ರಜನೀ'ಕಾಂಟ್' ರೊಮ್ಯಾನ್ಸ್
ಸೋನಾಕ್ಷಿ ಜೊತೆ ರೊಮ್ಯಾನ್ಸ್ ನಿಭಾಯಿಸುವುದು ದೊಡ್ಡ ಸವಾಲು ಎನಿಸಿತು

ರಜನಿಕಾಂತ್ ಯಾಕೆ ಮಿಶನ್ ಇಂಪಾಸಿಬಲ್ ಚಿತ್ರದಲ್ಲಿ ನಟಿಸಿಲ್ಲ ಅಂದ್ರೆ.. ಅಸಾಧ್ಯ.., ಕಷ್ಟ ಅನ್ನೋ ಪದಗಳೇ ರಜನಿ ಡಿಕ್ಷನರಿಯಲಿಲ್ಲ, ಅದಕ್ಕೇ! ಎಂಬಂಥ ಜೋಕುಗಳು ಸಾಮಾಜಿಕ ತಾಣಗಳಲ್ಲಿ ರಜನಿ ಪರಾಕ್ರಮಗಳ ಬಗ್ಗೆ ಆಗಾಗ ಹರಿದಾಡುತ್ತಿರುತ್ತವೆ. ಆದರೆ ನಿಜಕ್ಕೂ ರಜನಿ ಏನಂತಾರೆ ಕೇಳಿ.
'ಸೋನಾಕ್ಷಿ ಸಿನ್ಹಾ ಜೊತೆ ರೊಮ್ಯಾನ್ಸ್ ಸನ್ನಿವೇಶ ನಿಭಾಯಿಸುವುದು ದೊಡ್ಡ ಸವಾಲು ಎನಿಸಿತು. ನಾನು ಮೊದಲ ಬಾರಿಗೆ ಕ್ಯಾಮೆರಾ ಎದುರಿಸುವಾಗಲೂ ಇಷ್ಟೊಂದು ನರ್ವಸ್ ಆಗಿರಲಿಲ್ಲ. ಸೋನಾಕ್ಷಿ ಜೊತೆ ಡ್ಯುಯೆಟ್ ಹಾಡುವಾಗ ನಿಜಕ್ಕೂ ಕಷ್ಟಪಟ್ಟೆ' ಎಂದು ಹೇಳಿಕೊಂಡಿರುವ ರಜನಿ ಮತ್ತೊಮ್ಮೆ ತಮ್ಮ ನೇರ ಮಾತನಿಂದ ಅಭಿಮಾನಿಗಳನ್ನು ಗೆದ್ದಿದ್ದಾರೆ.
'ಅರವತ್ತು ವಯಸ್ಸಿನ ನನ್ನಂಥ ನಟರಿಗೆ ದೇವರು ಕೊಡಬಹುದಾದ ದೊಡ್ಡ ಶಿಕ್ಷೆ ಎಂದರೆ ಈ ರೀತಿ ಚಿಕ್ಕ ವಯಸ್ಸಿನ ನಟಿಯರೊಂದಿಗೆ ಹಾಡಿ ಕುಣಿಯುವಂತೆ ಮಾಡುವುದು. ಇದಕ್ಕಿಂತ ಚಲಿಸುತ್ತಿರೋ ರೈಲಿನಿಂದ ಜಂಪ್ ಮಾಡೋ ದೃಶ್ಯವೇ ಸಲೀಸು. ಸೋನಾಕ್ಷಿಯನ್ನು ಆಕೆ ಪುಟ್ಟ ಮಗು ಇದ್ದಾಗಿನಿಂದ ನೋಡಿದ್ದೇನೆ. ನನ್ನ ಮಗಳ ವಯಸ್ಸಿನವರು ಆಕೆ. ಅನುಷ್ಕಾ ಶೆಟ್ಟಿ ಜೊತೆಗಿನ ದಶ್ಯಗಳಲ್ಲೂ ಅದೇ ರೀತಿ ನರ್ವಸ್ ಆಗಿದ್ದೆ' ಎಂದು ರಜನಿ ನಗು ನಗುತ್ತಲೇ ಹೇಳಿಕೊಂಡಿದ್ದಾರೆ.
ರಜನಿಕಾಂತ್ ಈ ರೀತಿ ತಮ್ಮ ಅನುಭವ ಹೇಳಿಕೊಂಡಿದ್ದು ಲಿಂಗಾ ಚಿತ್ರದ ತೆಲುಗು ಆವೃತ್ತಿಯ ಪ್ರಚಾರ ಕಾರ್ಯಕ್ರಮದಲ್ಲಿ. ಈ ಹಿಂದೆ ರೋಬೋ ಚಿತ್ರದ ಪತ್ರಿಕಾಗೋಷ್ಠಿಯಲ್ಲೂ ರಜನಿ ಹೀಗೆ ತಮ್ಮ ಬಗ್ಗೆ ಹಾಸ್ಯ ಮಾಡಿಕೊಂಡು ರಂಜಿಸಿದ್ದರು.
ಅಭಿಮಾನಿಗಳು ರಜನಿ ಹುಟ್ಟುಹಬ್ಬಕ್ಕೆ ಲಿಂಗಾ ಚಿತ್ರ ಬಿಡುಗಡೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಅಭಿಮಾನಿಗಳನ್ನು ನಿರಾಶೆಗೊಳಿಸಬಾರದೆಂದು ಲಿಂಗಾ ಚಿತ್ರ ಲಗುಬಗೆಯಿಂದ ಬಿಡುಗಡೆಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೇ ತಿಂಗಳಲ್ಲಿ ಬಿಡುಗಡೆಯಾಗುವುದು ಹೆಚ್ಚೂ ಕಮ್ಮಿ ಖಚಿತ ಎನ್ನುತ್ತಿವೆ ಚಿತ್ರತಂಡದ ಮೂಲಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


