ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಬಾಜ್ ಖಾನ್
ಬಾಲಿವುಡ್ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ನಟ ಅರ್ಬಾಜ್ ಖಾನ್ ಅವರು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರೊಂದಿಗೆ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮುಂಬೈ: ಬಾಲಿವುಡ್ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ನಟ ಅರ್ಬಾಜ್ ಖಾನ್ ಅವರು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರೊಂದಿಗೆ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುಂಬೈನಲ್ಲಿರುವ ತಮ್ಮ ಸಹೋದರಿ ಅರ್ಪಿತಾ ಖಾನ್ ಅವರ ನಿವಾಸದಲ್ಲಿ ಶುರಾ ಖಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಹಾಹ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ಅರ್ಬಾಜ್ ಖಾನ್ ತಮ್ಮ ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ, 'ಪ್ರೀತಿ ಪಾತ್ರರ ಸಮ್ಮುಖದಲ್ಲಿ ನಾನು ಮತ್ತು ನನ್ನವಳು ಈ ದಿನದಿಂದ ಜೊತೆಯಾಗಿ ಪ್ರೀತಿಯ ಜೀವನವನ್ನು ಪ್ರಾರಂಭಿಸುತ್ತಿದ್ದೇವೆ', ನಮ್ಮ ವಿಶೇಷ ದಿನದಂದು ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳು ಬೇಕು. ಎಂದು ಬರೆದುಕೊಂಡಿದ್ದಾರೆ.
ಅರ್ಬಾಜ್ ಖಾನ್ ಹೂವಿನ ಚಿತ್ರ ಬಿಡಿಸಿರುವ ಬೀಚ್ ಬಣ್ಣದ ಬಂಧ್ಗಾಲ ಉಡುಪನ್ನು ಧರಿಸಿದ್ದು, ವಧು ಶುರಾ ಖಾನ್ ಹಗುರವಾದ ಪೀಚ್ ಲೆಹೆಂಗಾದಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು.
ಇನ್ನು ಅರ್ಬಾಜ್ ಖಾನ್ ಅವರ ಮೊದಲ ಪತ್ನಿ ಮಲೈಕಾ ಅರೋರಾ ಮತ್ತು ಅವರ ಮಗ ಅರ್ಹಾನ್ ಖಾನ್ ಕಪ್ಪು ಸೂಟ್‌ನಲ್ಲಿ ಕಂಗೊಳಿಸುತ್ತಿದ್ದರು.
ಹಾಗೇ ಅರ್ಬಾಜ್ ಖಾನ್ ಪೋಷಕರಾದ ಸಲೀಂ ಮತ್ತು ಸಲ್ಮಾ ಖಾನ್, ಹೆಲೆನ್, ಸಹೋದರರಾದ ಸಲ್ಮಾನ್ ಖಾನ್ ಮತ್ತು ಸೊಹೈಲ್ ಖಾನ್ ಅವರ ಪುತ್ರರಾದ ನಿರ್ವಾನ್ ಮತ್ತು ಯೋಹಾನ್ ಮತ್ತು ಸಹೋದರಿ ಅಲ್ವಿರಾ ಖಾನ್ ಮದುವೆ ಮುಂಚಿತವಾಗಿ ಅರ್ಪಿತಾ ಅವರ ಮನೆಗೆ ಆಗಮಿಸಿದ್ದರು. ಜತೆಗೆ ರವೀನಾ ಟಂಡನ್ ಮತ್ತು ಅವರ ಪುತ್ರಿ ರಶಾ ಥಡಾನಿ, ರಿದ್ಧಿಮಾ ಪಂಡಿತ್, ಮತ್ತು ರಿತೇಶ್ ದೇಶ್ಮುಖ್ ಮತ್ತು ಅವರ ಪತ್ನಿ ಜೆನಿಲಿಯಾ ದೇಶಮುಖ್ ಸಹ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


