ಶಾರುಖ್ ಖಾನ್ 'ಸಿನಿಮಾದ ದೇವರು': ಜವಾನ್ ಸಿನಿಮಾವನ್ನು ಹೊಗಳಿದ ಕಂಗನಾ ರಣಾವತ್!
ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರ ಸಂಚಲನ ಮೂಡಿಸಿದೆ. ಸೆಪ್ಟೆಂಬರ್ 7ರಂದು ಬಿಡುಗಡೆಯಾದ ತಕ್ಷಣ ಅಟ್ಲಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಿದೆ. ವಿಮರ್ಶಕರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ಶಾರುಖ್ ಮತ್ತು 'ಜವಾನ್' ಅನ್ನು ಬ್ಲಾಕ್ಬಸ್ಟರ್ ಎಂದು ಹೊಗಳುತ್ತಿದ್ದಾರೆ.

ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರ ಸಂಚಲನ ಮೂಡಿಸಿದೆ. ಸೆಪ್ಟೆಂಬರ್ 7ರಂದು ಬಿಡುಗಡೆಯಾದ ತಕ್ಷಣ ಅಟ್ಲಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಿದೆ. ವಿಮರ್ಶಕರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ಶಾರುಖ್ ಮತ್ತು 'ಜವಾನ್' ಅನ್ನು ಬ್ಲಾಕ್ಬಸ್ಟರ್ ಎಂದು ಹೊಗಳುತ್ತಿದ್ದಾರೆ.
ಇದೀಗ ಈ ಅಭಿಮಾನಿಗಳಲ್ಲಿ ಕಂಗನಾ ರಣಾವತ್ ಹೆಸರೂ ಸೇರಿಕೊಂಡಿದೆ. ಮೊದಲ ದಿನ 'ಜವಾನ್' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಕಂಗನಾ ಅಚ್ಚರಿಗೊಂಡಿದ್ದಾರೆ. ಶಾರುಖ್ ಖಾನ್ ಅವರನ್ನು 'ಸಿನಿಮಾ ದೇವರು' ಎಂದು ಕರೆದ ಅವರು, ದೇಶಕ್ಕೆ ಅಂತಹ ದೇವರು ಬೇಕು ಎಂದು ಹೇಳಿದರು.
ಕಂಗನಾ ರಣಾವತ್ ಅವರು ಜವಾನ್ ಮತ್ತು ಶಾರುಖ್ ಖಾನ್ ಅವರನ್ನು ಹೊಗಳಿ Instagram ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಚಿತ್ರದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕಂಗನಾ 'ಜವಾನ್' ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಮತ್ತು ಚಿತ್ರಕ್ಕಾಗಿ ದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ.
ಶಾರುಖ್ ಹೋರಾಟವನ್ನು ಕಂಗನಾ ಶ್ಲಾಘನೆ
'90 ದಶಕದ ಲವರ್ ಬಾಯ್ ಆಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು. ನಂತರ ಶಾರುಖ್ ಖಾನ್ ಒಂದು ದಶಕದ ಕಾಲ ಸಾಕಷ್ಟು ಹೋರಾಟ ನಡೆಸಿದರು. ಪ್ರೇಕ್ಷಕರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಶ್ರಮಿಸಿದರು. ಮತ್ತು ಈಗ ಅವರು ತಮ್ಮ 50ರ ದಶಕದಲ್ಲಿ ಜನರ ಮಾಸ್ ಸೂಪರ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಇದು ನಿಜ ಜೀವನದಲ್ಲಿ ಸೂಪರ್ ಹೀರೋ ಕಥೆಗಿಂತ ಕಡಿಮೆಯಿಲ್ಲ. ಜನರು ಆತನನ್ನು ನಿರ್ಲಕ್ಷಿಸಿ, ಗೇಲಿ ಮಾಡಿದ ಸಮಯಗಳು ನನಗೆ ನೆನಪಿದೆ, ಆದರೆ ಅವರ ಹೋರಾಟವು ಸುದೀರ್ಘ ವೃತ್ತಿಜೀವನವನ್ನು ಆನಂದಿಸುವ ಎಲ್ಲಾ ನಟರಿಗೆ ಆದರ್ಶವಾಗಿದೆ. ಅವರು ಹೇಗೆ ನಿಲ್ಲಬೇಕು ಮತ್ತು ಮತ್ತೊಮ್ಮೆ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಬೇಕೆಂದು ನೋಡಿ ಕಲಿಯಬೇಕು ಎಂದು ಕಂಗನಾ ಬರೆದುಕೊಂಡಿದ್ದಾರೆ.
'ಜವಾನ್' ಮೊದಲ ದಿನ ಗಳಿಸಿದ್ದೇಷ್ಟು?
'ಜವಾನ್' ಸೆಪ್ಟೆಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್ ಅಂಕಿಅಂಶಗಳ ಪ್ರಕಾರ, ಚಿತ್ರವು ಮೊದಲ ದಿನದಲ್ಲಿ 73-75 ಕೋಟಿ ರೂಪಾಯಿಗಳ ನಿವ್ವಳ ಕಲೆಕ್ಷನ್ ಅನ್ನು ಸಂಗ್ರಹಿಸಬಹುದು. ಹಿಂದಿ ಭಾಷೆಯಿಂದ 65 ಕೋಟಿ ಗಳಿಸುವ ನಿರೀಕ್ಷೆ ಇದೆ. ಅದೇ ಸಮಯದಲ್ಲಿ ತಮಿಳು ಮತ್ತು ತೆಲುಗು ಭಾಷೆಗಳಿಂದ 5-5 ಕೋಟಿ ರೂ. ಗಳಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


