ರಾಮ ಮಂದಿರ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಖಾನ್ ಬಳಿ ಕ್ಷಮೆ ಕೇಳಿದ್ದೆ; ಹಿಂದೂವಾಗಿ ನನಗೆ ಅಸಹ್ಯವಾಗಿತ್ತು: ನಟಿ ಸ್ವರಾ ಭಾಸ್ಕರ್
ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಪು ಪ್ರಕಟವಾದ ನಂತರ, ಆಮೀರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ತಮ್ಮ ಮುಸ್ಲಿಂ ಸ್ನೇಹಿತರಲ್ಲಿ 'ಕ್ಷಮೆ ಕೇಳಿದ್ದಾಗಿ' ನಟಿ ಸ್ವರಾ ಭಾಸ್ಕರ್ ಅವರು ತಿಳಿಸಿದ್ದಾರೆ.

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಸುಪ್ರೀಂ ಕೋರ್ಟ್‌ನ 2019ರ ಅಯೋಧ್ಯೆಯ ರಾಮ ಮಂದಿರ ತೀರ್ಪಿನ ನಂತರ ತಮಗೆ 'ತೀವ್ರ ಮುಜುಗರ' ಉಂಟಾಗಿತ್ತು ಎಂದು ಹೇಳಿದ್ದಾರೆ.
ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಪು ಪ್ರಕಟವಾದ ನಂತರ, ಆಮೀರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ತಮ್ಮ ಮುಸ್ಲಿಂ ಸ್ನೇಹಿತರಲ್ಲಿ 'ಕ್ಷಮೆ ಕೇಳಿದ್ದಾಗಿ' ನಟಿ ಸ್ವರಾ ಭಾಸ್ಕರ್ ಅವರು ತಿಳಿಸಿದ್ದಾರೆ. ಅಲ್ಲದೆ ಈ ತೀರ್ಪಿನಿಂದಾಗಿ ಹಿಂದೂವಾಗಿ ತಮಗೆ ಅಸಹ್ಯವಾಗಿತ್ತು ಎಂದು ಹೇಳಿದ್ದಾರೆ.
‘ದಿ ಮಿಡ್‌ನೈಟ್ ಅವರ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಸ್ವರಾ ಭಾಸ್ಕರ್, ‘ರಾಮ ಜನ್ಮಭೂಮಿ ತೀರ್ಪು ಬಂದಾಗ ನನಗೆ ತುಂಬಾ ಬೇಸರವಾಗಿತ್ತು. ಈ ದೇಶ ಏನಾಗುತ್ತಿದೆ ಮತ್ತು ಇದು ಎಂತಹ ತೀರ್ಪು ಎಂದು ಆಲೋಚಿಸಿದೆ. ನ್ಯಾಯಾಲಯದ ಈ ನಿರ್ಧಾರ ಅನ್ಯಾಯದಿಂದ ಕೂಡಿದೆ ಎಂದು ನನಗೆ ಅನಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದೆ’ ಎಂದಿದ್ದಾರೆ.
ಒಬ್ಬ ಹಿಂದೂವಾಗಿ ನನಗೆ ತುಂಬಾ ಅಸಹ್ಯವೆನಿಸಿತು. ಆ ಸಮಯದಲ್ಲಿ ನಾನು ನನ್ನ ಪೋನ್ ಲಿಸ್ಟ್ನಲ್ಲಿದ್ದ ಎಲ್ಲಾ ಮುಸ್ಲಿಂ ಸ್ನೇಹಿತರಿಗೆ ಸಂದೇಶ ಕಳುಹಿಸಿ ಕ್ಷಮೆಯಾಚಿಸಿದ್ದಾಗಿ ಸ್ವರಾ ಭಾಸ್ಕರ್ ಹೇಳಿರುವ ವಿಡಿಯೋ ಈಗ ವಿವಾದದ ರೂಪ ಪಡೆದುಕೊಂಡಿದೆ.
ಶಾರುಖ್ ಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್ ಅವರಿಂದ ಹಿಡಿದು ಫಹಾದ್ ಅವರವರೆಗೂ ನನಗೆ ತಿಳಿದಿರುವ ಎಲ್ಲಾ ಮುಸ್ಲಿಮರನ್ನು ತಲುಪಲು ಬಯಸಿದೆ. ಒಬ್ಬ ಹಿಂದೂವಾಗಿ, ನಡೆಯುತ್ತಿರುವ ಘಟನೆಗೆ ನಾನು ಕ್ಷಮೆ ಕೋರುತ್ತೇನೆ, ನನಗೆ ನಾಚಿಕೆಯಾಗುತ್ತಿದೆ ಮತ್ತು ಈ ತೀರ್ಪನ್ನು ನಾನು ಒಪ್ಪುವುದಿಲ್ಲ ಎಂದು ಅವರಿಗೆ ತಿಳಿಸಲು ಬಯಸಿದ್ದೆ’ ಎಂದು ನಟಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



