ನಟಿ ಪರಿಣಿತಿ ಚೋಪ್ರಾ ಜೊತೆಗೆ ರಾಘವ್ ಚಡ್ಡಾ ಡೇಟಿಂಗ್?; ಬಹಿರಂಗ ಮಾಡಿದ ಆಪ್ ಮುಖಂಡ
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಎಎಪಿ ನಾಯಕ ರಾಘವ್ ಚಡ್ಡಾ ಎಂಗೇಜ್ ಆಗಿದ್ದಾರೆ ಎಂಬ ವಿಚಾರ ಇದೀಗ ಬಾಲಿವುಡ್ ನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸ್ವತಃ ಆಪ್ ಮುಖಂಡರೊಬ್ಬರು ಈ ವಿಚಾರ ಬಹಿರಂಗಗೊಳಿಸಿದ್ದಾರೆ.

ಮುಂಬೈ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಎಎಪಿ ನಾಯಕ ರಾಘವ್ ಚಡ್ಡಾ ಎಂಗೇಜ್ ಆಗಿದ್ದಾರೆ ಎಂಬ ವಿಚಾರ ಇದೀಗ ಬಾಲಿವುಡ್ ನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸ್ವತಃ ಆಪ್ ಮುಖಂಡರೊಬ್ಬರು ಈ ವಿಚಾರ ಬಹಿರಂಗಗೊಳಿಸಿದ್ದಾರೆ.
ಮುಂಬೈನ ರೆಸ್ಟೋರೆಂಟ್ವೊಂದಕ್ಕೆ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಒಟ್ಟಿಗೆ ತೆರಳಿದ್ದರು. ಅಲ್ಲಿಂದ ಹೊರಗೆ ಬರುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಅದೇ ಫೋಟೋ ಮತ್ತು ವಿಡಿಯೋ ವೈರಲ್ ಆದ ಬಳಿಕ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಬಗ್ಗೆ ಬಾಲಿವುಡ್ ತುಂಬೆಲ್ಲಾ ಗಾಸಿಪ್ ಹರಡಿದೆ. ಈಗ ಆಮ್ ಆದ್ಮಿ ಪಕ್ಷದ ಮತ್ತೋರ್ವ ನಾಯಕ ಮಾಡಿರುವ ಟ್ವೀಟ್ನಿಂದಾಗಿ ರಾಘವ್ ಚಡ್ಡಾ-ಪರಿಣಿತಿ ಚೋಪ್ರಾ ನಡುವಿನ ಗಾಸಿಪ್ಗೆ ಮತ್ತಷ್ಟು ಪುಷ್ಠಿ ನೀಡಿದೆ.
ರಾಘವ್ ಚಡ್ಡಾ - ಪರಿಣಿತಿ ಚೋಪ್ರಾ ಎಂಗೇಜ್ ಆಗಿದ್ದಾರಾ?
ರಾಜಕಾರಣಿ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಎಂಗೇಜ್ ಆಗಿದ್ದಾರಾ? ಈ ಪ್ರಶ್ನೆಗೆ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜೀವ್ ಅರೋರಾ ಮಾಡಿರುವ ಟ್ವೀಟ್ ಇಂತಹುದೊಂದು ಪ್ರಶ್ನೆಗೆ ಕಾರಣವಾಗಿದೆ. ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಎಂಗೇಜ್ಮೆಂಟ್ ನಡೆದಿರಬಹುದಾ ಎಂಬ ಅನುಮಾನ ಅಭಿಮಾನಗಳ ಮನಸ್ಸಿನಲ್ಲಿ ಮೂಡಿದೆ.
ಇಷ್ಟಕ್ಕೂ ಆಪ್ ನಾಯಕರ ಟ್ವೀಟ್ ನಲ್ಲಿ ಏನಿದೆ?
‘’ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರ ಮಿಲನವು ಪ್ರೀತಿ, ಸಂತೋಷ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಡಲಿ. ನನ್ನ ಶುಭಾಶಯಗಳು’’ ಎಂದು ಆಮ್ ಆದ್ಮಿ ಪಕ್ಷದ ಸಂಜೀವ್ ಅರೋರಾ ಟ್ವೀಟ್ ಮಾಡಿದ್ದಾರೆ. ಸಂಜೀವ್ ಅರೋರಾ ಅವರ ಟ್ವೀಟ್ ಇದೀಗ ವೈರಲ್ ಆಗಿದ್ದು, ನೆಟ್ಟಿಗರು ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಯಾರು ರಾಘವ್ ಚಡ್ಡಾ?
2022 ರಲ್ಲಿ, ತಮ್ಮ 33ನೇ ವಯಸ್ಸಿನಲ್ಲಿ, ರಾಘವ್ ಚಡ್ಡಾ ಅವರು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಪಂಜಾಬ್ ರಾಜ್ಯವನ್ನು ಪ್ರತಿನಿಧಿಸುವ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಲಂಡನ್ನಲ್ಲಿ ನಡೆದ ಸಮಾರಂಭದಲ್ಲಿ ರಾಘವ್ ಚಡ್ಡಾ ಅವರಿಗೆ ‘ಇಂಡಿಯಾ ಯುಕೆ ಔಟ್ಸ್ಟ್ಯಾಂಡಿಂಗ್ ಅಚೀವರ್ಸ್ ಹಾನರ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪರಿಣಿತಿ ಚೋಪ್ರಾ
2010 ರಿಂದ ಬಾಲಿವುಡ್ನಲ್ಲಿ ಸಕ್ರಿಯರಾಗಿರುವ ಪರಿಣಿತಿ ಚೋಪ್ರಾ, ‘ಲೇಡೀಸ್ ವರ್ಸಸ್ ರಿಕ್ಕಿ ಬಾಹ್ಲ್’, ‘ಇಶಕ್ಝಾದೆ’, ‘ಶುದ್ಧ್ ದೇಸಿ ರೊಮ್ಯಾನ್ಸ್’, ‘ಹಸೀ ತೊ ಫಸೀ’, ‘ದಾವತ್ ಎ ಇಶ್ಕ್’, ‘ನಮಸ್ತೆ ಇಂಗ್ಲೆಂಡ್’, ‘ಕೇಸರಿ’, ‘ಸೈನಾ’ ಮುಂತಾದ ಸಿನಿಮಾಗಳಲ್ಲಿ ಪರಿಣಿತಿ ಚೋಪ್ರಾ ಅಭಿನಯಿಸಿದ್ದಾರೆ. ಸದ್ಯ ಪರಿಣಿತಿ ಚೋಪ್ರಾ ಕೈಯಲ್ಲಿ ಎರಡು ಸಿನಿಮಾಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


