Housefull 5: ಅಕ್ಷಯ್ ಕುಮಾರ್ ನಟನೆಯ 'ಹೌಸ್‌ಫುಲ್ 5' ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ಗಳಿಸಿದ್ದೆಷ್ಟು?
ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲ್ಪಟ್ಟ ಈ ಚಿತ್ರವನ್ನು "ದೋಸ್ತಾನಾ" ಖ್ಯಾತಿಯ ತರುಣ್ ಮನ್ಸುಖಾನಿ ನಿರ್ದೇಶಿಸಿದ್ದಾರೆ.

ನವದೆಹಲಿ: ಅಕ್ಷಯ್ ಕುಮಾರ್, ನಾನಾ ಪಾಟೇಕರ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಇತರರು ನಟಿಸಿರುವ "ಹೌಸ್‌ಫುಲ್ 5" ಚಿತ್ರವು ಮೊದಲ ವಾರಾಂತ್ಯದಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 91.83 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಚಿತ್ರತಂಡ ಸೋಮವಾರ ಘೋಷಿಸಿದೆ.
ಸಾಜಿದ್ ನಾಡಿಯಾಡ್‌ವಾಲಾ ಅವರ ನಿರ್ಮಾಣ ಸಂಸ್ಥೆಯಾದ ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲ್ಪಟ್ಟ ಈ ಚಿತ್ರವನ್ನು "ದೋಸ್ತಾನಾ" ಖ್ಯಾತಿಯ ತರುಣ್ ಮನ್ಸುಖಾನಿ ನಿರ್ದೇಶಿಸಿದ್ದಾರೆ.
ಜೂನ್ 6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಸೋನಮ್ ಬಾಜ್ವಾ, ನರ್ಗಿಸ್ ಫಕ್ರಿ, ಸೌಂದರ್ಯ ಶರ್ಮಾ, ಜಾಕಿ ಶ್ರಾಫ್, ರಿತೇಶ್ ದೇಶ್‌ಮುಖ್, ಫರ್ದೀನ್ ಖಾನ್ ಮತ್ತು ಸಂಜಯ್ ದತ್ ಅವರನ್ನೂ ಒಳಗೊಂಡಿದೆ.
ಈ ಕುರಿತು ನಿರ್ಮಾಣ ಸಂಸ್ಥೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 'ನಗು, ಪ್ರೀತಿ ಮತ್ತು ಹೌಸ್‌ಫುಲ್ ಪರದೆಗಳಿಂದ ತುಂಬಿದ ವಾರಾಂತ್ಯ! 3ನೇ ದಿನವನ್ನು ತುಂಬಾ ವಿಶೇಷವಾಗಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಕಾರಣದಿಂದಾಗಿ ನಮ್ಮ ಹೃದಯಗಳು ತುಂಬಿವೆ. ಹೌಸ್‌ಫುಲ್ 5 ಚಿತ್ರಮಂದಿರಗಳಲ್ಲಿ ಲಭ್ಯ! ನಿಮ್ಮ ಟಿಕೆಟ್‌ಗಳನ್ನು ಇಂದೇ ಬುಕ್ ಮಾಡಿ' ಎಂದು ಬರೆದಿದೆ.
'ಹೌಸ್‌ಫುಲ್ 5' ಚಿತ್ರವು ಬಿಡುಗಡೆಯಾದ ಮೊದಲ ದಿನ 24.35 ಕೋಟಿ ರೂ. ಗಳಿಸಿತು ಮತ್ತು ಮರುದಿನ 32.38 ಕೋಟಿ ರೂ. ಗಳಿಕೆ ಕಂಡಿತು. ಮೂರನೇ ದಿನ 35.10 ಕೋಟಿ ರೂ. ಗಳಿಕೆ ಕಂಡಿದೆ.
2010 ರಲ್ಲಿ ತೆರೆಕಂಡಿದ್ದ 'ಹೌಸ್‌ಫುಲ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದು ಫ್ರಾಂಚೈಸಿಯ ಐದನೇ ಚಿತ್ರವಾಗಿದೆ. ನಂತರ, ಕ್ರಮವಾಗಿ 2012, 2016 ಮತ್ತು 2019 ರಲ್ಲಿ ಹೌಸ್‌ಫುಲ್ ಹೆಸರಿನಲ್ಲಿಯೇ ಚಿತ್ರಗಳು ಬಿಡುಗಡೆಯಾಗಿದ್ದವು.

ಹೌಸ್‌ಫುಲ್ 5 ಚಿತ್ರದ ಟ್ರೈಲರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


