ಮತ್ತು ಶ್ರೀರಂಗಪಟ್ಟಣದಲ್ಲಿ ಶಿವಲಿಂಗದ ಶೂಟಿಂಗ್ ನಡೆಯಲಿದೆ. ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದ್ದು, ಹೊರಭಾಷೆಯ ನಟಿಯನ್ನು ಕರೆತರುವ ಪಯತ್ನ ನಡೆಯುತ್ತಿದೆ.
ಶಿವಲಿಂಗ ಚಿತ್ರದ ನಾಯಕಿ ಆಯ್ಕೆ ಕುರಿತಂತೆ ನಿರ್ದೇಶಕ ಪಿ. ವಾಸು ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿರುವ ನಿರ್ಮಾಪಕ ಸುರೇಶ್ ಸದ್ಯ ಚೆನ್ನೈಗೆ ತೆರಳಿದ್ದಾರೆ. ಈಗಾಗಲೇ ಕೆಲವು ನಟಿಯರೊಂದಿಗೆ ಮಾತುಕತೆ ನಡೆಸಿದ್ದೇವೆ. ಆದರೆ ಸದ್ಯಕ್ಕೆ ನಾಯಕಿಯರ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಹಿರೋಯಿನ್ ಡೇಟ್ ಸಿಕ್ಕ ನಂತರ ಅಧಿಕೃತವಾಗಿ ಘೋಷಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಭಜರಂಗಿ ಗರ್ಜಿಸಿದ ರೀತಿಯಲ್ಲೇ ಶಿವಲಿಂಗ ಕೂಡ ಆರ್ಭಟಿಸುವುದೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


