ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ನಟಿ ಗೆಹನಾ ವಸಿಷ್ಠ ದೂರು
ನಂತರ ಅನುರಾಗ್ ಕಶ್ಯಪ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದರು. ತಮ್ಮ ಹೇಳಿಕೆಗಳಿಗೆ ಬದ್ಧರಾಗಿದ್ದು, ಆ ಸಂದರ್ಭದಲ್ಲಿ ಹೇಳಿದ ಒಂದು ನಿರ್ದಿಷ್ಟ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು.

ಮುಂಬೈ: ಬ್ರಾಹ್ಮಣ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ನಟಿ ಗೆಹನಾ ವಸಿಷ್ಠ ದೂರು ದಾಖಲಿಸಿದ್ದಾರೆ.
ಕಶ್ಯಪ್ ಅವರ ಹೇಳಿಕೆಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ ನಟಿ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ, ಕಶ್ಯಪ್ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ ಅವರು, ಅವಹೇಳನಕಾರಿ ಮತ್ತು ಅನುಚಿತ ಎಂದು ಕರೆದಿದ್ದು, ಟೀಕೆಗೆ ಅವರು ಬಳಸಿರುವ ಪದಗಳು ಮತ್ತು ಬ್ರಾಹ್ಮಣ ಸಮುದಾಯದ ಬಗ್ಗೆ ಅಗೌರವ ತೋರಿದ್ದಾರೆ. ಕಶ್ಯಪ್ ಅವರ ಹೇಳಿಕೆಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಟೀಕಿಸಿದ್ದಾರೆ.
ಅನುರಾಗ್ ಕಶ್ಯಪ್ ಅವರ 'ಫುಲೆ' ಚಿತ್ರವು ಬ್ರಾಹ್ಮಣರನ್ನು ನಕಾರಾತ್ಮಕ ರೀತಿಯಲ್ಲಿ ಚಿತ್ರಿಸಿದೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದಿಂದ ಆಕ್ಷೇಪಣೆಗಳು ವ್ಯಕ್ತವಾದ ನಂತರ, ಈ ಟೀಕೆಗಳಿಗೆ ಪ್ರತಿಯಾಗಿ ಅನುರಾಗ್ ಕಶ್ಯಪ್ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಆಗ ಬಳಕೆದಾರರೊಬ್ಬರು, 'ನಿಮ್ಮ ತಂದೆ ಬ್ರಾಹ್ಮಣರು' ಎಂದು ಕಮೆಂಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅನುರಾಗ್ ಕಶ್ಯಪ್, 'ನಾನು ಬೇಕಿದ್ದರೆ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ... ಸಮಸ್ಯೆ ಏನೀಗ' ಎಂದಿದ್ದರು.
ಈ ಹೇಳಿಕೆ ನೀಡಿದ್ದಕ್ಕಾಗಿ ಬರ್ಕತ್ ನಗರ ನಿವಾಸಿ ಅನಿಲ್ ಚತುರ್ವೇದಿ ಎಂಬುವವರು ಏಪ್ರಿಲ್ 19 ರಂದು ದೂರು ದಾಖಲಿಸಿದ ನಂತರ ಜೈಪುರದ ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಅನುರಾಗ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನಂತರ ಅನುರಾಗ್ ಕಶ್ಯಪ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದರು. ತಮ್ಮ ಹೇಳಿಕೆಗಳಿಗೆ ಬದ್ಧರಾಗಿದ್ದು, ಆ ಸಂದರ್ಭದಲ್ಲಿ ಹೇಳಿದ ಒಂದು ನಿರ್ದಿಷ್ಟ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು. ಈ ವಿವಾದದಿಂದಾಗಿ ತಮ್ಮ ಕುಟುಂಬಕ್ಕೆ, ವಿಶೇಷವಾಗಿ ಮಹಿಳೆಯರಿಗೆ ಅತ್ಯಾಚಾರ ಮತ್ತು ಸಾವಿನ ಬೆದರಿಕೆಗಳು ಬರುತ್ತಿವೆ ಮತ್ತು ಟ್ರೋಲ್ ಮಾಡುವವರು ಕಿರುಕುಳ ನೀಡುವುದನ್ನು ನಿಲ್ಲಿಸುವಂತೆ ಕರೆ ನೀಡಿದರು.
'ನಾನು ಕ್ಷಮೆ ಕೇಳುತ್ತಿದ್ದೇನೆ. ನನ್ನ ಪೋಸ್ಟ್ಗಾಗಿ ಅಲ್ಲ, ಬದಲಿಗೆ ತಪ್ಪಾಗಿ ಅರ್ಥೈಸಿದ ಒಂದು ಸಾಲಿಗಾಗಿ ಮತ್ತು ಹರಡುತ್ತಿರುವ ದ್ವೇಷಕ್ಕಾಗಿ ಕ್ಷಮೆಯಾಚಿಸುತ್ತಿದ್ದೇನೆ. ಮಗಳು, ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಸಂಸ್ಕಾರದ ಕಿಂಗ್ಪಿನ್ಗಳಿಂದ ಅತ್ಯಾಚಾರ ಮತ್ತು ಜೀವ ಬೆದರಿಕೆಗಳು ಬರುವಾಗ ಬೇರೆ ಯಾವುದೇ ಕ್ರಿಯೆ ಅಥವಾ ಭಾಷಣವು ಪ್ರಮುಖವಲ್ಲ. ಹೀಗಾಗಿ, ಕ್ಷಮೆ ಕೇಳುತ್ತಿದ್ದೇನೆ ಎಂದು ಕಶ್ಯಪ್ ಹೇಳಿದ್ದಾರೆ.
ಜನರು ತಮ್ಮ ಮೇಲೆ ನಿಂದನೆ ಮಾಡಲು ಸ್ವತಂತ್ರರಾಗಿದ್ದರೂ, ಅವರ ಕುಟುಂಬವನ್ನು ಈ ವಿಷಯದಲ್ಲಿ ಎಳೆದು ತರಬಾರದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




