ಬಾಕ್ಸ್ ಆಫೀಸ್ ನಲ್ಲಿ ಜವಾನ್ ದಾಖಲೆ ಗಳಿಕೆ: ಪಠಾಣ್, ಕೆಜಿಎಫ್ 2 ದಾಖಲೆ ಪತನ
ನಟ ಶಾರುಖ್ ಖಾನ್ ಮತ್ತು ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಜೋಡಿಯ ಜವಾನ್ ಚಿತ್ರ ಬಿಡುಗಡೆಯಾಗಿ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದು, ದಾಖಲೆಯ ಗಳಿಕೆ ಕಂಡಿದೆ.

ಮುಂಬೈ: ನಟ ಶಾರುಖ್ ಖಾನ್ ಮತ್ತು ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಜೋಡಿಯ ಜವಾನ್ ಚಿತ್ರ ಬಿಡುಗಡೆಯಾಗಿ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದು, ದಾಖಲೆಯ ಗಳಿಕೆ ಕಂಡಿದೆ.
ಹೌದು.. ತಮಿಳು ಸಿನಿಮಾ (Cinema) ಡೈರೆಕ್ಟರ್ ಅಟ್ಲಿ (Atlee) ನಿರ್ದೇಶನದ ಮೊದಲ ಬಾಲಿವುಡ್ ಸಿನಿಮಾ (Bollywood Movie) ಜವಾನ್ (Jawan) ಬಾಕ್ಸ್ ಆಫೀಸ್ (Box Office Collection) ಕೊಳ್ಳೆ ಹೊಡೆಯುತ್ತಿದ್ದು, ಜವಾನ್ ಸಿನಿಮಾ ಬಾಲಿವುಡ್ನಲ್ಲಿ ಆಲ್ ಟೈಮ್ ಬಿಗ್ಗೆಸ್ಟ್ ಓಪನರ್ ಎಂಬ ಕೀರ್ತಿಗೆ ಭಾಜನವಾಗಿದೆ. ಹಿಂದಿಯಲ್ಲಿ ಮೊದಲ ದಿನ ಸಿನಿಮಾ ಈ ರೀತಿ ದಾಖಲೆ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.
ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಜವಾನ್ ಚಿತ್ರ ಮೊದಲ ದಿನ ಭರ್ಜರಿ 65 ಕೋಟಿ ಕಲೆಕ್ಷನ್ ಮಾಡಿದ್ದು, ಆ ಮೂಲಕ ಇಲ್ಲಿಯವರೆಗೆ ಹಿಂದಿ ಚಿತ್ರರಂಗದಲ್ಲಿ ಮೊದಲ ದಿನ ಅತ್ಯಧಿಕ ಗಳಿಕೆ ಕಂಡ ಮೊದಲ ಸಿನಿಮಾ ಎಂಬ ಜವಾನ್ ಪಾತ್ರವಾಗಿದೆ. ಅಂತೆಯೇ ಭಾರತದಾದ್ಯಂತ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಗಳಿಸಿದ ಮೊತ್ತ 75 ಕೋಟಿ ರೂಗಳಾಗಿದ್ದು, ಹಿಂದಿಯಲ್ಲಿ ಮೊದಲ ದಿನ 65 ಕೋಟಿ, ತಮಿಳಿನಲ್ಲಿ 5 ಕೋಟಿ ಹಾಗೂ ತೆಲುಗಿನಲ್ಲಿ 5 ಕೋಟಿ ಗಳಿಸಿದೆ.
ಜವಾನ್ ಮೊದಲ ದಿನದ ಗಳಿಕೆ ಕುರಿತು ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಜವಾನ್ ಮೊದಲ ದಿನವೇ ಭರ್ಜರಿ ಸಿಕ್ಸರ್ ಹೊಡೆದಿದ್ದು, ಬಾಲ್ ಕ್ರೀಡಾಂಗಣದ ಹೊರಗೆ ಹಾರಿದೆ. ಭಾರತದಲ್ಲಿ ಎಲ್ಲಾ ಹಿಂದಿನ ದಾಖಲೆಗಳ ಮುರಿದು ಬಿಗ್ಜೆಸ್ಟ್ ಓಪನರ್ [ಹಿಂದಿ ಚಲನಚಿತ್ರಗಳು] ಎನಿಸಿಕೊಂಡಿದೆ ಎಂದು ಹೇಳಿದ್ದಾರೆ.
ಅಂತೆಯೇ ಜವಾನ್ ಹಿಂದಿಯಲ್ಲಿ ಮೊದಲ ದಿನ 65.50 ಕೋಟಿ ರೂ ಗಳಿಸಿದ್ದು, ಇದು ಶಾರುಖ್ ರ ಈ ಹಿಂದಿನ ಚಿತ್ರ ಪಠಾಣ್ ಗಿಂತ ಶೇ.19.09 ರಷ್ಟು ಎಂದು ಹೇಳಿದ್ದಾರೆ. ಪಠಾಣ್ ಮೊದಲ ದಿನ 55 ಕೋಟಿ ರೂ ಗಳಿಸಿದ್ದರೆ, ಕನ್ನಡದ ಕೆಜಿಎಫ್2 ಹಿಂದಿ ಭಾಷೆಯಲ್ಲಿ 53.95 ಕೋಟಿ ರೂ ಗಳಿಸಿತ್ತು. ಅಂತೆಯೇ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅವರ ವಾರ್ ಚಿತ್ರ 51.60 ಕೋಟಿ ರೂ ಗಳಿಸಿತ್ತು. ಇದು ಈ ವರೆಗಿನ ಹಿಂದಿಯ ಅತ್ಯಧಿಕ ಗಳಿಕೆ ಅಂಕಿ ಅಂಶವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹೈ ಆ್ಯಕ್ಷನ್ ಥ್ರಿಲ್ಲರ್ ಆಗಿ ಮೂಡಿಬಂದಿರುವ ಜವಾನ್ ಸಿನಿಮಾ ಸಮಾಜದಲ್ಲಿರುವ ಅನ್ಯಾಯಗಳನ್ನು, ತಪ್ಪುಗಳನ್ನು ತಿದ್ದಲು ಬರುವ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಸರ್ಕಾರ, ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ಆರೋಗ್ಯ ಇಲಾಖೆ, ಸೈನಿಕ ಶಸ್ತ್ರಾಸ್ತ್ರಗಳಲ್ಲಿ ತೊಂದರೆಗಳು, ವಸತಿ ಪ್ರದೇಶದ ಹತ್ತಿರದಲ್ಲಿರುವ ಅಪಾಯಕಾರಿ ಕಾರ್ಖಾನೆಗಳು ಇತ್ಯಾದಿ ವಿಚಾರಗಳತ್ತ ಚಿತ್ರ ಬೆಳಕು ಚೆಲ್ಲುತ್ತದೆ. ಸಿನಿಮಾವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಿಸಿದ್ದು ಇದನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಹಾಗೂ ಗೌರವ್ ವರ್ಮಾ ನಿರ್ಮಿಸಿದ್ದಾರೆ.
ಶಾರುಖ್ ಅವರ ಜೊತೆ ವಿಜಯ್ ಸೇತುಪತಿ, ನಯನತಾರಾ, ದೀಪಿಕಾ ಪಡುಕೋಣೆ ಕೂಡಾ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರಿಯಾ ಮಣಿ, ಸಾನ್ಯಾ ಮಲ್ಹೋತ್ರಾ, ಗಿರಿಜಾ, ಸಂಜೀತಾ ಭಟ್ಟಾಚಾರ್ಯ, ಆಲಿಯಾ ಖುರೇಷಿ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


