ಬಾಲಿವುಡ್

ಮಾಧವನ್ ಮತ್ತು ಸುರ್ವೀನ್ ಕ್ಷಣಮಾತ್ರದಲ್ಲಿ ಪಾತ್ರದೊಳಕ್ಕೆ ಪರಕಾಯ ಪ್ರವೇಶ ಮಾಡುವ ಅದ್ಭುತ ಕಲಾವಿದರು: ಮನು ಜೋಸೆಫ್

ಪತ್ರಕರ್ತ, ಸಾಹಿತಿ, ಸಂಪಾದಕರೂ ಆಗಿದ್ದ ಮನು ಜೋಸೆಫ್ ಅವರ ಪುಸ್ತಕ 'ಡೀಕಪಲ್ಡ್' ಅನ್ನು ಆಧರಿಸಿದ ನೆಟ್ ಫ್ಲಿಕ್ಸ್ ಧಾರಾವಾಹಿ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾವನ್ನು ಮನು ಜೋಸೆಫ್ ಅವರೇ ನಿರ್ಮಿಸುತ್ತಿದ್ದಾರೆ.

ಮಾಧವನ್ ಮತ್ತು ಸುರ್ವೀನ್ ಕ್ಷಣಮಾತ್ರದಲ್ಲಿ ಪಾತ್ರದೊಳಕ್ಕೆ ಪರಕಾಯ ಪ್ರವೇಶ ಮಾಡುವ ಅದ್ಭುತ ಕಲಾವಿದರು: ಮನು ಜೋಸೆಫ್
ಸುರ್ವೀನ್ ಚಾವ್ಲಾ ಮತ್ತು ಮಾಧವನ್ ಜೊತೆ ಮನು ಜೋಸೆಫ್
Published On :

ಪತ್ರಕರ್ತ, ಸಾಹಿತಿ, ಸಂಪಾದಕರೂ ಆಗಿದ್ದ ಮನು ಜೋಸೆಫ್ ಅವರ ಪುಸ್ತಕ 'ಡೀಕಪಲ್ಡ್' ಅನ್ನು ಆಧರಿಸಿದ ಧಾರಾವಾಹಿ ಸರಣಿ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾವನ್ನು ಮನು ಜೋಸೆಫ್ ಅವರೇ ನಿರ್ಮಿಸುತ್ತಿದ್ದಾರೆ.

ನೆಟ್ ಫ್ಲಿಕ್ಸ್ ಒಟಿಟಿ ಪ್ಲಾಟ್ ಫಾರ್ಮ್ ಅಡಿ ನಿರ್ಮಾಣಗೊಳ್ಳುತ್ತಿರುವ ಈ ಧಾರಾವಾಹಿ ಸರಣಿಯಲ್ಲಿ ಮಾಧವನ್, ಸುರ್ವೀನ್ ಚಾವ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಶ್ರುತಿ ದೊಡ್ಡ ಸಂಸ್ಥೆಯೊಂದರ ಸಿಇಒ. ಆರ್ಯ ಸಣ್ಣಮಟ್ಟದ ಕಾದಂಬರಿಕಾರ. ಇವರ ಸಾಂಸಾರಿಕ ಜೀವನದಲ್ಲಿನ ಸಂಘರ್ಷ ಬಿರುಕುಗಳ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ. ಮಾಧವನ್ ಮತ್ತು ಸುರ್ವೀನ್ ಚಾವ್ಲಾರಂಥ ಅದ್ಭುತ ಕಲಾವಿದರು ತಮ್ಮ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಮನು ಜೋಸೆಫ್ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಪ್ರತಿ ಸೀನ್ ಚಿತ್ರೀಕರಣವಾಗುವಾಗಲೂ ಇಬ್ಬರೂ ನಟರು ಕ್ಷಣಮಾತ್ರದಲ್ಲಿ ಕಥೆಯ ಕಾಲ್ಪನಿಕ ಲೋಕದೊಳಗೆ ಪ್ರವೇಶ ಮಾಡುತ್ತಿದ್ದರು ಎಂದು ಮನು ಚಿತ್ರೀಕರಣದ ಅನುಭವ ಹಂಚಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.