`ಬಾನಾಡಿ’ ಮತ್ತು `ಗೋಲ್ ಗೊಂಬಜ್’ಈ ವಾರ ತೆರೆಗೆ

ಧೃತಿ ಸಿನೆಮಾ ಲಾಂಛನದಲ್ಲಿ ಎಂ.ನಾಗರಾಜು ಅವರು ನಿರ್ಮಿಸಿರುವ `ಬಾನಾಡಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ನಾಗರಾಜ ಕೋಟೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ರಾಮನಗರ, ಶ್ರೀಂಗಪಟ್ಟಣ, ಚನ್ನಪಟ್ಟಣ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಕಾರ್ತಿಕ್‍ಶರ್ಮ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಸನ ಮಂಜು ಸಹ ನಿರ್ದೇಶನವಿರುವ `ಬಾನಾಡಿ’ಗೆ ಸಭಾಕುಮಾರ್ ಅವರ ಛಾಯಾಗ್ರಹಣವಿದೆ. ನಾಗರಾಜ ಕೋಟೆ ಅವರ `ಉಸಿರು’ ಕೃತಿ ಆಧಾರಿತವಾಗಿರುವ ಈ ಚಿತ್ರಕ್ಕೆ ಗೂಡಿನಿಂದ ಗಗನದೆಡೆಗೆ ಎಂಬ ಅಡಿಬರಹವಿದೆ. ದತ್ತಣ್ಣ, ರಾಜೇಶ್, ಅಭಿನಯ, ಮಾಸ್ಟರ್ ಪ್ರಪುಲ್ ವಿಶ್ವಕರ್ಮ, ಕುಮಾರಿ ಧೃತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
`ಗೋಲ್ ಗೊಂಬಜ್’
ವಿ.ವಿ.ಎಂ ಸಿನಿಮಾಸ್ ಸಂಸ್ಥೆ ಲಾಂಛನದಲ್ಲಿ ಮುತ್ತುರಾಜ್ ಅವರು ನಿರ್ಮಿಸಿರುವ `ಗೋಲ್ ಗುಂಬಜ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ಧನುಷ್ ಈ ಚಿತ್ರದ ನಯಕನಾಗೂ ಅಭಿನಯಿಸಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿರುವ ಧನುಷ್ ಸಂಗೀತವನ್ನು ನೀಡಿದ್ದಾರೆ. ಕೆ.ಡಿ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಧನುಷ್, ಪೂರ್ಣಿಮಾ, ನಕುಲ್, ಶಿವು, ರಾಜು, ವೆಂಕಟೇಶಪ್ಪ, ಲಚ್ಚಿ, ಅನಿಲ್ ಮುಂತಾದವರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


