'Pagal Kar Dete Ho.. Hat Na'.. ಅದು ಬೇಬಿ ಬಂಪ್ ಅಲ್ಲ, ಪಿಜ್ಜಾ ಬಂಪ್: 3ನೇ ಬಾರಿ ಗರ್ಭಿಣಿ ವದಂತಿಗೆ ನಟಿ ಕರೀನಾ ಕಪೂರ್ ತೆರೆ!
ಕರೀನಾ ಮತ್ತು ಅವರ ಪತಿ ಸೈಫ್ ಅಲಿ ಖಾನ್ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಭಾರಿ ಚರ್ಚೆಗೆ ಕಾರಣವಾಗಿದ್ದವು. ಆದರೆ, ಕರೀನಾ ಅವರ ತಂಡ ಈಗಾಗಲೇ ನಟಿ ಗರ್ಭಿಣಿಯಲ್ಲ.

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ತಮ್ಮ ಬಗ್ಗೆ ಹರಿದಾಡುತ್ತಿರುವ ಮೂರನೇ ಗರ್ಭಧಾರಣೆಯ ವದಂತಿಗೆ ತಮಾಷೆಯ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ವದಂತಿಗಳಿಗೆ ಪ್ರತಿಕ್ರಿಯಿಸಿರುವ ಕರೀನಾ, ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ದೊಡ್ಡ ಹೊಟ್ಟೆಯಿರುವ ವ್ಯಕ್ತಿಯೊಬ್ಬರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ “ಹಟ್ ನಾ ಬೇ” ಎಂದು ಬರೆದು ನಗು ಹಾಗೂ ಪಿಜ್ಜಾ ಎಮೋಜಿಗಳನ್ನು ಹಾಕಿದ್ದಾರೆ.
ಮೂರನೇ ಮಗುವಿನ ಗರ್ಭಧಾರಣೆ ಕುರಿತ ವದಂತಿಗಳು ಹರಡಿದ ಬಳಿಕ ಕರೀನಾ ಮೊದಲ ಬಾರಿಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
ಹಳದಿ ಬಣ್ಣದ ಶರ್ಟ್, ಬ್ಯಾಗಿ ಜೀನ್ಸ್ ಹಾಗೂ ಕಪ್ಪು ಸನ್‌ಗ್ಲಾಸ್ ಧರಿಸಿದ್ದ ಅವರು ಕಾರಿನಲ್ಲಿ ಕುಳಿತು ಪಾಪರಾಜಿಗಳಿಗೆ ನಗುತ್ತಾ ಪ್ರತಿಕ್ರಿಯಿಸಿದ್ದಾರೆ.
ಪಾಪರಾಜಿಗಳತ್ತ ನೋಡಿ “ಪಾಗಲ್ ಕರ್ದೇತೇ ಹೋ ತುಮ್ಲೋಗ್” (ನೀವೆಲ್ಲಾ ಹುಚ್ಚರನ್ನಾಗಿ ಮಾಡಿಬಿಡುತ್ತೀರಿ) ಎಂದು ಕರೀನಾ ತಮಾಷೆಯಾಗಿ ಹೇಳಿದ್ದಾರೆ.
ಕರೀನಾ ಮತ್ತು ಅವರ ಪತಿ ಸೈಫ್ ಅಲಿ ಖಾನ್ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಭಾರಿ ಚರ್ಚೆಗೆ ಕಾರಣವಾಗಿದ್ದವು. ಆದರೆ, ಕರೀನಾ ಅವರ ತಂಡ ಈಗಾಗಲೇ ನಟಿ ಗರ್ಭಿಣಿಯಲ್ಲ ಎಂದು ಸ್ಪಷ್ಟಪಡಿಸಿತ್ತು.
ಕರೀನಾ ಜಿಮ್‌ನಿಂದ ಹೊರಬರುತ್ತಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ವದಂತಿ ಆರಂಭವಾಗಿತ್ತು. ವಿಡಿಯೊದಲ್ಲಿ ಕ್ಯಾಮೆರಾ ಅವರ ಹೊಟ್ಟೆಯತ್ತ ತಿರುಗಿದ್ದರಿಂದ ಕೆಲವರು ಅದನ್ನು ‘ಬೇಬಿ ಬಂಪ್’ ಎಂದು ಭಾವಿಸಿದ್ದರು. ಪಾಪರಾಜಿಗಳಿಂದ ಅವರನ್ನು ಕೊಡೆಯ ಮೂಲಕ ಮರೆಮಾಡಲು ತಂಡದ ಸದಸ್ಯರೊಬ್ಬರು ಪ್ರಯತ್ನಿಸಿದ್ದು ಕೂಡ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.
ಈ ನಡುವೆ ವದಂತಿಗಳ ಕುರಿತು ಪ್ರತಿಕ್ರಿಯೆ ನೀಡಿದ್ದ ಕರೀನಾ ಅವರ ಅತ್ತಿಗೆ ಸಬಾ ಪಟೌಡಿ, ಕರೀನಾ ಅವರ ಫೋಟೋದಲ್ಲಿದ್ದ ಹೊಟ್ಟೆಯು ಕ್ಯಾಮೆರಾದ ಕೆಟ್ಟ ಆಂಗಲ್‌ನಿಂದ ಹಾಗೆ ಕಾಣಿಸಿಕೊಂಡಿದೆ ಎಂದು ಹೇಳಿದ್ದರು.
“ಕೆಟ್ಟ ಆಂಗಲ್... ! ಇದನ್ನು ನೋಡಿ ಎಲ್ಲರೂ ಹೇಗೆ ಮತ್ತೊಂದು ತೀರ್ಮಾನಕ್ಕೆ ಬರುತ್ತಾರೆ? ಅವರು ವಿಮಾನ ನಿಲ್ದಾಣದಿಂದ ಹೊರಬರುವಾಗ ಸ್ಟೈಲಿಶ್, ಕ್ಲಾಸಿ ಹಾಗೂ ಸ್ಲಿಮ್ ಆಗಿದ್ದರು. ಇಂದು ಜಿಮ್‌ನಿಂದ ಹೊರಬಂದಿದ್ದಾರೆ, ಅಷ್ಟೇ” ಎಂದು ತಿಳಿಸಿದ್ದರು.
ಅಲ್ಲದೆ, ಕರೀನಾ ಮತ್ತೊಂದು ಮಗುವನ್ನು ಹೊಂದಬೇಕು ಎಂದು ನಾನು ಮನವೊಲಿಸುತ್ತಿದ್ದೇನೆ. ಅದು ನಿಜವಾಗಿದ್ದರೆ ಚೆನ್ನಾಗಿರುತ್ತಿತ್ತು. ಇದನ್ನು ಹೇಳಿದ್ದಕ್ಕೆ ಅವಳು ನನ್ನನ್ನು ಕೊಲ್ಲುತ್ತಾಳೆ!” ಎಂದು ತಮಾಷೆ ಮಾಡಿದ್ದರು.
ಇದೇ ವೇಳೆ ವೈಯಕ್ತಿಕ ವಿಚಾರಗಳನ್ನು ಗೌರವಿಸಬೇಕು ಹಾಗೂ ಯಾವುದೇ ಊಹಾಪೋಹ ಅಗತ್ಯವಿಲ್ಲ ಎಂದೂ ಅವರು ಮನವಿ ಮಾಡಿದ್ದರು.
ಕರೀನಾ ಮತ್ತು ಸೈಫ್ ಅಲಿ ಖಾನ್ ಅವರಿಗೆ ಈಗಾಗಲೇ ತೈಮೂರ್ ಹಾಗೂ ಜೇಹ್ ಎಂಬ ಇಬ್ಬರು ಪುತ್ರರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



