ಅಮಿತಾಭ್ ಬಚ್ಚನ್ ಜತೆ ಅಭಿನಯ; ಅನುಭವ ಹಂಚಿಕೊಂಡಿಕೊಂಡ ರಶ್ಮಿಕಾ; ಬಿಗ್ ಬಿ ಬಗ್ಗೆ ಹೇಳಿದ್ದೇನು?
ಬಾಲಿವುಡ್ ಗೆ ಪದಾರ್ಪಣೆ ಮಾಡಿರುವ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಬಿಗ್ ಬಿ ಜೊತೆ ಅಭಿನಯಿಸಿದ ಅನುಭವ ಹಂಚಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್, ನೀನಾ ಗುಪ್ತಾ ಮತ್ತು ಪಾವೈಲ್ ಗುಲಾಟಿ ಜೊತೆ ನಟಿಸಿರುವ...

ಮುಂಬೈ: ಬಾಲಿವುಡ್ ಗೆ ಪದಾರ್ಪಣೆ ಮಾಡಿರುವ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಬಿಗ್ ಬಿ ಜೊತೆ ಅಭಿನಯಿಸಿದ ಅನುಭವ ಹಂಚಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್, ನೀನಾ ಗುಪ್ತಾ ಮತ್ತು ಪಾವೈಲ್ ಗುಲಾಟಿ ಜೊತೆ ನಟಿಸಿರುವ ಗುಡ್‌ಬೈ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಕ್ಕೆ ಸಿದ್ಧರಾಗಿರುವ ರಶ್ಮಿಕಾ ಮಂದಣ್ಣ ಅವರು ಮಂಗಳವಾರ ಮುಂಬೈನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಬಿಗ್ ಬಿ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು.
ಇತ್ತೀಚೆಗೆ ಕೋವಿಡ್ -19 ನಿಂದ ಚೇತರಿಸಿಕೊಂಡ ಬಿಗ್ ಬಿ, ಈವೆಂಟ್ ಗೆ ವೀಡಿಯೊ ಕರೆ ಮೂಲಕ ಚಿತ್ರದ ತಂಡವನ್ನು ಸೇರಿಕೊಂಡರು. ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾದದ್ದನ್ನು ನೆನಪಿಸಿಕೊಂಡ ರಶ್ಮಿಕಾ, “ನಾನು ಅವರಿಗಾಗಿ ನಿಂತು ಕಾಯುತ್ತಿದ್ದೆ. ಸರ್ ಒಳಗೆ ಬಂದರು. ನಾನು ನಗುತ್ತಾ ನಿಂತಿದ್ದೆ. ನನ್ನನ್ನು ದಾಟಿ ಮುಂದೆ ಹೋದಾಗ ನಾನು.. ಇದು ಮಾತನಾಡಲು ಸರಿಯಾದ ಸಮಯವಲ್ಲ ಎಂದುಕೊಂಡೆ. ಅವರು ಸೀನ್ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ನಾನು ಭಾವಿಸಿದೆ ಎಂದು ರಶ್ಮಿಕಾ ಹೇಳಿದರು.
ನಂತರ ನಾನು ಅವರ ಬಳಿಗೆ ಹೋಗಿ, ‘ಹಾಯ್ ಸರ್, ನಾನು ರಶ್ಮಿಕಾ ಮತ್ತು ನಾನು ನಿಮ್ಮ ಮಗಳಾಗಿ ನಟಿಸುತ್ತೇನೆ’ ಎಂದು ಹೇಳಿದೆ. ನಾನು ತುಂಬಾ ನರ್ವಸ್ ಆಗಿದ್ದೆ, ಅಂತಹ ದೊಡ್ಡ ನಟರೊಂದಿಗೆ ಕೆಲಸ ಮಾಡುವುದು ತುಂಬಾ ದೊಡ್ಡ ಜವಾಬ್ದಾರಿಯಾಗಿದೆ. ಅವರು ತುಂಬಾ ಕಟ್ಟುನಿಟ್ಟಾಗಿ ಕುಳಿತಿದ್ದರು ಮತ್ತು ನಂತರ ನಾವು ತಂದೆ ಮತ್ತು ಮಗಳಂತೆ ತಮಾಷೆ ಮಾಡಲು ಪ್ರಾರಂಭಿಸಿದ್ದೇವೆ. ಚಿತ್ರದ ತಯಾರಿಕೆಯ ಉದ್ದಕ್ಕೂ ನಮ್ಮ ಸಂಬಂಧವು ಮತ್ತಷ್ಟು ಹತ್ತಿರವಾಯಿತು. ಅವರು ಸುಂದರ ವ್ಯಕ್ತಿ, ಹಾಗಾಗಿ ನಾನು ಅವರೊಂದಿಗೆ ಕೆಲಸ ಮಾಡುವಾಗ ಅವರ ವ್ಯಕ್ತಿತ್ವ ತಿಳಿದುಕೊಂಡಿದ್ದಕೆ ತುಂಬಾ ಸಂತೋಷವಾಗಿದೆ ಎಂದು ರಶ್ಮಿಕಾ ಹೇಳಿದ್ದಾರೆ.
ವಿಕಾಸ್ ಬಹ್ಲ್ ನಿರ್ದೇಶನದ ಗುಡ್ ಬೈ ಚಿತ್ರವನ್ನ ಶೋಭಾ ಕಪೂರ್, ಏಕ್ತಾ ಕಪೂರ್, ಸರಸ್ವತಿ ಎಂಟರ್‌ಟೈನ್‌ಮೆಂಟ್, ವಿರಾಜ್ ಸಾವಂತ್ ಮತ್ತು ವಿಕಾಸ್ ಬಹ್ಲ್ ಸಹ-ನಿರ್ಮಾಣ ಮಾಡಿದ್ದಾರೆ, ಅಕ್ಟೋಬರ್ 7 ರಂದು ಗುಡ್ ಬೈ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


