'Gen Z.. how do I become you? ಬಾಲಿವುಡ್ ನಟ ಸೋನು ಸೂದ್ ಪೋಸ್ಟ್ ವೈರಲ್! ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್, ಕಾಮೆಂಟ್!
ಈ Gen Z ಗಳ ಪ್ರಭಾವ ಕುರಿತು ಬಾಲಿವುಡ್ ನಟ ಸೋನು ಸೂದ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ವೊಂದು ಸಖತ್ ವೈರಲ್ ಆಗಿದೆ.

ನವದೆಹಲಿ: ದೇಶದಲ್ಲಿ 'ಚಳವಳಿಗಳ ಕಾಲ ಮುಗಿಯಿತು' ಅಂದುಕೊಳ್ಳುತ್ತಿದ್ದಾಗಲೇ Gen Z ಹೋರಾಟಕ್ಕೆ ಕೇಂದ್ರ ಸರ್ಕಾರ ಬೆಚ್ಚಿ ಬಿದ್ದಿದೆ.
ನೀಟ್ ಪರೀಕ್ಷೆಯಲ್ಲಿ ಅಕ್ರಮದ ವಿರುದ್ಧ ವಿದ್ಯಾರ್ಥಿಗಳು ಹಾಗೂ ಯುವ ಜನತೆಗೆ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವಲ್ಲಿ ಸಕ್ಸಸ್ ಆಗಿದೆ.
ಈ Gen Z ಗಳ ಪ್ರಭಾವ ಕುರಿತು ಬಾಲಿವುಡ್ ನಟ ಸೋನು ಸೂದ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ವೊಂದು ಸಖತ್ ವೈರಲ್ ಆಗಿದೆ.
('Gen Z...how) ಜೆನ್ -ಝೀ ನಾನು ನೀನಾಗುವುದು ಹೇಗೆ?" ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಬಳಕೆದಾರರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಹಾಸ್ಯಮಯ ಕಾಮೆಂಟ್, ಮೀಮ್‌ಗಳೊಂದಿಗೆ ಪ್ರತಿಕ್ರಿಯಿಸುವುದರೊಂದಿಗೆ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್, ಕಾಮೆಂಟ್ ಬಂದಿವೆ.
ಕೆಲವರು ತಮಾಷೆಯಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಗಂಟೆಗಟ್ಟಲೆ ಸ್ಕ್ರೋಲ್ ಮಾಡಬೇಕೆಂದು ಸೂಚಿಸಿದರೆ, ಮತ್ತೆ ಕೆಲವರು ನಿಮ್ಮ ತಲೆಯನ್ನು ಗೋಡೆಯ ಮೇಲೆ 500 ಬಾರಿ ಹೊಡೆಯಿರಿ" ಎಂದು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



