ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ ಕಿರುತೆರೆ ನಟಿ ಅದಿತಿ ಶರ್ಮಾ
ದಂಪತಿ ನವೆಂಬರ್ 12, 2024 ರಂದು ತಮ್ಮ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾದರು. ಅದಕ್ಕೂ ಮುನ್ನ, 2024ರ ಸೆಪ್ಟೆಂಬರ್‌ನಲ್ಲಿ ಗೋರೆಗಾಂವ್ ವೆಸ್ಟ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು.
'ಅಪೊಲೆನಾ - ಸಪ್ನೋ ಕಿ ಉಂಚಿ ಉಡಾನ್', 'ರಬ್ ಸೆ ಹೈ ದುವಾ' ಮತ್ತು 'ಕಲೀರೇನ್' ಮುಂತಾದ ಧಾರಾವಾಹಿಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಕಿರುತೆರೆ ನಟಿ ಅದಿತಿ ಶರ್ಮಾ, ಮುಂಬೈನಲ್ಲಿ ತಮ್ಮ ಪತಿ ಮತ್ತು ಅವರ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ.
ಜುಲೈ 31 ರಂದು ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಪತಿ ಅಭಿನೀತ್ ವಿದ್ಯಾನಂದ್ ಕೌಶಿಕ್, ಅತ್ತೆ ಊರ್ಮಿಳಾ ಕೌಶಿಕ್ (65) ಮತ್ತು ನಾದಿನಿ ಕೀರ್ತಿ ಕೌಶಿಕ್ (29) ಅವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಈ ಆರೋಪಗಳ ಕುರಿತು ಪೊಲೀಸರು ಸದ್ಯ ತನಿಖೆ ಆರಂಭಿಸಿದ್ದಾರೆ.
ತಮ್ಮ ದೂರಿನಲ್ಲಿ, ಅದಿತಿ ಅವರು ಆ ಮೂವರು ವ್ಯಕ್ತಿಗಳ ವಿರುದ್ಧ ದೈಹಿಕ ಹಾಗೂ ಮಾನಸಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಹಲ್ಲೆ, ನಿಂದನೆ, ತಮ್ಮ ಚಾರಿತ್ರ್ಯ ವಧೆ ಮತ್ತು ತಮ್ಮ 'ಮದುವೆಯ ಒಡವೆಗಳನ್ನು' ದುರುಪಯೋಗಪಡಿಸಿಕೊಳ್ಳುವುದು ಮುಂತಾದ ಆರೋಪಗಳನ್ನು ಮಾಡಿದ್ದಾರೆ.
ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, 2021ರ ಜೂನ್‌ನಲ್ಲಿ ಆನ್‌ಲೈನ್ ನಟನಾ ತರಗತಿಯೊಂದರ ವೇಳೆ ತಾವು ಮೊದಲ ಬಾರಿಗೆ ಅಭಿನೀತ್ ಅವರನ್ನು ಭೇಟಿಯಾದೆ. ಸ್ನೇಹವು ಕ್ರಮೇಣ ಪ್ರೀತಿಯಾಗಿ ಬದಲಾಯಿತು ಎಂದು ನಟಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ದಂಪತಿ ನವೆಂಬರ್ 12, 2024 ರಂದು ತಮ್ಮ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾದರು. ಅದಕ್ಕೂ ಮುನ್ನ, 2024ರ ಸೆಪ್ಟೆಂಬರ್‌ನಲ್ಲಿ ಗೋರೆಗಾಂವ್ ವೆಸ್ಟ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು.
ದೂರಿನ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಪತಿಯ ವರ್ತನೆ ಬದಲಾಯಿತು. ತಮ್ಮ ಉಡುಪು ಮತ್ತು ಇತರ ಸಣ್ಣಪುಟ್ಟ ವಿಷಯಗಳ ಕುರಿತು ಆಗಾಗ್ಗೆ ವಾಗ್ವಾದಗಳು ನಡೆಯುತ್ತಿದ್ದವು. ಅಲ್ಲದೆ, ಮನೆಯ ಖರ್ಚು-ವೆಚ್ಚಗಳಿಗೆ ಹಣ ನೀಡುವ ಬದಲು, ತನ್ನ ಪತಿ ನಿಯಮಿತವಾಗಿ ತನ್ನಿಂದಲೇ ಹಣ ಪಡೆಯುತ್ತಿದ್ದರು ಎಂದು ಅದಿತಿ ಆರೋಪಿಸಿದ್ದಾರೆ.
ಜನವರಿ 1, 2025 ರಂದು ಕಾಫಿ ವಿಷಯವಾಗಿ ನಡೆದ ವಾಗ್ವಾದವು ನಿಂದನೆಗೆ ತಿರುಗಿತು. ಈ ಘಟನೆಯ ನಂತರ, ತನ್ನ ಪತಿ ತನ್ನ ನಡತೆಯ ಬಗ್ಗೆ ಸಂಶಯ ಪಡಲಾರಂಭಿಸಿದರು, ತನಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದರು. ಆಗಾಗ್ಗೆ ತನ್ನ ಮೊಬೈಲ್ ಫೋನ್ ಪರಿಶೀಲಿಸುತ್ತಿದ್ದರು ಮತ್ತು ಅಂತಿಮವಾಗಿ ಪ್ರತ್ಯೇಕ ಕೊಠಡಿಯಲ್ಲಿ ಮಲಗಲಾರಂಭಿಸಿದರು ಎಂದು ಅದಿತಿ ಆರೋಪಿಸಿದ್ದಾರೆ.
ತನ್ನ ಪೋಷಕರೊಂದಿಗೆ ಮಾತನಾಡದಂತೆಯೂ ತನ್ನನ್ನು ತಡೆಯಲಾಗಿತ್ತು ಎಂದೂ ಅವರು ಹೇಳಿಕೊಂಡರು.
ಅತ್ತೆ ತನ್ನ ಆಭರಣಗಳಾದ ಚಿನ್ನದ ಸರಗಳು, ಉಂಗುರಗಳು, ವಜ್ರದ ಉಂಗುರ, ಮಂಗಳಸೂತ್ರ ಮತ್ತು ಬಳೆಗಳನ್ನು ಅವರ ಬಳಿಯೇ ಇಟ್ಟುಕೊಂಡಿದ್ದಾರೆ. ಪದೇ ಪದೆ ವಿನಂತಿಸಿದರೂ ಆಭರಣಗಳನ್ನು ಹಿಂತಿರುಗಿಸಲಿಲ್ಲ. ತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನಗಳ ಸಂದರ್ಭದಲ್ಲಿ ತಮ್ಮ ಅತ್ತೆ ಮತ್ತು ನಾದಿನಿ ನನ್ನ ಪತಿಯ ಪರವಾಗಿ ನಿಂತರು ಹಾಗೂ ತನಗೆ ಕಿರುಕುಳ ನೀಡುವುದನ್ನು ಮುಂದುವರಿಸಿದರು ಎಂದು ಅವರು ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ, ಗೋರೆಗಾಂವ್ ಪೊಲೀಸರು ಅವರ ಪತಿ, ಅತ್ತೆ ಮತ್ತು ನಾದಿನಿಯ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


