ಸಿನಿಮಾ ಸುದ್ದಿ (ಸಿನಿಮಾ)

ಹರಿಹರನಿಗೆ ಸಂಗೀತದಾಭಿಷೇಕ: 'ಗರುಡ ಗಮನ ವೃಷಭ ವಾಹನ' ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಸಂದರ್ಶನ

ಸಿನಿಮಾದಲ್ಲಿ ಕೇಳಿಬರುವ ಒಂದು ನಿಟ್ಟುಸಿರು ಕೂಡಾ ಸಿನಿಮಾ ಕಟ್ಟಿಕೊಡುವ ವಿನೂತನ ಅನುಭವದ ಭಾಗವೇ ಆಗಿದೆ. ಹೀಗಾಗಿ ಹಿನ್ನೆಲೆ ಸಂಗೀತ ಎನ್ನುವುದು ಸಿನಿಮಾದ ಕಥೆಯಿಂದಲೇ ಪ್ರಭಾವಕ್ಕೊಳಪಡುತ್ತದೆ.

ಹರಿಹರನಿಗೆ ಸಂಗೀತದಾಭಿಷೇಕ: 'ಗರುಡ ಗಮನ ವೃಷಭ ವಾಹನ' ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಸಂದರ್ಶನ
ಹೇಳ್ಕೊಳ್ಳೋಕ್ ಬೆಂಗ್ಳೂರು, ತಲೆ ಮ್ಯಾಗೆ ಸೂರಿರಲಿಲ್ಲ, ಸಿನಿಮಾನೇ ನನ್ ಪರ್ಪಂಚ: ಮುಗಿಲ್ ಪೇಟೆ ಡೈರೆಕ್ಟರ್ ಭರತ್ ನಾವುಂದ ಸಂದರ್ಶನ

ಹೇಳ್ಕೊಳ್ಳೋಕ್ ಬೆಂಗ್ಳೂರು, ತಲೆ ಮ್ಯಾಗೆ ಸೂರಿರಲಿಲ್ಲ, ಸಿನಿಮಾನೇ ನನ್ ಪರ್ಪಂಚ: ಮುಗಿಲ್ ಪೇಟೆ ಡೈರೆಕ್ಟರ್ ಭರತ್ ನಾವುಂದ ಸಂದರ್ಶನ

'ಓಂ' ಸಿನಿಮಾದಿಂದ ನಿರ್ದೇಶಕನಾಗುವ ಕನಸು ಕಂಡು ಕುಂದಾಪುರದಿಂದ ಬೆಂಗಳೂರಿಗೆ ಬಂದವರು ಭರತ್ ನಾವುಂದ. ಒಂದು ಕಾಲದಲ್ಲಿ ಮಲಗಲು ಸೂರಿಲ್ಲದೆ ಪರದಾಡಿದ್ದಾರೆ, ಹಸಿವಿನಿಂದ ಇಸ್ಕಾನ್ ಎದುರು ಪೊಂಗಲ್ ಗೆ ಕೈಚಾಚಿದ್ದಾರೆ. ಮುಗಿಲ್ ಪೇಟೆ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಅವರ ಸಿನಿಮಾ ಮಾಡುವ ಹೊಣೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೇಯ ಅವರದು.

ಜೈ ಭೀಮ್ ಸಿನಿಮಾದಿಂದ ನನಗೆ ಗಟ್ಟಿಯಾದ ಪಾತ್ರಗಳು ಸಿಗಲಿವೆ ಎನ್ನುವ ನಂಬಿಕೆ ಇದೆ: ಲಿಜೊಮೋಳ್ ಜೋಸ್ ಸಂದರ್ಶನ

ಜೈ ಭೀಮ್ ಸಿನಿಮಾದಿಂದ ನನಗೆ ಗಟ್ಟಿಯಾದ ಪಾತ್ರಗಳು ಸಿಗಲಿವೆ ಎನ್ನುವ ನಂಬಿಕೆ ಇದೆ: ಲಿಜೊಮೋಳ್ ಜೋಸ್ ಸಂದರ್ಶನ

ಮಲಯಾಳಂನಲ್ಲಿ 'ಮಹೇಶಿಂಡೆ ಪ್ರತೀಕಾರಂ' ಸಿನಿಮಾ ನಂತರ ನನಗೆ ಅದೇ ರೀತಿಯ ಇಡುಕ್ಕಿ ಊರಿನ ಹೆಣ್ಣುಮಗಳ ಪಾತ್ರಗಳೇ ಸಿಗತೊಡಗಿದ್ದವು. ಹಾಗೆ ಒಂದೇ ಬಗೆಯ ಪಾತ್ರಕ್ಕೆ ಬ್ರ್ಯಾಂಡ್ ಆಗಲು ನನಗಿಷ್ಟವಿರಲಿಲ್ಲ. ಈಗ ಜೈಭೀಮ್ ಮೂಲಕ ಪ್ರೇಕ್ಷಕರು ನನ್ನನ್ನು ಹೊಸ ಬಗೆಯಿಂದ ನೋಡುವಂತಾಗಿದೆ.

ಮಾಲ್ಗುಡಿ ಡೇಸ್ ನಟ ಮಾಸ್ಟರ್ ಮಂಜುನಾಥ್ ಬಿಚ್ಚಿಟ್ಟ ಪುನೀತ್ Exclusive ಗುಣ

ಮಾಲ್ಗುಡಿ ಡೇಸ್ ನಟ ಮಾಸ್ಟರ್ ಮಂಜುನಾಥ್ ಬಿಚ್ಚಿಟ್ಟ ಪುನೀತ್ Exclusive ಗುಣ

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಮಾಲ್ಗುಡಿ ಡೇಸ್'ಗಾಗಿ ಮಾಸ್ಟರ್ ಮಂಜುನಾಥ್ ಅವರು ಪ್ರಶಸ್ತಿ ಗಳಿಸಿದ್ದಾರೆ ಎಂದು ನಿರೂಪಕರು ಘೋಷಿಸಿದರು. ಜೋರಾಗಿ ಶಿಳ್ಳೆ ಚಪ್ಪಾಳೆ ಸದ್ದು ಕೇಳಿ ಬಂದಿತು. ಗುರುತು ಪರಿಚಯವಿಲ್ಲದ ನಗರದಲ್ಲಿ ಯಾರಪ್ಪಾ ಈ ಪರಿ ತಮ್ಮನ್ನು ಹುರಿದುಂಬಿಸುತ್ತಿರುವುದು ಎಂದು ನೋಡಿದರೆ ಸಭಿಕರ ಸಾಲಿನಲ್ಲಿ ಅಪ್ಪು ಕಂಡಿದ್ದರು. ದ್ಯಾಟ್ಸ್ ಅಪ್ಪು!

ಸಿನಿಮಾಗೆ ಬದುಕೇ ಪ್ರೇರಣೆ: ಕನ್ನಡ ಚಿತ್ರರಂಗದ 'ಹೊಸ ಬೆಳಕು' ಪೆಡ್ರೊ ನಿರ್ದೇಶಕ ನಟೇಶ್ ಹೆಗಡೆ ಸಂದರ್ಶನ

ಸಿನಿಮಾಗೆ ಬದುಕೇ ಪ್ರೇರಣೆ: ಕನ್ನಡ ಚಿತ್ರರಂಗದ 'ಹೊಸ ಬೆಳಕು' ಪೆಡ್ರೊ ನಿರ್ದೇಶಕ ನಟೇಶ್ ಹೆಗಡೆ ಸಂದರ್ಶನ

''ಪೆಡ್ರೊ'' ಕನ್ನಡ ಸಿನಿಮಾ ಪ್ರತಿಷ್ಟಿತ ಬೂಸಾನ್ ಮತ್ತು ಲಂಡನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಗಿರೀಶ್ ಕಾಸರವಳ್ಳಿಯವರ ಚಿಂತನಾ ಪರಂಪರೆ ಕನ್ನಡ ಚಿತ್ರರಂಗದಲ್ಲಿ ಮುಂದುವರಿಯುವ  ಭರವಸೆ ನಟೇಶ್ ಹೆಗಡೆ ಅವರಿಂದ ಮತ್ತೆ ಚಿಗುರೊಡೆದಿದೆ. ಕನ್ನಡಿಗರು ಸಂಭ್ರಮಿಸಬೇಕಾದ ಈ ಹೊತ್ತಿನಲ್ಲಿ ನಟೇಶ್ ಅವರ ಸಂದರ್ಶನ.