"ಗೌರಿ ಹಿಂದೂ ಅಲ್ಲವೇ ಅಲ್ಲ", ಫತ್ವಾ-ಟ್ರೋಲ್‌ಗಳಿಗೆ ಹೆದರಲ್ಲ: ಕೊನೆಗೂ ಮೌನ ಮುರಿದ ಆಮೀರ್ ಖಾನ್..!
"ನನ್ನ ಪತ್ನಿ ಗೌರಿ ಹಿಂದೂ ಅಲ್ಲ, ಆಕೆ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವಳು" ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮುಂಬೈ: ತೀವ್ರ ಕುತೂಹಲ ಮತ್ತು ವಿವಾದಕ್ಕೆ ಕಾರಣವಾಗಿದ್ದ ತಮ್ಮ ಮೂರನೇ ಮದುವೆಯ ಕುರಿತು ಬಾಲಿವುಡ್ ನಟ ಅಮೀರ್ ಖಾನ್ (Aamir Khan) ಕೊನೆಗೂ ಮೌನ ಮುರಿದಿದ್ದಾರೆ.
ಗೌರಿ ಸ್ಪ್ರಾಟ್ (Gauri Spratt) ಅವರನ್ನು ವಿವಾಹವಾದ ಬೆನ್ನಲ್ಲೇ ಅವರ ವಿರುದ್ಧ ಕೇಳಿಬಂದಿದ್ದ 'ಲವ್ ಜಿಹಾದ್' ಆರೋಪಗಳನ್ನು ನಟ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
"ನನ್ನ ಪತ್ನಿ ಗೌರಿ ಹಿಂದೂ ಅಲ್ಲ, ಆಕೆ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವಳು" ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
"ನನ್ನ ಮೊದಲ ಪತ್ನಿ ರೀನಾ ದತ್ತಾ ಆಗಲಿ, ಎರಡನೇ ಪತ್ನಿ ಕಿರಣ್ ರಾವ್ ಆಗಲಿ ಅಥವಾ ಈಗಿನ ಪತ್ನಿ ಗೌರಿ ಆಗಲಿ, ಯಾರೂ ತಮ್ಮ ಧರ್ಮವನ್ನು ಬದಲಾಯಿಸಿಲ್ಲ. ನಮ್ಮ ಮದುವೆಗಳೆಲ್ಲವೂ ಕಾನೂನುಬದ್ಧವಾಗಿ ನೋಂದಾಯಿಸಲ್ಪಟ್ಟ ನಾಗರಿಕ ವಿವಾಹಗಳಾಗಿವೆ (Civil Marriages)" ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಗೌರಿ ಅವರನ್ನು ಹಿಂದೂ ಎಂದು ಬಿಂಬಿಸಲಾಗುತ್ತಿದೆ. ಆದರೆ, ಸತ್ಯ ಏನೆಂದರೆ ಆಕೆ ಧಾರ್ಮಿಕ ಆಚರಣೆಗಳನ್ನು ಅಷ್ಟಾಗಿ ಪಾಲಿಸದ ಒಂದು ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದಾಕೆ" ಎಂದು ಹೇಳಿದ್ದಾರೆ.
ನಮ್ಮ ಕುಟುಂಬವು ಎಲ್ಲ ಧರ್ಮದವರನ್ನು ಮುಕ್ತವಾಗಿ ಒಪ್ಪಿಕೊಳ್ಳುವ ವಿಶಾಲ ಮನೋಭಾವ ಹೊಂದಿದೆ. ನನ್ನ ಇಬ್ಬರು ಸಹೋದರಿಯರು ಮತ್ತು ನನ್ನ ಮಗಳು ಇರಾ ಖಾನ್ ಹಿಂದೂಗಳನ್ನು ವಿವಾಹವಾಗಿದ್ದಾರೆ. ನನ್ನ ಸೋದರಸಂಬಂಧಿ ಮನ್ಸೂರ್ ಖಾನ್ ಕ್ರಿಶ್ಚಿಯನ್ ಮಹಿಳೆಯನ್ನು ವರಿಸಿದ್ದಾರೆ. ನಮ್ಮ ಮನೆಯಲ್ಲಿ ಎಲ್ಲ ಧರ್ಮದವರೂ ಒಂದಾಗಿ ಬಾಳುತ್ತಿದ್ದಾರೆ" ಎಂದು ಕುಟುಂಬದ ವೈವಿಧ್ಯತೆಯನ್ನು ಒತ್ತಿ ಹೇಳಿದ್ದಾರೆ.
ಜುಲೈ 5 ರಂದು ಮುಂಬೈನ ಪಾಲಿ ಹಿಲ್ಸ್‌ನಲ್ಲಿರುವ ಅಮೀರ್ ಖಾನ್ ನಿವಾಸದಲ್ಲಿ ಗೌರಿ ಸ್ಪ್ರಾಟ್ ಜೊತೆ ವಿಶೇಷ ವಿವಾಹ ಕಾಯ್ದೆಯಡಿ (Special Marriage Act) ಸರಳವಾಗಿ ಮದುವೆ ನಡೆದಿತ್ತು.
ಈ ಮದುವೆಯ ಬೆನ್ನಲ್ಲೇ ಹಿಂದೂ ಸಂಘಟನೆಗಳು ಮತ್ತು ರಾಜಕೀಯ ನಾಯಕರು ಅಮೀರ್ ಖಾನ್ ಅವರನ್ನು 'ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್' ಎಂದು ಟ್ರೋಲ್ ಮಾಡಲು ಆರಂಭಿಸಿದ್ದರು.
ಮತ್ತೊಂದೆಡೆ, ಮುಸ್ಲಿಂ ವೈಯಕ್ತಿಕ ಕಾನೂನು ದಾರುಲ್ ಇಫ್ತಾದ ಮುಖ್ಯಸ್ಥ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಅವರು, "ಮುಸ್ಲಿಂ ಪುರುಷನು ಮುಸ್ಲಿಮೇತರ ಮಹಿಳೆಯನ್ನು ವಿವಾಹವಾಗುವುದು ಶರಿಯತ್ ನಿಯಮಗಳಿಗೆ ವಿರುದ್ಧ" ಎಂದು ಅಮೀರ್ ಖಾನ್ ವಿರುದ್ಧ ಧಾರ್ಮಿಕ ಫತ್ವಾ ಹೊರಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



