ಬಾಲಿವುಡ್

ಸಾಂಪ್ರದಾಯ ಎಲ್ಲ ನಂಗೆ ಸರಿಹೊಂದಲ್ಲ, ಆ ನಟ ಸೇರಿದಂತೆ ಹಲವರ ಜೊತೆ ಪ್ರೀತಿ-ಸಂಬಂಧ: ನಟಿ Shahana Goswami ಮುಕ್ತ ಹೇಳಿಕೆ

ದೀರ್ಘಕಾಲದ ಬಾಂಧವ್ಯ ಮತ್ತು ಸಂಪರ್ಕದ ಭಾವನೆ ನಮ್ಮೊಂದಿಗಿರುತ್ತದೆ. ಕೆಲವೊಮ್ಮೆ ಅದು ಕೇವಲ ಸ್ನೇಹವಾಗಿರುತ್ತದೆ, ಕೆಲವೊಮ್ಮೆ ದೈಹಿಕವಾಗಿಯೂ ಇರಬಹುದು. ಅದನ್ನು ಯಾವುದೋ ದಿಕ್ಕಿಗೆ ತಿರುಗಿಸುವ ಅಗತ್ಯವಿಲ್ಲ.

ಸಾಂಪ್ರದಾಯ ಎಲ್ಲ ನಂಗೆ ಸರಿಹೊಂದಲ್ಲ, ಆ ನಟ ಸೇರಿದಂತೆ ಹಲವರ ಜೊತೆ ಪ್ರೀತಿ-ಸಂಬಂಧ: ನಟಿ Shahana Goswami ಮುಕ್ತ ಹೇಳಿಕೆ
ನಟಿ ಶಹನಾ ಗೋಸ್ವಾಮಿ
Published On :

ಮುಂಬೈ: ಸಾಂಪ್ರದಾಯಿಕ ಸಂಬಂಧಗಳು ತಮಗೆ ಎಂದಿಗೂ ಸರಿಹೊಂದುವುದಿಲ್ಲ, ಆ ಬಾಲಿವುಡ್ ನಟ ಸೇರಿದಂತೆ ಹಲವರ ಜೊತೆ ಪ್ರೀತಿ-ಸಂಬಂಧ ಹೊಂದಿದ್ದೆ ಎಂದು ಬಾಲಿವುಡ್ ನಟಿ ಶಹನಾ ಗೋಸ್ವಾಮಿ (Shahana Goswami) ಹೇಳಿದ್ದಾರೆ.

ಖ್ಯಾತ ನಿರೂಪಕ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ ನಟಿ ಶಹನಾ ಗೋಸ್ವಾಮಿ, ಏಕಕಾಲದಲ್ಲಿ ಹಲವು ಮಂದಿ ಸಂಗಾತಿಗಳು ಇದ್ದಾರೆ ಎಂದು ಹೇಳಿದ್ದಾರೆ.

'ತಾವು ಈಗ ಓಪನ್ ರಿಲೇಶನ್‌ಶಿಪ್​ನಲ್ಲಿ (Open Relationship) ಇರುವುದಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಹಲವು ಸಂಗಾತಿಗಳು ಇದ್ದಾರೆ' ಎಂದು ಶಹನಾ ಗೋಸ್ವಾಮಿ ಹೇಳಿದ್ದಾರೆ.

ಸಾಂಪ್ರದಾಯ ಎಲ್ಲ ನಂಗೆ ಸರಿಹೊಂದಲ್ಲ

ಸಾಂಪ್ರದಾಯಿಕ ಸಂಬಂಧಗಳು ತಮಗೆ ಎಂದಿಗೂ ಸರಿಹೊಂದುವುದಿಲ್ಲ. ಏಕೆಂದರೆ ನಾನು ಪ್ರೀತಿ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಎರಡನ್ನೂ ಸಮಾನವಾಗಿ ನಂಬುತ್ತೇನೆ. ಇದರರ್ಥ ನಮ್ಮ ಸಂಗಾತಿಯೊಂದಿಗೆ ಮುಕ್ತ ಮತ್ತು ಪ್ರಾಮಾಣಿಕವಾದ ಸಂವಹನವನ್ನು ಹೊಂದುವುದು.

ಸದ್ಯಕ್ಕೆ ನನ್ನ ಜೀವನದಲ್ಲಿ ಒಬ್ಬನೇ ಪ್ರಮುಖ ಸಂಗಾತಿ ಅಂತ ಯಾರೂ ಇಲ್ಲ. ನನ್ನೊಂದಿಗೆ ದೀರ್ಘಕಾಲದ ಒಡನಾಟ ಹೊಂದಿರುವ ಹಲವು ಜನರಿದ್ದಾರೆ. ಆದರೆ ಅವುಗಳಲ್ಲಿ ಯಾವುದೂ ಸಾಮಾನ್ಯ ಅಲ್ಲ. ಪ್ರತಿಯೊಂದು ಸಂಬಂಧವೂ ನನಗೆ ಮುಖ್ಯವಾದದ್ದು’ ಎಂದು ಶಹನಾ ಹೇಳಿದ್ದಾರೆ.

ಬಾಲಿವುಡ್ ನಟನೊಂದಿಗೆ ಸಂಬಂಧ

ಈ ಹಿಂದೆ ನಟ ಮಿಲಿಂದ್ ಸೋಮನ್ ಜೊತೆಗಿನ ಬ್ರೇಕಪ್ ನೆನಪಿಸಿಕೊಂಡ ಅವರು, ಆ ಬಳಿಕ ತಮಗೆ ಸಾಂಪ್ರದಾಯಿಕ ಸಂಬಂಧದ ಸೂತ್ರಗಳು ಅರ್ಥಹೀನ ಎನಿಸಿದವು ಎಂದು ಶಹನಾ, ತದನಂತರ ತಾವು ರೆಸ್ಟೋರೆಂಟ್ ಉದ್ಯಮಿ ಮೌರೊ ಗಾಜಿ ಅವರನ್ನು ಭೇಟಿಯಾದಾಗ, ಯಾವುದೇ ಕಟ್ಟುನಿಟ್ಟಾದ ನಿಯಮಗಳು ಅಥವಾ ಲೇಬಲ್‌ಗಳಿಲ್ಲದ ಮುಕ್ತ ಸಂಬಂಧವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾಗಿ ತಿಳಿಸಿದರು.

ಬ್ರೇಕಪ್ ಏಕೆ?

2013ರಲ್ಲಿ ನಮ್ಮ ಸಂಬಂಧ ಅಂತ್ಯವಾಯಿತು. ಇದು ಕೇವಲ ಸಮಯದ ಪ್ರಶ್ನೆಯಾಗಿತ್ತು. ಕೊನೆಯ ಕ್ಷಣದವರೆಗೂ ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು. ಆದರೆ ಅಂತಿಮವಾಗಿ ಸಂಬಂಧದಿಂದ ಇಬ್ಬರೂ ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದೇವೆ ಎಂಬುದು ಅವರಿಗೆ ಅರಿವಾಯಿತು. ಹೀಗಾಗಿ ಬೇರ್ಪಟ್ಟೆವು ಎಂದು ಶಹನಾ ಹೇಳಿದ್ದಾರೆ.

'ನಾವು ಹೇಗೆ ಹಲವು ಸ್ನೇಹಿತರನ್ನು ಹೊಂದಿರುತ್ತೇವೆಯೋ ಮತ್ತು ಪ್ರತಿಯೊಬ್ಬ ಸ್ನೇಹಿತನೊಂದಿಗೂ ವಿಭಿನ್ನ ಒಡನಾಟ ಇರುತ್ತದೆಯೋ ಇದೂ ಹಾಗೆಯೇ. ನನಗೆ ಈ ಹಂತದಲ್ಲಿ ಮುಕ್ತತೆ ಎಂದರೆ ಯಾರೊಂದಿಗೂ ನಿರ್ದಿಷ್ಟವಾದ ಗಟ್ಟಿ ಪಾಲುದಾರಿಕೆ ಇಲ್ಲದಿರುವುದು. ಆದರೆ ದೀರ್ಘಕಾಲದ ಬಾಂಧವ್ಯ ಮತ್ತು ಸಂಪರ್ಕದ ಭಾವನೆ ನಮ್ಮೊಂದಿಗಿರುತ್ತದೆ. ಕೆಲವೊಮ್ಮೆ ಅದು ಕೇವಲ ಸ್ನೇಹವಾಗಿರುತ್ತದೆ, ಕೆಲವೊಮ್ಮೆ ದೈಹಿಕವಾಗಿಯೂ ಇರಬಹುದು. ಅದನ್ನು ಯಾವುದೋ ಒಂದು ನಿರ್ದಿಷ್ಟ ದಿಕ್ಕಿಗೆ ತಿರುಗಿಸುವ ಅಗತ್ಯವಿಲ್ಲ’ ಎಂದು ಹೇಳಿದರು.

‘ನನ್ನಲ್ಲಿ ನೀಡಲು ಅಪಾರವಾದ ಪ್ರೀತಿ ಇರುವಾಗ, ನಾನು ಅದನ್ನು ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಏಕೆ ಸೀಮಿತಗೊಳಿಸಬೇಕು?’ ಎಂದು ಶಹನಾ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಜೀವನದಲ್ಲಿ ಯಾವುದೂ ರಹಸ್ಯವಾಗಿಲ್ಲ ಮತ್ತು ತಾವು ಇತರ ಸಂಗಾತಿಗಳೊಂದಿಗೆ ಆತ್ಮೀಯವಾಗಿರುವುದರ ಬಗ್ಗೆ ತಮ್ಮ ಎಲ್ಲ ಪಾರ್ಟ್‌ನರ್‌ಗಳಿಗೂ ತಿಳಿದಿದೆ ಎಂದು ಹೇಳಿದ್ದಾರೆ.

ಯಾರು ಈ ನಟಿ ಶಹನಾ ಗೋಸ್ವಾಮಿ?

ಶಹಾನಾ ಗೋಸ್ವಾಮಿ ಭಾರತೀಯ ನಟಿಯಾಗಿದ್ದು, ಹಿಂದಿ ಚಿತ್ರರಂಗ, ಸ್ವತಂತ್ರ (ಇಂಡಿಪೆಂಡೆಂಟ್) ಸಿನಿಮಾಗಳು ಹಾಗೂ ಅಂತರರಾಷ್ಟ್ರೀಯ ನಿರ್ಮಾಣಗಳಲ್ಲಿ ತಮ್ಮ ಅಭಿನಯದ ಮೂಲಕ ಗುರುತಿಸಿಕೊಂಡಿದ್ದಾರೆ. 2008ರಲ್ಲಿ ಬಿಡುಗಡೆಯಾದ ರಾಕ್ ಆನ್!! ಚಿತ್ರದಲ್ಲಿ ಡೆಬ್ಬಿ ಪಾತ್ರದ ಮೂಲಕ ಅವರು ವ್ಯಾಪಕ ಖ್ಯಾತಿ ಗಳಿಸಿದರು. ಈ ಪಾತ್ರಕ್ಕಾಗಿ ಅವರಿಗೆ ವಿಮರ್ಶಕರಿಂದ ಮೆಚ್ಚುಗೆ ದೊರೆತಿದ್ದು, ಫಿಲ್ಮ್‌ಫೇರ್ ಕ್ರಿಟಿಕ್ಸ್ ಪ್ರಶಸ್ತಿಯನ್ನೂ ಪಡೆದಿದ್ದರು. ಉಳಿದಂತೆ ಅವರು ಫಿರಾಕ್, ಮಿಡ್‌ನೈಟ್ಸ್ ಚಿಲ್ಡ್ರನ್, ಜ್ವಿಗಾಟೊ, ಸಂತೋಷ್, ಎ ಸ್ಯೂಟೆಬಲ್ ಬಾಯ್, ಬಾಂಬೆ ಬೇಗಮ್ಸ್ ಚಿತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.