ಸಿನಿಮಾ ಸುದ್ದಿ

'ಮೇಘ ಬಂತು ಮೇಘ'

ಮೇಘನಾ ಸಹ ಪ್ರಚಾರಕ್ಕಾಗಿ ಬಟ್ಟೆ ಬಿಚ್ಚಿದ..

'ಮೇಘ ಬಂತು ಮೇಘ'
Published On :

ನಿರ್ದೇಶಕ ತ್ರಿಶೂಲ್ ಎಂಬ ಪುಣ್ಯಾತ್ಮ ಸಿನಿಮಾ ಅಂದರೆ ಬಿಟ್ಟಿ ಪ್ರಚಾರ ಪಡೆಯುವ ಮಾಧ್ಯಮ ಅಂದು ಕೊಂಡಿದ್ದಾರೆ ಅನಿಸುತ್ತದೆ. ಹೀಗಾಗಿ ಈ ಮನುಷ್ಯ ಮಾಡುವ ಸಿನಿಮಾಗಿಂತ ಆ ಚಿತ್ರದಲ್ಲಿ ಕುಣಿಯುವ ನಾಯಕಿಯರೇ ಹೆಚ್ಚು ಸದ್ದು ಮಾಡುತ್ತಾರೆ ಎಂಬುದಕ್ಕೆ 'ಸಿಲ್ಕ್‌' ಚಿತ್ರವೇ ಉತ್ತಮ ಉದಾಹರಣೆ.

ಮಾಡಿದ್ದೇ ಒಂದು ಸಿನಿಮಾ. ಅದು ಕೂಡ ಸೂಪರ್ ಡೂಪರ್ ಫ್ಲಾಪ್ ಸಿನಿಮಾಗಳ ಪಟ್ಟಿಯಲ್ಲಿ ಸೇರಿಕೊಂಡಿರುವ 'ಸಿಲ್ಕ್‌', ಈಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡುವುದಕ್ಕೆ ಹೊರಟಿದ್ದಾರೆ. ವಿಷಯ ಅದಲ್ಲ, ಈ ಬಾರಿಯೂ ಒಬ್ಬ ವಿವಾದಿತ ನಟಿಯನ್ನು ತಮ್ಮ ಚಿತ್ರಕ್ಕೆ ಕರೆತರುತ್ತಿದ್ದಾರೆ.

ಪಾಪಾ 'ಸಿಲ್ಕ್‌' ಚಿತ್ರದಲ್ಲಿ ವೀಣಾ ಮಲ್ಲಿಕ್ ಸಾಧ್ಯವಾದಷ್ಟು ಮೈ ತೋರಿದರೂ ಸಿಲ್ಕ್ ಸಿನಿಮಾ ಹಿಟ್ ಆಗಲಿಲ್ಲ. ಅಲ್ಲದೆ ಸ್ವತ: ವೀಣಾ ಮಲ್ಲಿಕ್ ಅವರೇ ಚಿತ್ರಮಂದಿರದ ಕೌಂಟರ್‌ನಲ್ಲಿ ಕೂತು ಟಿಕೆಟ್ ಕೊಟ್ಟರೂ, 'ಯಾರು ಈಯಮ್ಮ' ಎಂದು ಯಾರೂ ಚಿತ್ರಮಂದಿರದತ್ತ ತಲೆ ಹಾಕಲಿಲ್ಲ. ಅಷ್ಟರ ಮಟ್ಟಿಗೆ ಕನ್ನಡ ಪ್ರೇಕ್ಷಕರು ಬುದ್ಧಿವಂತರು!

ಇರಲಿ, ಈಗ ತ್ರಿಶೂಲ್ ತಮ್ಮ ಎರಡನೇ ಚಿತ್ರಕ್ಕಾಗಿ ಬಾಂಬೆನಿಂದ ಮೇಘನಾ ಪಟೇಲ್ ಅವರನ್ನು ಕರೆತರುತ್ತಿದ್ದಾರೆ. ಯಾರು ಈ ಮೇಘನಾ? ಎನ್ನುವವರು, ಒಮ್ಮೆ ಕಳೆದ ಲೋಕಸಭಾ ಚುನಾವಣೆ ಪ್ರಚಾರವನ್ನು ನೆನಪಿಸಿಕೊಳ್ಳಿ. ಆಗ ನರೇಂದ್ರ ಮೋದಿ ಪರ ಮತ ಯಾಚನೆ ಮಾಡಲು ಬೆತ್ತಲಾದ ಸುಂದರಿಯೇ ಈ ಮೇಘನಾ ಪಟೇಲ್.

ತನ್ನ ಬೆತ್ತಲು ದೇಹಕ್ಕೆ ಮೋದಿ ಭಾವ ಚಿತ್ರ ಅಂಟಿಸಿಕೊಂಡಿದ್ದಲ್ಲದೆ, ಅರೆಬೆತ್ತಲಾಗಿ ಕಮಲದ ಹೂವುಗಳ ರಾಶಿಯಲ್ಲಿ ಮಲಗಿ ಪೋಸು ಕೊಟ್ಟು ಸಾಕಷ್ಟು ಸುದ್ದಿ ಮಾಡಿದವಳು.

ಆ ನಂತರ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ನಡುವೆ ಒಂದು ತಮಿಳು ಚಿತ್ರದಲ್ಲೂ ನಟಿಸಿದ್ದಾಳೆ. ನಟನೆಗಿಂತ ದೇಹ ಸೌಂದರ್ಯವೇ ಮುಖ್ಯ ಎಂದುಕೊಂಡಿರುವ ಈ ಮೇಘನಾ ಪಟೇಲ್, ನಿರ್ದೇಶಕ ತ್ರಿಶೂಲ್ ಕಣ್ಣಿಗೆ ಯಾವಾಗ ಬಿದ್ದರೋ ಗೊತ್ತಿಲ್ಲ.

ಸಾಧು ಕೋಕಿಲಾ ಜತೆ ಸಿನಿಮಾ ಮಾಡುವುದಾಗಿ ಘೋಷಿಸಿರುವ ತ್ರಿಶೂಲ್, ಸಾಧು ಜತೆ ಹೆಜ್ಜೆ ಹಾಕುವ ಜಾಗಕ್ಕೆ ಇದೇ ಮೇಘನಾ ಪಟೇಲ್‌ರನ್ನು ಕರೆತರುವುದಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಬಂದ ವೀಣಾ ಮಲ್ಲಿಕ್ ಕೂಡ ವಿವಾದಿತ ನಟಿ. ಈಗ ಬರಲಿದ್ದಾರೆ ಎನ್ನುತ್ತಿರುವ ಮೇಘನಾ ಸಹ ಬಿಟ್ಟಿ ಪ್ರಚಾರಕ್ಕಾಗಿ ಬಟ್ಟೆ ಬಿಚ್ಚಿದ ನಟಿ.

ವಿವಾದಿತ ನಟಿಯರೊಂದಿಗೆ ಸಿನಿಮಾ ಮಾಡಿದರೆ ತನಗೂ ಬಿಟ್ಟಿ ಪ್ರಚಾರ ಸಿಗುತ್ತದೆಂಬ ಉದ್ದೇಶದಿಂದ ತ್ರಿಶೂಲ್, ಮೇಘನಾಳಿಗೆ ಗಂಟು ಬಿದ್ದಿದ್ದಾರೆ. ಹೀಗಾಗಿ ಸಿನಿಮಾ, ಕಥೆಗಿಂತ ತ್ರಿಶೂಲ್ ಅವರಿಗೆ ಕಾಂಟ್ರವರ್ಸಿ ನಟಿಯರು ಇದ್ದರೆ ಸಾಕು, ಸಿನಿಮಾ ಮಾಡಬಹುದು ಎಂದು ಕೊಂಡಿದ್ದಾರೆ.

ಅಲ್ಲದೆ ಈಗ ಸಾಧು ಕೋಕಿಲ ಜತೆ ಮಾಡಲಿರುವ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಕಥೆ ರೆಡಿಯಾಗಿದೆಯೋ ಅದೂ ಗೊತ್ತಿಲ್ಲ. ಒಟ್ಟಿನಲ್ಲಿ ಬೆತ್ತಲೆ ನಟಿಯನ್ನು ಮಾತ್ರ ಬುಕ್ ಮಾಡಿಕೊಂಡಿದ್ದಾರೆ. ಇಂಥ ತ್ರಿಶೂಲ್ ಎಂಥ ಸಿನಿಮಾ ಮಾಡುತ್ತಾರೋ?

-ಕೇಶವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.