ಐಶ್ವರ್ಯಾ ರೈ ನಟನೆಯ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್-1' ಮೋಷನ್ ಪೋಸ್ಟರ್ ಬಿಡುಗಡೆ
ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್-1' ನ ಮೊದಲ ಮೋಷನ್ ಪೋಸ್ಟರ್ ನ್ನು ಅನಾವರಣಗೊಳಿಸಲಾಗಿದೆ.

ನವದೆಹಲಿ: ಖ್ಯಾತ ನಿರ್ದೇಶಕ ಮಣಿರತ್ನಂ (Director Maniratnam) ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್01' ನ ಮೊದಲ ಮೋಷನ್ ಪೋಸ್ಟರ್ ನ್ನು ಅನಾವರಣಗೊಳಿಸಲಾಗಿದೆ.
ಚಿತ್ರ ನಿರ್ಮಾಣ ಸಂಸ್ಥೆ 'ಲೈಕಾ ಪ್ರೊಡಕ್ಷನ್ಸ್' ಬಹು ನಿರೀಕ್ಷಿತ ಚಿತ್ರದ ಮೋಷನ್ ಪೋಸ್ಟರ್ ನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. "ನೋಡಿ! ನೀವೇ ಧೈರ್ಯ ಮಾಡಿ. ಸಾಹಸಕ್ಕೆ ಸಿದ್ಧರಾಗಿ. ಚೋಳರು ಬರುತ್ತಿದ್ದಾರೆ! #PS1 # ಮಣಿರತ್ನಂ" "ಚೋಳರು ಬರುತ್ತಿದ್ದಾರೆ" ಪೋಸ್ಟರ್ನಲ್ಲಿ ಕೇಸರಿ ಧ್ವಜವನ್ನು ಹಿಡಿದಿರುವುದನ್ನು ಕಾಣಬಹುದು.
ಮಣಿರತ್ನಂ ನಿರ್ದೇಶನದ, 'ಪೊನ್ನಿಯಿನ್ ಸೆಲ್ವನ್' ದಕ್ಷಿಣದ ನಟರಾದ ವಿಕ್ರಮ್, ಜಯರಾಮ್ ರವಿ, ಕಾರ್ತಿ, ಐಶ್ವರ್ಯ ಲಕ್ಷ್ಮಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪ್ಯಾನ್-ಇಂಡಿಯಾ ಚಲನಚಿತ್ರವಾಗಿದೆ. ಎ.ಆರ್ ರೆಹಮಾನ್ ಸಂಗೀತವು ಚಿತ್ರಕ್ಕಿದ್ದು ಸೆಪ್ಟೆಂಬರ್ 30 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.
ಐಶ್ವರ್ಯಾ ರೈಯವರು 2010 ರಲ್ಲಿ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ 'ರಾವಣ್' ನಂತರ ದಕ್ಷಿಣ ನಟ ವಿಕ್ರಮ್ ಅವರೊಂದಿಗೆ ಎರಡನೇ ಬಾರಿ ನಟಿಸುತ್ತಿದ್ದಾರೆ. 1997 ರಲ್ಲಿ 'ಇರುವರ್', 2007 ರಲ್ಲಿ 'ಗುರು' ನಂತರ 2010 ರಲ್ಲಿ 'ರಾವಣ' ನಂತರ ಮಣಿ ರತ್ನಂ ನಿರ್ದೇಶನದಲ್ಲಿ ನಾಲ್ಕನೇ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸುತ್ತಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಚಿತ್ರದ ಮೊದಲ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


