ಬಾಲಿವುಡ್

ಶಾಟ್ ಮುಗಿದರೂ ನಟ ಮಾತ್ರ ಬಿಡದೇ ನನ್ನ ತುಟಿಗೆ ಚುಂಬಿಸುತ್ತಲೇ ಇದ್ದ: Munnabhai MBBS ನಟಿ ಶಾಕಿಂಗ್ ಹೇಳಿಕೆ!

ಬಾಲಿವುಡ್ ನಟಿ ಪ್ರಿಯಾ ಬಾಪಟ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ, ಚುಂಬನ ದೃಶ್ಯದ ಚಿತ್ರೀಕರಣದ ಸಮಯದಲ್ಲಿ, ನಾಯಕನಟ ಪದೇ ಪದೇ ತನಗೆ ಮುತ್ತಿಕ್ಕುತ್ತಿದ್ದ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಶಾಟ್ ಮುಗಿದರೂ ನಟ ಮಾತ್ರ ಬಿಡದೇ ನನ್ನ ತುಟಿಗೆ ಚುಂಬಿಸುತ್ತಲೇ ಇದ್ದ: Munnabhai MBBS ನಟಿ ಶಾಕಿಂಗ್ ಹೇಳಿಕೆ!
ಪ್ರಿಯಾ ಬಾಪಟ್
Published On :

ಬಾಲಿವುಡ್ ನಟಿ ಪ್ರಿಯಾ ಬಾಪಟ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ, ಚುಂಬನ ದೃಶ್ಯದ ಚಿತ್ರೀಕರಣದ ಸಮಯದಲ್ಲಿ, ನಾಯಕನಟ ಪದೇ ಪದೇ ತನಗೆ ಮುತ್ತಿಕ್ಕುತ್ತಿದ್ದ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಪ್ರಿಯಾ ಬಾಪಟ್ ಮರಾಠಿ ಚಲನಚಿತ್ರೋದ್ಯಮದಲ್ಲಿ ಪ್ರಸಿದ್ಧ ಹೆಸರು. ಅವರು ಹಿಂದಿ ಚಲನಚಿತ್ರೋದ್ಯಮದಲ್ಲಿಯೂ ತನ್ನನ್ನು ತಾನು ಸ್ಥಾಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಟಿ ಪ್ರಿಯಾ ಬಾಪಟ್ ಇತ್ತೀಚೆಗೆ ತಮ್ಮ ಆರಂಭಿಕ ಚಿತ್ರವೊಂದರಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ. ಮುತ್ತಿನ ದೃಶ್ಯದಿಂದ ತಾನೂ ಅನುಭವಿಸಿದ ಹಿಂಸೆಯನ್ನು ಬಹಿರಂಗಪಡಿಸಿದ್ದಾರೆ. ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾ, ಚಿತ್ರದಲ್ಲಿ ಒಂದೇ ಒಂದು ಚುಂಬನ ದೃಶ್ಯವಿತ್ತು. ಸ್ಕ್ರಿಪ್ಟ್ ಓದಿದ ನಂತರ ನನಗೆ ಅದರ ಬಗ್ಗೆ ಅನುಮಾನವಿತ್ತು. ಆ ದೃಶ್ಯ ಏಕೆ ಅಗತ್ಯ ಎಂದು ನಾನು ನಿರ್ದೇಶಕರನ್ನು ಕೇಳುತ್ತಲೇ ಇದ್ದೆ. ನನ್ನ ಪ್ರಶ್ನೆ ಚುಂಬಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಅಲ್ಲ, ಆದರೆ ಕಥೆಯಲ್ಲಿ ಅದನ್ನು ಹೇಗೆ ಸೂಕ್ತ ಎಂಬುದರ ಬಗ್ಗೆ. ನಿರ್ದೇಶಕರು ಈ ದೃಶ್ಯದ ಬಗ್ಗೆ ತುಂಬಾ ಒತ್ತಾಯ ಮಾಡುತ್ತಿದ್ದರು. ಕೊನೆಗೆ, ನಾನು ಇಡೀ ಚಿತ್ರದಲ್ಲಿ ಒಂದೇ ಒಂದು ಮುತ್ತಿಗೆ ಮಾತ್ರ ಒಪ್ಪಿಕೊಂಡಿದ್ದೆ ಎಂದು ಹೇಳಿದರು.

ಹಾಡಿನ ಚಿತ್ರೀಕರಣದ ಸಮಯದಲ್ಲಿ ಶಾಟ್ ಮುಗಿದರೂ ನಟ ಪದೇ ಪದೇ ನನಗೆ ಚುಂಬಿಸಲೇ ಇದ್ದ. ಆ ಸಮಯದಲ್ಲಿ ನನಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ ಎಂದು ಪ್ರಿಯಾ ಹೇಳಿದರು. ನಾವು ಒಂದೇ ಹೋಟೆಲ್‌ನಲ್ಲಿ ತಂಗಿದ್ದೆವು, ನಮಗೆ ಪ್ರತ್ಯೇಕ ಕೊಠಡಿಗಳಿದ್ದರೂ, ನಟ ಮಾತ್ರ ನನಗೆ ಸಂದೇಶ ಕಳುಹಿಸುತ್ತಲೇ ಇದ್ದರು. ನನ್ನನ್ನು ಊಟ ಮತ್ತು ಉಪಾಹಾರಕ್ಕೆ ಆಹ್ವಾನಿಸುತ್ತಿದ್ದರು. ನಾನು ನಿರಾಕರಿಸುತ್ತಲೇ ಇದ್ದೆ. ಇದು ನನಗೆ ಹಿಂದೆಂದೂ ಸಂಭವಿಸಿರಲಿಲ್ಲ ಎಂದು ಹೇಳಿದರು.

'ಮುನ್ನಾಭಾಯಿ ಎಂಬಿಬಿಎಸ್' ನಲ್ಲಿ ನಟಿಸಿದ್ದ ಪ್ರಿಯಾ

ಪ್ರಿಯಾ ಬಾಪಟ್ ಮರಾಠಿ ಸಿನಿಮಾ ಮತ್ತು ಒಟಿಟಿಯಲ್ಲಿ ಪ್ರಸಿದ್ಧ ನಟಿ. ಅವರು ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 'ಡಾ. ಬಾಬಾಸಾಹೇಬ್ ಅಂಬೇಡ್ಕರ್' ಮತ್ತು 'ಮುನ್ನಾಭಾಯಿ ಎಂಬಿಬಿಎಸ್' ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡರು. ಮೀ ಶಿವಾಜಿರಾಜೇ ಭೋಸಲೆ ಬೋಲ್ಟೋಯ್!' ಎಂಬ ಮರಾಠಿ ಚಿತ್ರದ ಮೂಲಕ ಅವರು ಮನ್ನಣೆ ಗಳಿಸಿದರು. ಅವರು 2011ರಲ್ಲಿ ನಟ ಉಮೇಶ್ ಕಾಮತ್ ಅವರನ್ನು ವಿವಾಹವಾದರು. ಈ ನಟಿ ಎರಡು ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.